• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಲ್ಲಿ ದಳನಾಯಕರ ಕಾಡಿದ ಪ್ರತಿಕೃತಿ ಕಿಡಿ

By Staff
|

ಮೈಸೂರು: ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಅಖಿಲ ಭಾರತ ಜನತಾ ದಳದ ನಾಯಕರು ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಾಜಿ ಶಾಸಕ ವೇದಾಂತ ಹೆಮ್ಮಿಗೆ, ಮಾಜಿ ಎಂಎಲ್‌ಸಿ ಪುಟ್ಟ ಸಿದ್ಧ ಶೆಟ್ಟಿ ಸೇರಿದಂತೆ ಐವರು ಅಖಿಲ ಭಾರತ ಜನತಾ ದಳದ ನಾಯಕರು ಬೆಂಕಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದಾರೆ.

ಜನ ಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವಲ್ಲಿ ರಾಜ್ಯ ಸರಕಾರದ ವಿಫಲತೆ ಹಾಗೂ ವಿಹೆಚ್‌ಪಿ ನಾಯಕ ಪ್ರವೀಣ್‌ ಭಾಯ್‌ ತೊಗಾಡಿಯಾ ಅವರ ಕೋಮುವಾದೀ ಭಾಷಣಗಳನ್ನು ಖಂಡಿಸಿ ಜನತಾದಳದ ಪ್ರಾದೇಶಿಕ ಘಟಕ ಪ್ರತಿಕೃತಿ ದಹನ ಕಾರ್ಯಕ್ರಮವೊಂದನ್ನು ಇಲ್ಲಿನ ಮಿಶನ್‌ ಹಾಸ್ಪಿಟಲ್‌ ಸರ್ಕಲ್‌ನ ಬಳಿ ಗುರುವಾರ ಹಮ್ಮಿಕೊಂಡಿತ್ತು.

ಯುವಕನೊಬ್ಬ ಪ್ರತಿಕೃತಿಯನ್ನು ಹೊತ್ತು ಕೊಂಡಿದ್ದಾಗ ಅದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಯಿತು. ಆದರೆ ಪೆಟ್ರೋಲ್‌ ಆಸುಪಾಸಿಗೂ ಹರಡಿದ ಪರಿಣಾಮ ಬೆಂಕಿಯ ಜ್ವಾಲೆ ಇತರರತ್ತಲೂ ಹಬ್ಬಿತು. ವೇದಾಂತ ಹೆಮ್ಮಿಗೆ, ಪುಟ್ಟ ಸಿದ್ಧ ಶೆಟ್ಟಿ ಹಾಗೂ ಜನತಾದಳ ಮೈಸೂರು ಘಟಕದ ಕಾರ್ಯದರ್ಶಿ ಈರಣ್ಣ, ಪ್ರಾದೇಶಿಕ ನಾಯಕ ಕೆ. ಆರ್‌. ಮೋಹನ್‌ ಕುಮಾರ್‌ ಗೌಡ ಮತ್ತು ನಾರಾಯಣ ಅವರಿಗೆ ಬೆಂಕಿಯಿಂದಾಗಿ ಸುಟ್ಟ ಗಾಯಗಳಾಗಿವೆ.

ಈರಣ್ಣ ಅವರ ಪರಿಸ್ಥಿತಿ ತುಸು ಗಂಭೀರವಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more