ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ತಿಂಗಳಿಂದ ಬನ್ನೇರುಘಟ್ಟದಲ್ಲಿ ಕರಡಿ ಸಫಾರಿ

By Staff
|
Google Oneindia Kannada News

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಉದ್ಧಾರದ ಕೆಲಸ 10 ಕೋಟಿ ರುಪಾಯಿ ವೆಚ್ಚದಲ್ಲಿ ಭರದಿಂದ ನಡೆಯುತ್ತಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಕೆ.ಚಕ್ರವರ್ತಿ ಹೇಳಿದ್ದಾರೆ.

ವಿಶ್ವಬ್ಯಾಂಕ್‌ ಹಾಗೂ ಕೇಂದ್ರ ಸರ್ಕಾರದ ನೆರವಿನ ಯೋಜನೆಯಡಿ 550 ಹೆಕ್ಟೇರ್‌ ವ್ಯಾಪ್ತಿಯ ಬನ್ನೇರುಘಟ್ಟ ಉದ್ಯಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳುವಂತಾಗಲು ನಡೆಯುತ್ತಿರುವ ಕೆಲಸಗಳು ಇಂತಿವೆ-

  • 4 ಕೋಟಿ ರುಪಾಯಿ ವೆಚ್ಚದ ಚಿಟ್ಟೆ ಪಾರ್ಕು.
  • ಸಫಾರಿಗೆ ಒಯ್ಯುವ ವಾಹನಗಳ ಸಂಖ್ಯೆ ಹೆಚ್ಚಳ. ಈಗ ಪ್ರವಾಸಿಗರು ಟಿಕೇಟು ಪಡೆದು ತಮ್ಮ ಪಾಳಿ ಬರುವವರೆಗೆ ಕಾಯಬೇಕಾಗುತ್ತಿದೆ. ಇದನ್ನು ತಪ್ಪಿಸಲು ಬಸ್ಸುಗಳ ಸಂಖ್ಯೆ ಹೆಚ್ಚಿಸುವುದಲ್ಲದೆ, ಅವುಗಳಿಗೆ ಸಂಖ್ಯೆ ಕೊಟ್ಟು, ಟಿಕೇಟಿನಲ್ಲೇ ಯಾವ ಸಂಖ್ಯೆಯ ಬಸ್ಸಿನಲ್ಲಿ ಎಷ್ಟು ಹೊತ್ತಿಗೆ ಸಫಾರಿ ಯಾತ್ರೆ ಹೋಗಬೇಕು ಎಂಬುದನ್ನು ನಮೂದಿಸಲಾಗುವುದು. ಇದರಿಂದ ಪ್ರಯಾಣಿಕರು ಕಾಯುವುದು ತಪ್ಪಲಿದೆ.
  • ಸಕಲ ಸಂವಹನ ವ್ಯವಸ್ಥೆಯಾಂದಿಗೆ ದೊಡ್ಡ ರಿಸಪ್ಷನ್‌ ಹಾಲ್‌ನ ನಿರ್ಮಾಣ. ಈಗಿರುವ ಗ್ರಂಥಾಲಯ ಮತ್ತು ಅಭಿವ್ಯಕ್ತಿ ಕೇಂದ್ರದ ಅಭಿವೃದ್ಧಿ.
  • ಮುಂದಿನ ತಿಂಗಳಿಂದ ಪ್ರವಾಸಿಗರು ಕರಡಿ ಸಫಾರಿ ಕೂಡ ನೋಡಬಹುದು. ಇದರಲ್ಲಿ 30 ಕರಡಿಗಳಿರಲಿವೆ. (ಈಗ ಸಿಂಹ, ಹುಲಿ, ಬಿಳಿಹುಲಿ ಸಫಾರಿ ಇದೆ).
  • ವಿವಿಧ ನಮೂನೆಯ ಆರ್ಕಿಡ್‌ಗಳಿರುವ ಆರ್ಕಿಡ್‌ ಉದ್ಯಾನದ ನಿರ್ಮಾಣ.
  • ಪ್ರಾಣಿ ಸಂಗ್ರಹಾಲಯದ ಸೂತ್ರದಿಂದ ಹೊರಬಂದು ಸಫಾರಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆಫ್ರಿಕದ ರಿkುೕಬ್ರಾ ಹಾಗೂ ಜಿರಾಫೆಗಳ ಸಫಾರಿ ಕೂಡ ಬನ್ನೇರುಘಟ್ಟದಲ್ಲಿ ತಲೆಯೆತ್ತಲಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X