ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ ಇಡ್ಲಿಯಂತೆ ! ಇಡ್ಲಿ ಹಿಟ್ಟಿಗಿನ್ನು ತಿಂಗಳ ಆಯಸ್ಸು

By Staff
|
Google Oneindia Kannada News

ಹೈದರಾಬಾದ್‌ : ತಿಂಡಿಪ್ರಿಯರಿಗೆ ಹಾಗೂ ಗೃಹಿಣಿಯರಿಗಿದು ಸಂತೋಷದ ಸುದ್ದಿ . ಒಂದು ತಿಂಗಳ ತನಕ ಇಡ್ಲಿ ಹಿಟ್ಟು ಹುಳಿ ಬಾರದಂತೆ ರಕ್ಷಿಸುವ ತಂತ್ರಜ್ಞಾನವನ್ನು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಈ ವಿಷಯವನ್ನು ಭಾಭಾ ಪರಮಾಣು ಸಂಶೋಧನಾ ಕೇಂದ್ರ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ.

ಇಡ್ಲಿ ಹಿಟ್ಟನ್ನು ಸಣ್ಣ ಮಟ್ಟದ ಗಾಮಾ ವಿಕಿರಣ ಕ್ರಿಯೆಗೆ ಗುರಿ ಪಡಿಸುವ ಮೂಲಕ ಹುಳಿ ಬರುವುದನ್ನು ತಡೆಯಬಹುದಾಗಿದೆ. ಈ ತಂತ್ರಜ್ಞಾನವು ಬ್ಯಾಕ್ಟೀರಿಯಾಗಳನ್ನು ನಿಷ್ಕಿೃಯಗೊಳಿಸುವ ಮೂಲಕ ಹುಳಿ ಪ್ರಕ್ರಿಯೆಗೆ ಅಡ್ಡಗಾಲು ಹಾಕುತ್ತದೆ.

ಬಂಗಾಲಿಗಳು ಬಾಯಿ ಚಪ್ಪರಿಸುವ ಮೀನು ಕೂಡ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಗಮನ ಸೆಳೆದಿದ್ದು - ರೋಹು ಮೀನನ್ನು 10 ದಿನಗಳ ಕಾಲ ಸಂರಕ್ಷಿಸುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X