• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ಝೂನ ಬೆಳ್ಳಿ ಚುಕ್ಕಿ ಮೀನ ಇನ್ನಿಲ್ಲ

By Staff
|

ಮೈಸೂರು : ಎಂಟು ವರ್ಷಗಳ ಹಿಂದೆ ಸ್ವೀಡನ್‌ನಿಂದ ತಂದಿದ್ದ ಮೈಸೂರು ಚಾಮರಾಜೇಂದ್ರ ಮೃಗಾಲಯದ ಪ್ರವಾಸಿಗರ ನೆಚ್ಚಿನ ಚಿಂಪಾಂಜಿ ಮೀನ ಬುಧವಾರ (ಫೆ.19) ಸತ್ತುಹೋದಳು. ಅವಳಿಗೆ 33 ವರ್ಷ ವಯಸ್ಸಾಗಿತ್ತು.

ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ಮೀನ ತನ್ನದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದಳು. ಸ್ಥಳೀಯರು ಎಷ್ಟೋ ಬಾರಿ ಇವಳನ್ನು ನೋಡಲೆಂದೇ ಮೃಗಾಲಯಕ್ಕೆ ಬರುತ್ತಿದ್ದುದುಂಟು.

ಕಬ್ಬಿಣದ ಜಾರುಬಾಗಿಲು ಅಕಸ್ಮಾತ್ತಾಗಿ ಮುಂಗೈ ಮೇಲೆ ಬಿದ್ದು, ಮೀನಾಗೆ ದೊಡ್ಡ ಗಾಯವಾಯಿತು. ಇದು ನಡೆದದ್ದು ಫೆಬ್ರವರಿ11ನೇ ತಾರೀಕು. ಮೃಗಾಲಯದ ವೈದ್ಯರ ಶುಶ್ರೂಷೆಯಿಂದ ಮೀನ ಚೇತರಿಸಿಕೊಳ್ಳಲಿಲ್ಲ. ಅವಳ ಮುಂಗೈ ಗಾಯ ಗ್ಯಾಂಗ್ರೀನ್‌ಗೆ ತಿರುಗಿತ್ತು. ಹೀಗಾಗಿ ಫೆಬ್ರವರಿ 19ನೇ ತಾರೀಕು, ಬುಧವಾರ ಬೆಂಗಳೂರಿನ ಪ್ರಾಣಿ ವೈದ್ಯರಾದ ವಸಂತ್‌ ಶೆಟ್ಟಿ, ಎಂ.ಎಂ.ಬಾಬು ಹಾಗೂ ರವಿ ಮೀನಾಳ ಗ್ಯಾಂಗ್ರೀನ್‌ ತಗುಲಿದ್ದ ಕೈಯನ್ನು ಕತ್ತರಿಸಬೇಕಾಯಿತು. ಆದರೆ, ಅಷ್ಟು ಹೊತ್ತಿಗೆ ಸೋಂಕು ಮೀನಾಳ ದೇಹದ ಇತರೆ ಭಾಗಗಳಿಗೂ ತಗುಲಿತ್ತು. ವೈದ್ಯರ ಶತಾಯಗತಾಯ ಯತ್ನದ ನಂತರವೂ ಅವಳು ಬದುಕುಳಿಯಲಿಲ್ಲ.

ಮೃಗಾಲಯದಲ್ಲಿ ಮೀನಾಳನ್ನು ಹೊರತುಪಡಿಸಿ ಇನ್ನೂ 5 ಚಿಂಪಾಂಜಿಗಳಿವೆ. ಈ ಪೈಕಿ ಮೂರು ಹೆಣ್ಣು. ಇವುಗಳಲ್ಲಿ ಯಾವುದಕ್ಕೂ ಸ್ವಾಭಾವಿಕ ಸಂತಾನ ಶಕ್ತಿ ಇಲ್ಲ ಎಂಬುದು ಮೃಗಾಲಯದ ಪಶು ವೈದ್ಯರ ಅಭಿಪ್ರಾಯ. ಸಂತಾನ ಶಕ್ತಿಯನ್ನು ಚಿಂಪಾಂಜಿಗಳು ಕಳೆದುಕೊಳ್ಳುತ್ತಿರುವುದರಿಂದ ಕೃತಕ ವಿಧಾನಗಳ ಮೂಲಕ ಅವುಗಳು ಗರ್ಭ ಧರಿಸುವಂತೆ ಮಾಡುವ ಪ್ರಯೋಗಗಳು ನಡೆಯುತ್ತಿವೆ. ಆದರೆ ಇದು ಯಶಸ್ವಿಯಾಗುವುದೋ ಇಲ್ಲವೋ ಇನ್ನೂ ಗೊತ್ತಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಮೀನಾಳ ಸಾವು ತುಂಬಲಾರದ ನಷ್ಟವಾಗಿದೆ.

ಮೀನಾಳ ಸಾವಿಗೆ ಖರೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಆಂತರಿಕ ತನಿಖೆ ನಡೆಸಲು ಮೃಗಾಲಯದ ನಿರ್ದೇಶಕ ಕುಮಾರ್‌ ಪುಷ್ಕರ್‌ ತೀರ್ಮಾನಿಸಿದ್ದಾರೆ. ಮೀನಾಳ ಸಾವಿಗೆ ಅವಳ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more