• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಪ್ಪನ್‌-ಕರ್ನಾಟಕ ಎಸ್‌ಟಿಎಫ್‌ ಗುಂಡಿನ ಕಾಳಗ

By Super
|

ಬೆಂಗಳೂರು : ಜನವರಿ 24, ಶುಕ್ರವಾರ ರಾತ್ರಿ ವೀರಪ್ಪನ್‌ ಮತ್ತು ಎಸ್‌ಟಿಎಫ್‌ ಪಡೆಯ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ಶನಿವಾರ ತಿಳಿಸಿವೆ.

ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ಹಾಗೂ ಆತನ ಸಹಚರರು ಇದ್ದಾರೆಂಬ ಮಾಹಿತಿಯ ಜಾಡು ಹಿಡಿದು ಕರ್ನಾಟಕ ಎಸ್‌ಟಿಎಫ್‌ ಪಡೆಯ ಮುಖ್ಯಸ್ಥ ಜ್ಯೋತಿ ಪ್ರಕಾಶ್‌ ಮಿರ್ಜಿ ಹಾಗೂ ಅವರ ತಂಡ ಹೊರಟಿದೆ. ಪ್ರಾಯಶಃ ತನ್ನ ನೆಲೆದಾಣಕ್ಕೆ ಪೊಲೀಸರು ಹತ್ತಿರಾದಾಗ ರಕ್ಷಣೆಗೆ ವೀರಪ್ಪನ್‌ ಹಾಗೂ ಆತನ ತಂಡ ಗುಂಡು ಹಾರಿಸಿದೆ. ವೀರಪ್ಪನ್‌ ದಾಳಿಗೆ ಪೊಲೀಸರೂ ಗುಂಡಿನಿಂದ ದಿಟ್ಟ ಉತ್ತರ ಕೊಟ್ಟಿದ್ದಾರೆ. ಮಾಹಿತಿಯನ್ನು ತಮಿಳುನಾಡು ಎಸ್‌ಟಿಎಫ್‌ಗೂ ತಿಳಿಸಿ, ಆ ತಂಡವನ್ನೂ ಈ ಕಾರ್ಯಾಚರಣೆಗೆ ಮಿರ್ಜಿ ಸೇರಿಸಿಕೊಂಡಿದ್ದಾರೆ. ಪರಸ್ಪರ ಗುಂಡಿನ ಚಕಮಕಿಯಲ್ಲಿ ಯಾರಾದರೂ ಮೃತಪಟ್ಟ ಅಥವಾ ಗಾಯಗೊಂಡ ವಿವರಗಳು ಸದ್ಯಕ್ಕೆ ಅಲಭ್ಯ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಗೋಪಿನಾಥಂ ಅರಣ್ಯ ಪ್ರದೇಶವನ್ನು ಕರ್ನಾಟಕ ಹಾಗೂ ತಮಿಳುನಾಡು ಎಸ್‌ಟಿಎಫ್‌ ಪೊಲೀಸರು ಸುತ್ತುವರೆದಿದ್ದು, ವೀರಪ್ಪನ್‌ ತಪ್ಪಿಸಿಕೊಂಡು ಹೋಗದಂತೆ ನಿಗಾ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಸಂಯುಕ್ತ ಜನತಾ ದಳದ ನಾಯಕ ಎಚ್‌.ನಾಗಪ್ಪ ಅವರು ವೀರಪ್ಪನ್‌ ಒತ್ತೆಯಾಳಾಗಿದ್ದಾಗಲೇ ನವೆಂಬರ್‌ 8, 2002ರಲ್ಲಿ ಹತ್ಯೆಯಾಗಿದ್ದರು. ಆ ನಂತರ ವೀರಪ್ಪನ್‌ ಹಾಗೂ ಎಸ್‌ಟಿಎಫ್‌ ನಡುವೆ ನಡೆದಿರುವ ಮೊದಲ ಗುಂಡಿನ ಕಾಳಗವಿದು.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy exchange of fire between the Karnataka Specail Task Force (STF) and notorious forest bandit Veerappan and his gang has taken place in Gopinatham forest area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more