ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನದ ಸ್ಪೆಷಲ್‌, ಬೆಂಗಳೂರಲ್ಲಿ ತಾಜ್‌ಮಹಲ್‌

By Staff
|
Google Oneindia Kannada News

ಬೆಂಗಳೂರು : ಪ್ರೇಮ ಸದನ ತಾಜ್‌ಮಹಲ್‌ ನೋಡೋಕೆ ಆಗ್ರಾಕೆ ಹೋಗೋಕೆ ಆಗದವರು ಫೆ.14ನೇ ತಾರೀಕಿನಿಂದ ಬೆಂಗಳೂರಲ್ಲೇ ಅದನ್ನು ನೋಡಬಹುದು. ನಗರದ ಅರಮನೆ ಆವರಣದಲ್ಲಿ ಕೇವಲ 1.5 ಕೋಟಿ ರುಪಾಯಿ ವೆಚ್ಚದಲ್ಲಿ ತಾಜ್‌ಮಹಲ್‌ ನಿರ್ಮಾಣವಾಗಿದೆ. ಈಗ ಕೊನೆಯ ಟಚ್‌ ಅಪ್‌ ಕೆಲಸಗಳು ನಡೆಯುತ್ತಿವೆ.

ಇದು ತಾಜ್‌ಮಹಲಿನ ಪ್ರತಿರೂಪ. ನವದೆಹಲಿ ಮೂಲದ ಟಿಎಂಎಸ್‌ ಎಕ್ಸಿಬಿಟ್ಸ್‌ ಪ್ರೇವೈಟ್‌ ಲಿಮಿಟೆಡ್‌ ಸಂಸ್ಥೆ ಪ್ರೇಮಿಗಳ ದಿನವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರತಿರೂಪ ನಿರ್ಮಿಸಿದೆ. ಕಳೆದ 2 ತಿಂಗಳಿಂದ 350 ಮಂದಿ ಈ ತಾಜ್‌ಮಹಲ್‌ ನಿರ್ಮಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ. ತಾಜ್‌ಮಹಲ್‌ ಜೊತೆಗೆ ಅರಮನೆ ಆವರಣದಲ್ಲಿ ಮನರಂಜನಾ ಆಟಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌, ವಿವಿಧ ಮಾರಾಟ ಮಳಿಗೆಗಳು ತಲೆಯೆತ್ತುತ್ತಿವೆ.

ಫೆಬ್ರವರಿ 14ನೇ ತಾರೀಕು ಪ್ರೇಮಿಗಳ ದಿನ ಇವೆಲ್ಲ ಗ್ರಾಹಕರಿಗಾಗಿ ತೆರೆದುಕೊಳ್ಳಲಿವೆ. ನಂತರ 20 ದಿನಗಳ ಕಾಲ ಇಲ್ಲಿ ಮಸ್ತು ಮಜಾ ಮಾಡಬಹುದು. ತಾಜ್‌ಮಹಲ್‌ ವೀಕ್ಷಣೆಯ ಪ್ರವೇಶ ಶುಲ್ಕ ಕೇವಲ 30 ರುಪಾಯಿ. ವಿಶ್ವ ಕಪ್‌ ಕ್ರಿಕೆಟ್ಟಿನ ಭರಾಟೆಯಲ್ಲೇ ಮೈಮರೆತು ಜನ ಮನೆಯಲ್ಲೇ ಟೀವಿ ಮುಂದೆ ಕೂತರೆ, ಈ ತಾಜ್‌ಮಹಲ್‌ ನೋಡೋರು ಯಾರು ಹೇಳಿ? ಅದಕ್ಕೇ, ಅರಮನೆ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಗಳನ್ನೂ ತೋರಲು ದೊಡ್ಡ ದೊಡ್ಡ ಪರದೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ತಾಜ್‌ಮಹಲ್‌ ಮುಂದೆ ನಿಂತೇ ಕ್ರಿಕೆಟ್ಟೂ ನೋಡುವ ಅವಕಾಶ ನಿಮ್ಮದು.

ಲಕ್ಕಿ ಆಲಿ ಸಂಗೀತ : ಇದೇ ಜಾಗೆಯಲ್ಲಿ ಪ್ರೇಮಿಗಳ ದಿನಕ್ಕೆ ಮುನ್ನಾ ದಿನವಾದ ಫೆ.13ರಂದು ಸಂಜೆ 7 ಗಂಟೆಗೆ ಲಕ್ಕಿ ಆಲಿ ಸಂಗೀತ ಕಾರ್ಯಕ್ರಮವಿದೆ. ಈ ಸಂಗೀತ ರಾತ್ರಿಗೆ ಜಯನಗರದ ಶೋ- ಆಫ್‌, ಕ್ಯಾಲಿಫೋ, ಕ್ಯಾಸಾ ಪಿಕ್ಕೋಲಾ ಔಟ್‌ಲೆಟ್‌ಗಳಲ್ಲಿ ಹಾಗೂ ಈಗ ತಾಜ್‌ಮಹಲ್‌ ಪ್ರತಿರೂಪ ಇರುವ ಕಡೆ ಟಿಕೇಟುಗಳನ್ನು ಖರೀದಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X