ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಪ್ರವಾಹ : ಬೆಂಗಳೂರು ವಿಜ್ಞಾನಿಗಳ ಶೋಧ

By Staff
|
Google Oneindia Kannada News

ಬೆಂಗಳೂರು : ಚಲಿಸುವ ದ್ರವದೊಳಗೆ ಕಾರ್ಬನ್‌ ನ್ಯಾನೊಟ್ಯೂಬ್‌ ವಾಹಕಗಳನ್ನು ಅದ್ದಿದಾಗ ವಿದ್ಯುತ್‌ ಪ್ರವಾಹ ಉತ್ಪತ್ತಿಯಾಗುತ್ತದೆ. ಬೆಂಗಳೂರು ವಿಜ್ಞಾನಿಗಳ ಈ ಶೋಧ ಜೈವಿಕ ವೈದ್ಯಕೀಯ ಕ್ಷೇತ್ರದ ವಿಕ್ರಮ.

ಕಾರ್ಬನ್‌ ನ್ಯಾನೋಟ್ಯೂಬ್‌ಗಳ ಕಟ್ಟುಗಳೇ ಪುಟ್ಟ ವಾಹಕಗಳಾಗಿ ಕೆಲಸ ಮಾಡುತ್ತವೆ. ಇವು ಶಕ್ತಿ ಪರಿವರ್ತಕಗಳೂ ಹೌದು. ಚಲನ ದ್ರವದಲ್ಲಿ ಈ ವಾಹಕಗಳನ್ನು ಅದ್ದಿದಾಗ ವಿದ್ಯುತ್‌ ಪ್ರವಾಹ ಉತ್ಪತ್ತಿಯಾಗುತ್ತದೆ. ಜೈವಿಕ ವೈದ್ಯಕೀಯ ಪರಿಸರದಲ್ಲಿ ಈ ವಿದ್ಯುತ್‌ ಪ್ರವಾಹವನ್ನು ಬಳಸಿಕೊಂಡು ಚಿಕಿತ್ಸೆ ನೀಡಬಹುದಾಗಿದೆ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನ ಭೌತಶಾಸ್ತ್ರದ ಪ್ರೊಫೆಸರ್‌ ಅಜಯ್‌ ಕೆ.ಸೂದ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರೊ.ಸೂದ್‌, ರಾಮನ್‌ ಸಂಶೋಧನಾ ಸಂಸ್ಥೆಯ ಎನ್‌.ಕುಮಾರ್‌ ಹಾಗೂ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ವಿದ್ಯಾರ್ಥಿ ಶಂಕರ್‌ ಘೋಷ್‌ ಈ ಶೋಧದ ರೂವಾರಿಗಳು. ಪ್ರತಿಷ್ಠಿತ ‘ಸೈನ್ಸ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ವಿಜ್ಞಾನಿಗಳು ತಮ್ಮ ಶೋಧ ಕುರಿತ ಪ್ರಬಂಧವನ್ನು ಪ್ರಕಟಿಸಿದ್ದರು. ತಮ್ಮ ಶೋಧದ ಪೇಟೆಂಟ್‌ ಪಡೆಯಲು ಅಮೆರಿಕ ಮತ್ತು ಭಾರತದಲ್ಲಿ ವಿಜ್ಞಾನಿಗಳು ಅರ್ಜಿ ಹಾಕಿದ್ದಾರೆ.

(ಪಿಟಿಐ)

Post your views

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X