ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಾತೃತ್ವ ದಿನ’ವಾಗಿ ಕಸ್ತೂರಿ ಬಾ ಜನುಮ ದಿನ

By Staff
|
Google Oneindia Kannada News

ನವದೆಹಲಿ : ಮಹಾತ್ಮ ಗಾಂಧೀಜಿ ಅವರ ಪತ್ನಿ ಕಸ್ತೂರಿ ಬಾ ಅವರ ಜನ್ಮ ದಿನ (ಏಪ್ರಿಲ್‌ 6) ವನ್ನು ಮಾತೃತ್ವ ದಿನವಾಗಿ ಘೋಷಿಸಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸುರಕ್ಷಿತ ಗರ್ಭಧಾರಣೆ ಹಾಗೂ ಹೆರಿಗೆ ಕುರಿತು ಗಮನ ಸೆಳೆಯಲು ಕಸ್ತೂರಿ ಬಾ ಅವರ ಜನ್ಮ ದಿನವನ್ನು ಅರ್ಪಿಸುವುದು ಯೋಗ್ಯವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪುವ ತಾಯಂದಿರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿವರ್ಷ 1 ಲಕ್ಷ ಹೆರಿಗೆ ವೇಳೆ 407 ತಾಯಂದಿರು ಮರಣ ಹೊಂದುತ್ತಾರೆ. ಆ ಕಾರಣದಿಂದಾಗಿ ಬಾಣಂತಿ ಸಾವುಗಳನ್ನು ತಡೆಗಟ್ಟುವಲ್ಲಿ ಅಸಾಮಾನ್ಯ ಸಾಧನೆಗಾಗಿ ರಾಷ್ಟ್ರಪತಿಯವರ ಪ್ರಶಸ್ತಿಯಾಂದನ್ನು ಸ್ಥಾಪಿಸಲು ಕೂಡ ಸರ್ಕಾರ ಉದ್ದೇಶಿಸಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X