ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಪೋಲೆಂಡ್‌ ಪ್ರಧಾನಿ ಲಿಝೆಕ್‌ ಮಿಲ್ಲರ್‌

By Staff
|
Google Oneindia Kannada News

ಬೆಂಗಳೂರು: ಪೋಲೆಂಡ್‌ ಪ್ರಧಾನ ಮಂತ್ರಿ ಲಿಝೆಕ್‌ ಮಿಲ್ಲರ್‌ ಒಂದು ದಿನದ ಪ್ರವಾಸದ ಮೇಲೆ ಮಂಗಳವಾರ ಬೆಳಗ್ಗೆ ನಗರಕ್ಕೆ ಆಗಮಿಸಿದರು.

ಉದ್ಯಮ ಪ್ರತಿನಿಧಿಗಳ ತಂಡದ ನೇತೃತ್ವ ವಹಿಸಿರುವ ಪೋಲೆಂಡ್‌ ಪ್ರಧಾನಿ ಮಿಲ್ಲರ್‌ ಅವರನ್ನು ರಾಜ್ಯಪಾಲ ಟಿ. ಎನ್‌. ಚತುರ್ವೇದಿ, ಮಾಹಿತಿ ತಂತ್ರಜ್ಞಾನ ಸಚಿವ ಡಿ. ಬಿ. ಇನಾಂದಾರ್‌ ಮತ್ತು ನಗರದ ಮೇಯರ್‌ ಸಿ. ಎಂ. ನಾಗರಾಜ್‌ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಪೋಲೆಂಡ್‌ನಿಂದ ಬಂದಿರುವ ಉದ್ಯಮಿಗಳು ಬೆಂಗಳೂರಿನ ಉದ್ಯಮಿಗಳೊಂದಿಗೆ ಕೂಡಿಕೊಂಡು ಹೊಸ ಯೋಜನೆಗಳನ್ನು ರೂಪಿಸುವ ಬಗ್ಗೆ ಗಮನ ಹರಿಸುವರು. ಭಾರತ ಹಾಗೂ ಪೋಲೆಂಡ್‌ಗಳ ನಡುವಣ ವಾಣಿಜ್ಯ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ತಮ್ಮ ಭಾರತ ಭೇಟಿ ಸಹಕಾರಿಯಾಗಲಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಿಲ್ಲರ್‌ ಹೇಳಿದರು.

ಭಾರತದ ಸಿಲಿಕಾನ್‌ ವ್ಯಾಲಿ ಎಂದು ವಿಶ್ವ ನಕಾಶೆಯಲ್ಲಿ ಜನಪ್ರಿಯವಾದ ಬೆಂಗಳೂರು ಮಹಾನಗರವನ್ನು ಮಾಡರ್ನ್‌ ಸಿಟಿ ಎಂದು ಮಿಲ್ಲರ್‌ ಬಣ್ಣಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X