ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಗಿರಾಕಿಗಳ ಸೆಳೆಯಲು ಪ್ರವಾಸೋದ್ಯಮಕ್ಕೆ ಬಣ್ಣ

By Staff
|
Google Oneindia Kannada News

ಬೆಂಗಳೂರು : ದೇಶೀ ಮತ್ತು ವಿದೇಶೀ ಬಂಡವಾಳದಾರರನ್ನು ಆಕರ್ಷಿಸುವ ಸಲುವಾಗಿ ಈ ವರ್ಷ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಬಂಡವಾಳ ಹೂಡಿಕೆದಾರರ ವಿನಿಮಯ ಕೇಂದ್ರ (ಐಎನ್‌ಟಿಐಇ) ವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್‌ ಸೋಮವಾರ (ಫೆ.10) ಸುದ್ದಿಗಾರರಿಗೆ ಈ ನಿರ್ಧಾರ ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಒಡಂಬಡಿಕೆಯ ‘ಕನೆಕ್ಟ್‌ 2’ ಎಂಬ ಸಮಾವೇಶ ನಡೆಯಲಿದೆ. ಫೆಬ್ರವರಿ 11ರಂದು ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ‘ಚುರುಕಾದ ಮತ್ತು ಪೂರ್ವ ಸಾಂಸ್ಥಿಕ’ ಪ್ರವಾಸೋದ್ಯಮ ನೀತಿಯ ಮುಖ್ಯಾಂಶಗಳನ್ನು ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.

ಏನಿದು ಕನೆಕ್ಟ್‌ ?
ಇದೊಂದು ಸಮಾವೇಶ. ಇದರಲ್ಲಿ ಇವತ್ತಿನ ಪ್ರವಾಸೋದ್ಯಮದ ನಾಲ್ಕು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು. ಅವೆಂದರೆ-

  • ಪ್ರವಾಸೋದ್ಯಮದ ಅಭಿವೃದ್ಧಿಗೆ ತಕ್ಕಂತಹ ಪರಿಸರ ಹುಟ್ಟುಹಾಕುವ ನೀತಿ
  • ಪ್ರವಾಸೋದ್ಯಮದಲ್ಲಿ ವೃತ್ತಿಪರ ಬ್ರಾಂಡಿಂಗ್‌ ಮತ್ತು ಮಾರುಕಟ್ಟೆ ಒದಗಿಸುವಿಕೆ
  • ಪಕ್ಕಾ ಮೂಲಭೂತ ಸೌಕರ್ಯಗಳು ಮತ್ತು ಸಮರ್ಪಕ ಸಂಪರ್ಕ
  • ಪ್ರವಾಸೋದ್ಯಮದಲ್ಲಿ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದ ಸಂಬಂಧ ಕುದುರಿಸುವಿಕೆ.
ಕನೆಕ್ಟ್‌ ಸಮಾವೇಶವನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಉದ್ಘಾಟಿಸಲಿದ್ದು, ‘ಪ್ರವಾಸೋದ್ಯಮ- ಹೊಸ ಯುಗದ ಅಭಿವೃದ್ಧಿಯ ಮಂತ್ರ’ ಎಂಬ ವಿಷಯವಾಗಿಯೂ ಅವರು ಮಾತಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಅತಿಥಿ’ ಎಂಬ ಕಾರ್ಯಕ್ರಮವನ್ನು ಕೃಷ್ಣ ಉದ್ಘಾಟಿಸುವರು ಎಂದು ಪ್ರವಾಸೋದ್ಯಮ ಇಲಾಖೆ ಆಯುಕ್ತ ಐ.ಎಂ.ವಿಠ್ಠಲಮೂರ್ತಿ ತಿಳಿಸಿದರು.

ತೆರೆಯಲಿದೆ ಮನೆ ಓ ಬಾ ಅತಿಥಿ : ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ತಂಗುಮನೆಗಳನ್ನು ವ್ಯವಸ್ಥೆ ಮಾಡುವ ಯೋಜನೆ ‘ಅತಿಥಿ’. ಮನೆಯ ವಾತಾವರಣದಲ್ಲಿ ಊಟ ಮಾಡುತ್ತಾ, ಇಲ್ಲಿನ ಜನರ ಜೊತೆ ಹರಟೆ ಹೊಡೆಯುತ್ತಾ ಸ್ಥಳೀಯ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಪ್ರವಾಸಿಗರಿಗೆ ಈ ಕಾರ್ಯಕ್ರಮದ ಮೂಲಕ ದಕ್ಕಲಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ನೀತಿ ನಿರೂಪಕರು ಹಾಗೂ ಸರ್ಕಾರಿ ಪ್ರತಿನಿಧಿಗಳು ಸೇರಿದಂತೆ ಸುಮಾರು 600 ಅಧಿಕಾರಿಗಳು ಕನೆಕ್ಟ್‌ ಚಾವಡಿಯಲ್ಲಿ ಕೂರಲಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X