• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಿನ್ನರಿಗೆ ಹೈಕಮಾಂಡ್‌ ಎಚ್ಚರಿಕೆ, ಕೃಷ್ಣರಿಗೆ ಅಭಯಹಸ್ತ

By Staff
|

ನವದೆಹಲಿ : ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಖ್ಯಮಂತ್ರಿಯನ್ನು ಬದಲಿಸುವ ಪ್ರಯೋಗದ ಸಾಧ್ಯತೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟವಾಗಿ ತಳ್ಳಿಹಾಕಿದೆ.

ಮಹಾರಾಷ್ಟ್ರ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸುವ ಮೂಲಕ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ಪದಚ್ಯುತಗೊಳಿಸುವ ಭಿನ್ನರ ಬೇಡಿಕೆಯನ್ನು ತಳ್ಳಿಹಾಕಿರುವ ಕಾಂಗ್ರೆಸ್‌ ಹೈಕಮಾಂಡ್‌- ಕೃಷ್ಣ ಅವರ ನಾಯಕತ್ವವನ್ನು ಶ್ಲಾಘಿಸಿದೆ.

ಸರ್ಕಾರವನ್ನು ಎಸ್ಸೆಂ.ಕೃಷ್ಣ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ಆಡಳಿತದಲ್ಲಿ ಋಣಾತ್ಮಕ ಅಂಶಗಳಿಗಿಂಥ ಧನಾತ್ಮಕ ಅಂಶಗಳೇ ಹೆಚ್ಚಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವಯಲಾರ್‌ ರವಿ ಸೋಮವಾರ ತಿಳಿಸಿದರು.

ಭಿನ್ನಮತೀಯರಿಗೆ ಮುಖಭಂಗ

ವಿರೋಧ ಪಕ್ಷಗಳ ಅಪ ಪ್ರಚಾರದ ಆಂದೋಲನಕ್ಕಿಂಥ ಭಿನ್ನರ ಚಟುವಟಿಕೆಗಳು ಕೆಟ್ಟದಾಗಿವೆ. ಕರ್ನಾಟಕದಲ್ಲಿ ಭಿನ್ನಮತವನ್ನು ಪ್ರೋತ್ಸಾಹಿಸುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ವಯಲಾರ್‌ ರವಿ ಸ್ಪಷ್ಟಪಡಿಸಿದರು.

ಕಳೆದ ನಾಲ್ಕೈದು ತಿಂಗಳಲ್ಲಿ ಕೃಷ್ಣ ಸರ್ಕಾರ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದೆ. ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆ ಹಾಗೂ ನರಹಂತಕ ವೀರಪ್ಪನ್‌ನಿಂದ ಮಾಜಿ ಸಚಿವ ನಾಗಪ್ಪನವರ ಅಪಹರಣ-ಹತ್ಯೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಕೃಷ್ಣ ನೇತೃತ್ವದ ರಾಜ್ಯ ಸಚಿವ ಸಂಪುಟ ಒಗ್ಗಟ್ಟಿನಲ್ಲಿ ಕೆಲಸ ಎಂದು ರವಿ ತೃಪ್ತಿ ವ್ಯಕ್ತಪಡಿಸಿದರು.

ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಭಿನ್ನಮತವನ್ನು ಮರೆತು ಐಕ್ಯತೆಯನ್ನು ಪ್ರದರ್ಶಿಸಲು ಇದು ಸಕಾಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಇನ್ನೆರಡು ಮೂರು ದಿನಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಘಟಕಕ್ಕೆ ನೂತನ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು ಎಂದು ವಯಲಾರ್‌ ರವಿ ಹೇಳಿದರು.

ವಯಲಾರ್‌ ರವಿ ಅವರ ಹೇಳಿಕೆಯಿಂದಾಗಿ ಭಿನ್ನಮತೀಯ ನಾಯಕರೆಂದು ಗುರ್ತಿಸಿಕೊಂಡಿದ್ದ ಸಚಿವ ಎಚ್‌.ಕೆ.ಪಾಟೀಲ್‌ ಹಾಗೂ ಮಾಜಿ ಕೇಂದ್ರ ಸಚಿವ, ಸಂಸದ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಭಾರೀ ಮುಖಭಂಗ ಆದಂತಾಗಿದೆ.

ದಾವೋಸ್‌ಗೆ ಕೃಷ್ಣ : ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲು ಜ.20ರ ರಾತ್ರಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ದಾವೋಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಜೊತೆಗಿನ 10 ದಿನಗಳ ಈ ವಿದೇಶೀ ಪ್ರವಾಸದಲ್ಲಿ ಕೃಷ್ಣ ಇಂಗ್ಲೆಂಡಿಗೂ ಹೋಗಲಿದ್ದಾರೆ. ಜನವರಿ 29ರಂದು ಬೆಂಗಳೂರಿಗೆ ವಾಪಸ್ಸಾಗುವರು.

ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೃಷ್ಣಗೆ ಮಾತ್ರ ಸಮಾವೇಶಕ್ಕೆ ಬುಲಾವು ಸಿಕ್ಕಿದೆ. ಕರ್ನಾಟಕದ ಮುಖ್ಯಮಂತ್ರಿಯಾಬ್ಬರಿಗೆ ಈ ಗೌರವ ಸಿಗುತ್ತಿರುವುದು ಇದು ಎರಡನೇ ಬಾರಿ.

(ಪಿಟಿಐ)

Post your views

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more