• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಲಿಪ ನಾರಾಯಣ ಭಾಗವತರಿಗೆ ಮುದ್ದಣ ಪ್ರಶಸ್ತಿ

By Staff
|

ಮೂಡಬಿದಿರೆ: ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾಗವತ, ಪ್ರಸಂಗ ಕರ್ತೃ, ಬಲಿಪ ನಾರಾಯಣ ಭಾಗವತ ಅವರಿಗೆ ಈ ವರ್ಷದ ಕವಿ ಮುದ್ದಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಭಾಗವತಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಬಲಿಪ ಭಾಗವತರು ದೇವಿ ಒಡ್ಡೋಲಗದಲ್ಲಿ ಹಾಡುವ ‘ಚಂದ್ರಚೂಡ ಶಿವೆ.... ’ ಹಾಡನ್ನು ಕೇಳುವುದಕ್ಕೆಂದೇ ಜನ ಸೇರುತ್ತಾರೆ. ಹಳ್ಳಿಗಳಲ್ಲಿ ವಾರ್ಷಿಕ ಯಕ್ಷಗಾನ ಬಯಲಾಟ ನಡೆಸುವ ಸಂದರ್ಭದಲ್ಲಿಯೂ ಬಲಿಪರು ಭಾಗವತಿಕೆಗೆ ಬರಲಿ ಎಂದು ದಕ್ಷಿಣ ಕನ್ನಡದ ಜನ ಹಾರೈಸುವುದುಂಟು.

ಬುಧವಾರದಂದು ಮಿಜಾರು ಶೋಭಾವನದಲ್ಲಿ ನಡೆದ ಸಮಾರಂಭದಲ್ಲಿ ಬಲಿಪ ನಾರಾಯಣ ಭಾಗವತರು ಮುದ್ದಣ ಪ್ರಶಸ್ತಿ ಸ್ವೀಕರಿಸಿದರು. ಮುದ್ದಣ ಬರೆದಿರುವ ಕುಮಾರವಿಜಯದ ಬಾಪುರೇ ಕುಮಾರಾ... ಏರು ಪದ್ಯದ ಧ್ವನಿಸುರುಳಿಯ ಹಿಮ್ಮೇಳದಲ್ಲಿ ಬಲಿಪರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಅನಂತ ಕೃಷ್ಣ ಅವರು ಬಲಿಪರಿಗೆ ಶಾಲು ಹೊದೆಸಿ ಹಾರ ಅರ್ಪಿಸಿ, ಸ್ಮರಣಿಕೆ ಸಮೇತ ಕವಿ ಮುದ್ದಣ ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more