ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ್‌ ಮಳವಳ್ಳಿಗೆ ಸಿಲಿಕಾನ್‌ ವ್ಯಾಲಿಯಲ್ಲಿ ಮನ್ನಣೆ

By Staff
|
Google Oneindia Kannada News

Kumar Malavalliಬೆಂಗಳೂರು : ಅನಿವಾಸಿ ಕನ್ನಡಿಗ ಕುಮಾರ್‌ ಮಳವಳ್ಳಿ ಅವರಿಗೀಗ ಇನ್ನೊಂದು ಗೌರವ.

ಸಾಧನೆಯ ಹಾದಿಯಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿರುವ ಮಳವಳ್ಳಿ ಅವರೀಗ ಅಮೆರಿಕದ ಸಿಲಿಕಾನ್‌ ವ್ಯಾಲಿಯಲ್ಲಿ ಮನ್ನಣೆ ಪಡೆಯುತ್ತಿರುವ ವ್ಯಕ್ತಿ. ಸ್ಟೋರೇಜ್‌ ನೆಟ್‌ವರ್ಕಿಂಗ್‌ನ ‘ಗುರು’ ಎನಿಸಿಕೊಂಡಿರುವ ಮಳವಳ್ಳಿ ಅವರು ಫೆ.21 ರಂದು ಅಮೆರಿಕದಲ್ಲಿನ ಸಿಲಿಕಾನ್‌ ವ್ಯಾಲಿಯ Engineering Hall of Fame ಗೆ ನೇಮಕಗೊಳ್ಳುವ ಮೂಲಕ ಪ್ರತಿಷ್ಠಿತ ಮನ್ನಣೆ ಹೊಂದುವರು.

ಕುಮಾರ್‌ ಮಳವಳ್ಳಿ ಮೂಲತಃ ಮಂಡ್ಯ ಜಿಲ್ಲೆಯವರು. ಫೈಬರ್‌ ಚಾನಲ್‌ ಹಾಗೂ ಸ್ಟೋರೇಜ್‌ ನೈಟ್‌ವರ್ಕಿಂಗ್‌ ಇಂಡಸ್ಟ್ರಿಯ ಆರ್ಕಿಟೆಕ್ಟ್‌ ಆದ ಮಳವಳ್ಳಿ- ಯಶಸ್ವಿ ಉದ್ಯಮಿಯೂ ಹೌದು. ಅವರು ಬ್ರೊಕೇಡ್‌ ಕಮ್ಯುನಿಕೇಷನ್‌ನ ಸಹ ಸ್ಥಾಪಕರೂ ಹೌದು.

ಅಮೆರಿಕದ ಸಿಲಿಕಾನ್‌ ವ್ಯಾಲಿಯ ಮೇಲೆ ಮಳವಳ್ಳಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಗಣನೀಯ ತಾಂತ್ರಿಕ ಕೊಡುಗೆಯನ್ನು ಸ್ಮರಿಸಿ ಅವರನ್ನು ಗೌರವಿಸಲಾಗುತ್ತಿದೆ ಎಂದು ಸ್ಟೋರೇಜ್‌ ನೆಟ್‌ವರ್ಕಿಂಗ್‌ ಸಮಿತ್‌ನ ನಿರ್ದೇಶಕ ಶ್ರೀಮತಿ ಬ್ರೆಂದ ಕ್ರಿಸ್ಟೆನ್‌ಸನ್‌ ಜ.21ರ ಮಂಗಳವಾರ ತಿಳಿಸಿದರು. ಸ್ಟೋರೇಜ್‌ ನೆಟ್‌ವರ್ಕಿಂಗ್‌ ಸಮಿತ್‌ ಬೆಂಗಳೂರಿನಲ್ಲಿ ಚಟುವಟಿಕೆ ಪ್ರಾರಂಭಿಸಿದ ಸಂದರ್ಭದಲ್ಲಿ ಬ್ರೆಂದ ಮಾತನಾಡುತ್ತಿದ್ದರು.

ಈ ಮನ್ನಣೆ ಹೊಂದುವುದು ಅತ್ಯಂತ ಕಠಿಣವಾಗಿದ್ದು , ಎರಡು ದಶಕಗಳ ಹಿಂದೆ ಅಮೆರಿಕಗೆ ತೆರಳಿದ ಕುಮಾರ್‌ ಮಳವಳ್ಳಿ ಅವರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗುತ್ತಿರುವ ಮೊದಲ ಭಾರತೀಯರು ಎಂದು ಶ್ರೀಮತಿ ಬ್ರೆಂದ ಬಣ್ಣಿಸಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X