• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಡಿಗೂ ಶೀಲ ಮುಖ್ಯ ಸ್ವಾಮಿ : ‘ತರಂಗ’ದ ಸಂಧ್ಯಾ ಪೈ

By Staff
|

Sandhya Pai (photo by K.M.Veeresh)ಬೆಂಗಳೂರು : ತಾಯಿ ಶೀಲವಂತಳಾದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಹಾಗೆಯೇ ತಂದೆಗೂ ಶೀಲ ಮುಖ್ಯ. ಮಕ್ಕಳು, ಅದರಲ್ಲೂ ವಿಶೇಷವಾಗಿ ಗಂಡು ಮಕ್ಕಳ ಸುಪ್ತ ಮನಸ್ಸು ಅಪ್ಪನನ್ನು ಅನುಸರಿಸಲು ಪ್ರಯತ್ನಿಸುತ್ತದೆ. ಹೀಗಾಗಿ ಗಂಡಸೂ ಶೀಲವಂತನಾಗಿರಬೇಕು ಎಂದು ತರಂಗ ಸಂಪಾದಕಿ ಸಂಧ್ಯಾ ಪೈ ಘಂಟಾಘೋಷವಾಗಿ ಹೇಳಿದರು.

ಅಖಿಲ ಭಾರತ ಮಾಧ್ವ ಮಹಾಮಂಡಲದ ಸುವರ್ಣ ಮಹೋತ್ಸವದ ಪ್ರಯುಕ್ತ ಪೂರ್ಣ ಪ್ರಜ್ಞಾ ವಿದ್ಯಾ ಪೀಠದಲ್ಲಿ ಶುಕ್ರವಾರ (ಫೆ.7) ನಡೆದ 22ನೇ ಮಾಧ್ವ ತತ್ತ್ವಜ್ಞಾನ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಸಂಧ್ಯಾ ಪೈ ಆಡಿದ ಮಾತುಗಳಿಗೆ ಮಹಿಳಾ ಮಣಿಗಳು ಜೋರು ಕರತಾಡನ ಮಾಡಿದರು.

ಸಂಧ್ಯಾ ಪೈ ಬೋಧನೆಗಳು-

  • ಶಿಕ್ಷಣ ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತದೋ, ಅದರ ಆಧಾರದ ಮೇಲೆ ನಾಳಿನ ಸಮಾಜ ನಿರ್ಮಾಣವಾಗುತ್ತದೆ.
  • ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಅವರದೇ ಭಾಷೆಯಲ್ಲಿ ಸಹನೆಯಿಂದ ಉತ್ತರಿಸಬೇಕು.
  • ಮಕ್ಕಳನ್ನು ತಿದ್ದುವುದರ ಮೂಲಕ ಸಮಾಜದಲ್ಲಿ ಹಿಂದಿನ ಸಾಂಸ್ಕೃತಿಕ, ಧಾರ್ಮಿಕ ವೈಭವ ಮರುಕಳಿಸುವುದು ಸಾಧ್ಯ.
  • ಸಮಾಜದಲ್ಲಿ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮವಾಗುತ್ತಿದೆ.
  • ವೃತ್ತಿ ಆಧಾರಿತ ಶಿಕ್ಷಣವನ್ನು ಮೌಲ್ಯಗಳನ್ನು ಗಾಳಿಗೆ ತೂರಿದೆ. ಸಾವಿರಾರು ವರ್ಷಗಳಿಂದ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದ ಮೌಲ್ಯಗಳನ್ನು ನಾವು ಸ್ವೀಕರಿಸುತ್ತಿಲ್ಲ . ಅಲ್ಲಾಡುವ ಅಡಿಪಾಯದ ಮೇಲಿನ ಕಟ್ಟಡದ ಹಾಗೆ ಮಕ್ಕಳನ್ನು ರೂಪಿಸುತ್ತಿದ್ದೇವೆ.
  • ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣಿಗೆ ತಾನು ಹುಲಿಯ ಬಾಯಿಗೆ ಹೋಗುತ್ತಿರುವ ಭಾವನೆ ಬರಬಾರದು. ಮನೆಗೆ ಸೊಸೆ ಬಂದರೆ, ಮಗ ಕೈತಪ್ಪಿ ಹೋಗುತ್ತಾನೆ ಎಂಬ ಭಾವನೆ ಅತ್ತೆಗೆ ಇರಬಾರದು.
  • ನಮ್ಮಿಂದ ಯಾರಿಗೂ ನೋವು ಕೊಡದೆ, ಕಿಂಚಿತ್ತಾದರೂ ಒಳ್ಳೆಯದಾಗುವುದಾದರೆ ಅದಕ್ಕಿಂತ ದೊಡ್ಡ ಧರ್ಮ ಯಾವುದೂ ಇಲ್ಲ.

ಗೋಷ್ಠಿಯಲ್ಲಿ ಮಾತಾಡಿದ ನ್ಯಾಯವಾದಿ ಹೇಮಲತಾ ಮಹಿಷಿ, ಹೆಚ್ಚಾಗುತ್ತಿರುವ ವಿಚ್ಛೇದನ ಪ್ರಕಣಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಸಾವಿರಾರು ರುಪಾಯಿ ಹಣ ಸಂಪಾದಿಸುವ ಮಹಿಳೆ ಪಾಲಿಗೆ ಮನೆಗೆಲಸವೂ ಅನಿವಾರ್ಯ ಅನ್ನುವ ಪರಿಸ್ಥಿತಿ ತಪ್ಪಬೇಕು. ನಿವಾರಿಸಿಕೊಳ್ಳಬಹುದಾದ ಸಮಸ್ಯೆಗಳನ್ನೇ ನೆಪವಾಗಿಸಿಕೊಂಡು ಕುಟುಂಬ ವ್ಯವಸ್ಥೆ ಹಾಳಾಗುವುದನ್ನು ತಪ್ಪಿಸಬೇಕು. ಹಣ ಕಾಸಿನಲ್ಲಿ ಜೋರಾಗಿದ್ದರೂ ವೃದ್ಧ ತಂದೆ- ತಾಯಿಯರನ್ನು ಆಶ್ರಮಗಳಿಗೆ ಸೇರಿಸುವ ಪ್ರವೃತ್ತಿ ತಪ್ಪಬೇಕು ಎಂದು ಹೇಮಲತಾ ಮಹಿಷಿ ಕರೆ ಕೊಟ್ಟರು.

ಸುಧಾಬಾಯಿ ಅಗ್ನಿಹೋತ್ರಿ, ರುಕ್ಮಿಣಿ ಗಿರಿಮಾಜಿ, ತೇಜಸ್ವಿನಿ ನಾಗರಹಳ್ಳಿ, ಸರಸ್ವತಿ ಶ್ರೀಪತಿ, ರಾಜಲಕ್ಷ್ಮಿ ಪಾರ್ಥಸಾರಥಿ ಮೊದಲಾದವರು ಸಮ್ಮೇಳನದ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಪುರುಷರೂ ಪತ್ನಿವ್ರತರಾಗಬೇಕೆಂದು ಕಿವಿ ಮಾತು ಹೇಳಿದರು. ಸೋದೆ ಮಠದ ವಿಶ್ವೋತ್ತಮತೀರ್ಥ ಶ್ರೀಪಾದರು ಹಾಗೂ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯತೀರ್ಥ ಶ್ರೀಪಾದರು ಗೋಷ್ಠಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more