ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಬ್ಳೆ ಪತ್ನಿಗೆ ಕೊನೆಗೂ ದಕ್ಕಿದ ಮಗು ಅರುಣಿ

By Staff
|
Google Oneindia Kannada News

ಬೆಂಗಳೂರು : ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಹೆಂಡತಿ ಚೇತನಾ ತನ್ನ ಮೊದಲ ಗಂಡನಿಂದ ಪಡೆದಿದ್ದ 8 ವರ್ಷದ ಹೆಣ್ಣು ಮಗು ಆಕೆಯ ವಶಕ್ಕೇ ಕೊನೆಗೂ ದಕ್ಕಿದೆ. ರಾಜ್ಯ ಹೈಕೋರ್ಟ್‌ ಸೋಮವಾರ (ಜ.27) ಈ ಕುರಿತ ಆದೇಶ ಹೊರಡಿಸಿತು.

ಅರುಣಿಯನ್ನು ಆಕೆಯ ತಂದೆ ಕೆ.ವಿ.ಜಾಗೀರ್‌ದಾರ್‌ ವಶಕ್ಕೆ ಒಪ್ಪಿಸಬೇಕೆಂದು ಕೆಳ ಹಂತದ ನ್ಯಾಯಾಲಯ ತೀರ್ಪು ಕೊಟ್ಟಿತ್ತು. ನ್ಯಾಯಮೂರ್ತಿ ಎ.ಎಂ.ಫಾರೂಕಿ ಹಾಗೂ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್‌ ಅವರನ್ನೊಳಗೊಂಡ ಹೈಕೋರ್ಟ್‌ ನ್ಯಾಯಪೀಠ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿ, ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸುವ ಆದೇಶ ಕೊಟ್ಟಿತು. ಕೆಳ ಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕುಂಬ್ಳೆ ಹೆಂಡತಿ ಚೇತನಾ ಹೈಕೋರ್ಟ್‌ ಮೊರೆಹೋಗಿದ್ದರು.

ಸರಿಯಾದ ಕಾರಣ ಇಲ್ಲದೆ ಮಗು ತನ್ನ ತಾಯಿಯ ಜೊತೆ ಬೆಳೆಯುವ ಅವಕಾಶವನ್ನು ಕಿತ್ತುಕೊಳ್ಳಬಾರದು. ಈ ಪ್ರಕರಣದಲ್ಲಿ ತಾಯಿ ಹಾಗೂ ಮಗುವನ್ನು ಬೇರ್ಪಡಿಸಲು ಕಾರಣಗಳಿಲ್ಲ ಎಂದು ತೀರ್ಪು ಹೇಳಿದೆ.

ತೀರ್ಪಿನನ್ವಯ- ಶನಿವಾರ ಹಾಗೂ ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಮಗು ತನ್ನ ತಂದೆಯ ಜೊತೆ ಇರಲು ಅವಕಾಶವಿದೆ. ರಜಾ ದಿನಗಳಲ್ಲಿ ಅರ್ಧ ದಿನಗಳಲ್ಲಿ ಅರ್ಧ ಭಾಗ ಅಪ್ಪನ ಬಳಿ ಕಳೆಯುವ ಅವಕಾಶ ಉಂಟು. ಈ ಆದೇಶ ಪಾಲಿಸಲು ತೊಂದರೆಯಾದರೆ ಮತ್ತೆ ನ್ಯಾಯಾಲಯದ ಮುಂದೆ ಬನ್ನಿ ಎನ್ನುವ ಸೂಚನೆ ಕೊಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X