ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ನಾಸ್‌ಕಾಮ್‌ ಅಧ್ಯಕ್ಷ ಕಿರಣ್‌ ಕಾರ್ನಿಕ್‌

By Staff
|
Google Oneindia Kannada News

Kiran Karnik, President, NASSCOMಬೆಂಗಳೂರು : ಸರ್ಕಾರಿ ಕೆಲಸಗಳನ್ನು ವಿದೇಶೀ ಏಜೆನ್ಸಿಗಳಿಗೆ ಗುತ್ತಿಗೆ ಕೊಡುವುದನ್ನು ನಿಷೇಧಿಸಿರುವ ನ್ಯೂಜೆರ್ಸಿ ಸರ್ಕಾರದ ಮಸೂದೆ ಜಾಗತಿಕ ಉದ್ದಿಮೆಗೆ ಪ್ರತಿಕೂಲವಾಗಿದೆ. ಈ ವಿವಾದಾಸ್ಪದ ಮಸೂದೆ ಕುರಿತು ನ್ಯೂಜೆರ್ಸಿ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಸಾಫ್ಟ್‌ವೇರ್‌ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಒಕ್ಕೂಟ (ನಾಸ್‌ಕಾಮ್‌) ಅಧ್ಯಕ್ಷ ಕಿರಣ್‌ ಕಾರ್ನಿಕ್‌ ಹೇಳಿದರು.

ನಗರದಲ್ಲಿ ಸ್ಟೋರೇಜ್‌ ನೆಟ್‌ವರ್ಕ್‌ ಸಮಾವೇಶವೊಂದರಲ್ಲಿ ಮಂಗಳವಾರ (ಜ.21) ಅವರು ಮಾತಾಡುತ್ತಿದ್ದರು. ನ್ಯೂಜೆರ್ಸಿಯಲ್ಲಿನ ಮಸೂದೆ ಅನುಮೋದನೆಯಾಗಿ ಕಾಯ್ದೆಯಾಗಲು ಇನ್ನೂ ಎರಡು ಮೂರು ಹಂತಗಳಿವೆ. ಜಾಗತಿಕ ಮಾರುಕಟ್ಟೆಯ ಹಿತದೃಷ್ಟಿಗೆ ಈ ಮಸೂದೆ ಪೂರಕವಾಗಿಲ್ಲ. ಇಂತಾ ಮಸೂದೆಯಿಂದ ಅಮೆರಿಕ ಹಾಗೂ ಅದರ ಗಿರಾಕಿಗಳಿಗೇ ನಷ್ಟವಾಗುತ್ತದೆ. ಭಾರತದ ಸಾಫ್ಟ್‌ವೇರ್‌ ರಫ್ತಿಗೆ ಇದರಿಂದ ಯಾವುದೇ ನೇರವಾದ ಅಡ್ಡಿಯಿಲ್ಲ. ಆದರೆ, ಉಳಿದ ದೇಶಗಳೂ ಇದೇ ರೀತಿಯ ಮಸೂದೆ ತರುವ ಬಗ್ಗೆ ಯೋಚಿಸಿದರೆ ಜಾಗತಿಕ ಅಭಿವೃದ್ಧಿಯ ಕತೆ ಗೋವಿಂದ ಎಂದು ಕಾರ್ನಿಕ್‌ ಆತಂಕ ವ್ಯಕ್ತ ಪಡಿಸಿದರು.

ಮಸೂದೆ ಕುರಿತು ಮರುಚಿಂತನೆ ನಡೆಸಬೇಕೆಂದು ನ್ಯೂಜೆರ್ಸಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ. ಆ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಓ) ಕಾನೂನು ತಜ್ಞರ ಕಿವಿಗೂ ಈ ವಿಷಯ ಹಾಕಿದ್ದು, ಉದ್ದಿಮೆಯ ಆತಂಕ ಹೋಗಲಾಡಿಸುವ ಸಕಲ ಯತ್ನವನ್ನೂ ನಾಸ್‌ಕಾಮ್‌ ಮಾಡುತ್ತಿದೆ ಎಂದು ಭರವಸೆ ಕೊಟ್ಟರು.

ಸಾಫ್ಟ್‌ವೇರ್‌ ರಫ್ತು ಗುರಿಯಲ್ಲಿ ಬದಲಾವಣೆ ಇಲ್ಲ : 2002- 03ನೇ ಇಸವಿಯಲ್ಲಿ 30 ಪ್ರತಿಶತ ಸಾಫ್ಟ್‌ವೇರ್‌ ರಫ್ತು ಅಭಿವೃದ್ಧಿಯ ಗುರಿಯನ್ನು ನಾಸ್‌ಕಾಮ್‌ ಹೊಂದಿತ್ತು. ಇದನ್ನು ಸಾಧಿಸುವಲ್ಲಿ ಯಾವುದೇ ತೊಂದರೆಯಾಗಿಲ್ಲ. 2003- 04ರಲ್ಲೂ ಇದೇ ರಫ್ತು ಪ್ರಗತಿಯ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಕಾರ್ನಿಕ್‌ ಹೇಳಿದರು.

1 ಶತಕೋಟಿ ಡಾಲರ್‌ ವಹಿವಾಟಿನ ಭಾಗ್ಯ : ಸ್ಟೋರೇಜ್‌ ನೆಟ್‌ವರ್ಕಿಂಗ್‌ ಅವಕಾಶದಿಂದ ಭಾರತೀಯ ಕಂಪನಿಗಳಿಗೆ 1 ಶತಕೋಟಿ ಅಮೆರಿಕನ್‌ ಡಾಲರ್‌ ವಹಿವಾಟು ನಡೆಸುವ ಅವಕಾಶ ಸಿಕ್ಕಿದೆ. ಇಡೀ ಜಗತ್ತಿನ ಉದ್ದಿಮೆ ಇವತ್ತು ನಿರ್ವಹಣಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹೆಣಗಾಡುತ್ತಿರುವುದರಿಂದ, ಈ ಅವಕಾಶ ಭಾರತಕ್ಕೆ ಸವಾಲೂ ಹೌದು. ಈ ಅವಕಾಶವನ್ನು ಅಭಿವೃದ್ಧಿಯ ಮೆಟ್ಟಿಲನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿಗಳು ಕೆಲಸ ಮಾಡಬೇಕು ಎಂದು ಕಾರ್ನಿಕ್‌ ಕರೆ ಕೊಟ್ಟರು.

(ಪಿಟಿಐ)

ಪೂರಕ ಓದಿಗೆ-
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X