ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ.ಭವಸಾರ್‌ ಮತ್ತು ಡಾ.ಶೆಣೈಗೆ ಆರ್ಯಭಟ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ವಿಜ್ಞಾನಿಗಳಾದ ಪ್ರೊ.ಪಿ.ಡಿ.ಭವಸಾರ್‌ ಮತ್ತು ಡಾ. ಆರ್‌.ಪಿ.ಶೆಣೈ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999- 2000ನೇ ಇಸವಿಯ ಕಂತಿನ ಪ್ರಶಸ್ತಿ ಇದಾಗಿದೆ. ಭಾರತದಲ್ಲಿ ಬಾಹ್ಯಾಕಾಶ ಯಾನಕ್ಕೆ ಇವರು ಸಲ್ಲಿಸಿರುವ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ.

ಪ್ರೊ.ಭವಸಾರ್‌ ಅಹ್ಮದಾಬಾದ್‌ ಮೂಲದ ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ (ಎಸ್‌ಎಸಿ) ನ ಮಾಜಿ ನಿರ್ದೇಶಕ ಮತ್ತು ಡಾ.ಶೆಣೈ ಇಲೆಕ್ಟ್ರಾನಿಕ್ಸ್‌ ಅಂಡ್‌ ರೇಡಾರ್‌ ಡೆಲವಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ಎಲ್‌ಆರ್‌ಡಿಇ) ನ ಮಾಜಿ ನಿರ್ದೇಶಕ. ಆರ್ಯಭಟ ಪ್ರಶಸ್ತಿಯು 1 ಲಕ್ಷ ರುಪಾಯಿ ನಗದು ಹಾಗೂ ಬಿನ್ನವತ್ತಳಿಕೆಯನ್ನು ಒಳಗೊಂಡಿದೆ.

1999 ಹಾಗೂ 2000ನೇ ಇಸವಿಯ ವೈಜ್ಞಾನಿಕ ಕ್ಷೇತ್ರದ ಇತರೆ ಪ್ರಶಸ್ತಿಗೆ ಆಯ್ಕೆಯಾದವರನ್ನೂ ಪ್ರಕಟಿಸಲಾಗಿದೆ. ಈ ಪ್ರಶಸ್ತಿಯು ತಲಾ 25 ಸಾವಿರ ರುಪಾಯಿ ಹಾಗೂ ಬಿನ್ನವತ್ತಳಿಕೆಯನ್ನು ಒಳಗೊಂಡಿದೆ. ಪ್ರಶಸ್ತಿಗೆ ಭಾಜನರಾದವರ ಹೆಸರುಗಳು ಹೀಗಿವೆ :

ರಾಕೆಟ್‌ ಸಂಬಂಧಿ ತಂತ್ರಜ್ಞಾನದಲ್ಲಿನ ಸಾಧನೆ-
ಎಂ.ಅಣ್ಣಾಮಲೈ, ಸಹ ನಿರ್ದೇಶಕ, ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಂಸ್‌ ಸೆಂಟರ್‌, ತಿರುವನಂತಪುರ (1999).
ಡಾ.ಕೆ.ಪಿ.ರಾವ್‌, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು (2000)
ಎ.ಎಸ್‌.ರಾಜಗೋಪಾಲ್‌, ವಿಜ್ಞಾನಿ, ಆರ್ಮಮೆಂಟ್‌ ರಿಸರ್ಚ್‌ ಅಂಡ್‌ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌, ಪುಣೆ (2000)
ಇ.ಜನಾರ್ದನ, ಉಪ ನಿರ್ದೇಶಕ, ಎಲ್‌ವಿಡಿಇ, ವಿಕ್ರಂ ಸಾರಾಬಾಯ್‌ ಸ್ಪೇಸ್‌ ಸೆಂಟರ್‌, ತಿರುವನಂತಪುರ (2000)

ಬಾಹ್ಯಾಕಾಶ ಕಲೆ ಮತ್ತು ಸಂಬಂಧಿ ತಂತ್ರಜ್ಞಾನದಲ್ಲಿ ಸಾಧನೆ-
ಡಾ.ವಿ.ಎಸ್‌.ಐಯ್ಯಂಗಾರ್‌, ಸಂದರ್ಶಕ ವಿಜ್ಞಾನಿ, ಎಸ್‌ಎಸಿ (1999)
ಡಾ.ಎಚ್‌.ಒ.ಗೌತಮ್‌, ಉಪ ನಿರ್ದೇಶಕ, ಎಸ್‌ಎಸಿ (2000)
ಡಾ.ಪಿ.ಎಸ್‌.ನಾಯರ್‌, ರಚನಾ ವಿಭಾಗದ ಸಮೂಹ ನಿರ್ದೇಶಕ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು (2000)

ಬಾಹ್ಯಾಕಾಶ ವಿಜ್ಞಾನ ಮತ್ತು ಅನ್ವಯಿಕ ಶಾಸ್ತ್ರದಲ್ಲಿ ಸಾಧನೆ-
ಡಾ.ಕೆ.ಎಲ್‌.ಮಜುಂದಾರ್‌, ಸಮೂಹ ನಿರ್ದೇಶಕ, ಎಸ್‌ಐಪಿಜಿ/ಎಸ್‌ಐಐಪಿಎ, ಎಸ್‌ಎಸಿ (1999)
ಡಾ.ಶ್ರೀನಿವಾಸನ್‌, ವಿಜ್ಞಾನಿ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಸ್ಟ್ರೋ ಫಿಸಿಕ್ಸ್‌, ಬೆಂಗಳೂರು (2000)
ಡಾ.ಎ.ಆರ್‌.ದಾಸ್‌ಗುಪ್ತ, ಉಪ ನಿರ್ದೇಶಕ, ಎಸ್‌ಐಟಿಎಎ, ಎಸ್‌ಎಸಿ (2000)

ಬಾಹ್ಯಾಕಾಶ ವ್ಯವಸ್ಥೆ ನಿರ್ವಹಣೆಯಲ್ಲಿ ಸಾಧನೆ-
ಕೆ.ವಿ.ವೆಂಕಟಾಚಾರಿ, ಸಲಹೆಗಾರ, ದುರಂತ ನಿರ್ವಹಣಾ ಸೇವೆ, ಇಸ್ರೋ ಕೇಂದ್ರ ಕಚೇರಿ, ಬೆಂಗಳೂರು (1999)
ಎನ್‌.ರಮಣಿ, ವಿಸಿಟಿಂಗ್‌ ವಿಜ್ಞಾನಿ, ಇಸ್ರೋ ಕೇಂದ್ರ ಕಚೇರಿ, ಬೆಂಗಳೂರು (1999)
ಕೆ.ಎನ್‌.ಶಂಕರ, ನಿರ್ದೇಶಕ, ಎಸ್‌ಎಸಿ (2000)
ವಿ.ಎ.ಥಾಮಸ್‌, ಉಪ ನಿರ್ದೇಶಕ, ಆರ್‌ಸಿಎ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು (2000).

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X