ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಕಟಾಕ್ಷ : ಪೂಜಾರಿಗೆ ಕೆ.ಪಿ.ಸಿ.ಸಿ ಅಧ್ಯಕ್ಷತೆ

By Staff
|
Google Oneindia Kannada News

ಬೆಂಗಳೂರು : ಬಹಳ ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಪಟ್ಟ ದ ಗೊಂದಲ ಕೊನೆಗೂ ಅಂತ್ಯಗೊಂಡಿದ್ದು , ಕೆ.ಪಿ.ಸಿ.ಸಿಯ ನೂತನ ಅಧ್ಯಕ್ಷರಾಗಿ ಜನಾರ್ದನ ಪೂಜಾರಿ ಆಯ್ಕೆಯಾಗಿದ್ದ್ದಾರೆ.

ಇಂದಿರಾ ಭಕ್ತರೆಂದೇ ಖ್ಯಾತರಾದ ಪೂಜಾರಿ ಎರಡನೇ ಬಾರಿಗೆ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1987-89ರಲ್ಲಿ ಮೊದಲ ಬಾರಿಗೆ ಪೂಜಾರಿ ಅಧ್ಯಕ್ಷ ಪದವಿ ಅಲಂಕರಿಸಿದ್ದರು. ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿರುವ ಪೂಜಾರಿ ಕೇಂದ್ರದಲ್ಲಿ ಹಣಕಾಸು ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರು ಪ್ರಾರಂಭಿಸಿದ ರೈತರ ಲೋನ್‌ ಮೇಳ ಬಹಳ ಪ್ರಖ್ಯಾತಿ ಪಡೆದಿತ್ತು.

ಪ್ರಸ್ತುತ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷ ಗಾದಿಗೆ ರಾಜಿನಾಮೆ ಕೊಟ್ಟು ಮತ್ತೆ ಸಚಿವ ಸಂಪುಟ ಸೇರಲು ಅಣಿಯಾಗಿದ್ದಾರೆ. ಅಧ್ಯಕ್ಷರಾಗುವ ಮುನ್ನ ಅಲ್ಲಂ ವೀರಭದ್ರಪ್ಪ ತೋಟಗಾರಿಕಾ ರಾಜ್ಯ ಸಚಿವರಾಗಿದ್ದರು. ಶಿವಾನಂದ ಕೌಜಲಗಿ ಲಂಚದ ಪ್ರಕರಣದಲ್ಲಿ ಸಿಲುಕಿ ಮಂತ್ರಿಪದವಿ ತ್ಯಾಗ ಮಾಡಬೇಕಾದಾಗ ಅಲ್ಲಂ ವೀರಭದ್ರಪ್ಪ ತಮ್ಮ ಮಂತ್ರಿ ಸ್ಥಾನವನ್ನು ಬಿಟ್ಟು ಒಲ್ಲದ ಮನಸ್ಸಿನಿಂದ ಅಧ್ಯಕ್ಷರಾಗಬೇಕಾಯಿತು.

1999ರ ಆಗಿನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿದ್ದ ಎಸ್‌. ಎಂ. ಕೃಷ್ಣರ ನೇತೃತ್ವದಲ್ಲಿ ಭಾರೀ ಬಹುಮತದಲ್ಲಿ ಗೆದ್ದ ಕಾಂಗ್ರೆಸ್‌ಗೆ ಮುಂಬರುವ 2004ರ ಚುನಾವಣೆಗಳು ಅಷ್ಟು ಸುಲಭವಾಗಿಲ್ಲ. ಕರ್ನಾಟಕದಲ್ಲಿ ಪ್ರಬಲ ಪ್ರತಿಪಕ್ಷವೇ ಇಲ್ಲದೆ ಅಜಾತಶತ್ರು ಎಂದು ಮೆರೆಯುತ್ತಿದ್ದ ಕಾಂಗ್ರೆಸ್‌- ಬರ, ಕಾವೇರಿ ಮತ್ತು ನಾಗಪ್ಪನವರ ಪ್ರಕರಣಗಳಲ್ಲಿ ಸಾಕಷ್ಟು ಹೆಸರು ಕೆಡಿಸಿಕೊಂಡಿದೆ. ಮುಂಬರುವ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸಂಘಟಿಸಿ, ಗೆಲುವಿನ ಹಾದಿಯಲ್ಲಿ ಪಕ್ಷವನ್ನು ನಡೆಸುವ ನಿಟ್ಟಿನಲ್ಲಿ ಹೊಸ ಅಧ್ಯಕ್ಷರ ನೇಮಕಾತಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಲಭಿಸಿತ್ತು.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರುವಾದಾಗಿನಿಂದ ಎ.ಐ.ಸಿ.ಸಿ ಪಟ್ಟಿಯಲ್ಲಿ ಬಹಳಷ್ಟು ಕಾಂಗ್ರೆಸ್‌ ನಾಯಕರ ಹೆಸರು ಪ್ರಸ್ತಾಪವಾಗಿತ್ತು. ಜೂನ್‌ನಲ್ಲಿ ನಡೆದ ಸಂಪುಟ ಪುನರ್ರಚನೆ ಸಮಯದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ, ಬಾದಾಮಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಯವರ ಹೆಸರು ಅಧ್ಯಕ್ಷ ಪದವಿಗೆ ಪ್ರಬಲವಾಗಿ ಕೇಳಿ ಬಂದಿತ್ತು . ಮೈಸೂರು ಉಸ್ತುವಾರಿ ಮತ್ತು ಸಹಕಾರ ಸಚಿವ ವಿಶ್ವನಾಥ್‌ರವರ ಹೆಸರು ನಂತರದ ಸ್ಥಾನದಲ್ಲಿತ್ತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಸ್‌ ಬಂಗಾರಪ್ಪ , ಸಂಸದ ಜಾಫರ್‌ ಶರೀಫ್‌... ಹೀಗೆ ದಿನ ಕಳೆದಂತೆಲ್ಲಾ ಪಟ್ಟಿ ಬೆಳೆಯುತ್ತಾ, ಅನೇಕ ಕಾಂಗ್ರೆಸ್‌ ನಾಯಕರ ಹೆಸರುಗಳು ಬಂದು ಹೋಗಿತ್ತು.

ಈ ಮಧ್ಯೆ ಮಹಾರಾಷ್ಟ್ರ ಕಾಂಗ್ರೆಸ್‌ ಸರ್ಕಾರದಲ್ಲಾದ ರಾಜಕೀಯ ಬೆಳವಣಿಗೆಗಳು ಮತ್ತು ಕರ್ನಾಟಕ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣರ ದಾವೋಸ್‌ ಪ್ರವಾಸದಿಂದ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ವಿಳಂಬವಾಯ್ತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X