ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಟಲಿಯಲ್ಲಿ ಸಾರಾಯಿ, ಚಿಕ್ಕ ಪಾಕೆಟ್‌ನಲ್ಲಿ ಹಾಲು

By Staff
|
Google Oneindia Kannada News

ಮಡಿಕೇರಿ/ಮೈಸೂರು: ಬಾಟಲಿಯಲ್ಲಿ ಸಾರಾಯಿ ನೀಡುವ ಕುರಿತು ಪರಿಶೀಲನೆ ನಡೆಸುತ್ತಿರುವ ರಾಜ್ಯ ಸರ್ಕಾರ ಚಿಕ್ಕ ಪಾಕೆಟ್‌ನಲ್ಲಿ ನಂದಿನಿ ಹಾಲನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಪ್ರಸ್ತುತ ಸಾಚೆಟ್‌ನಲ್ಲಿ ನೀಡುತ್ತಿರುವ ಸಾರಾಯಿಯನ್ನು ಬಾಟಲಿಯಲ್ಲಿ ನೀಡುವ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಅಬಕಾರಿ ಸಚಿವ ಎಂ.ಎಂ.ನಾಣಯ್ಯ ಮಡಿಕೇರಿಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಿಂದ ಸರ್ಕಾರ 2300 ಕೋಟಿ ರುಪಾಯಿ ವಾರ್ಷಿಕ ಆದಾಯ ನಿರೀಕ್ಷಿಸಿದ್ದು , ಮುಂದಿನ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ರಾಜ್ಯ ಸರ್ಕಾರದ ನೂತನ ಅಬಕಾರಿ ನೀತಿ ಮಂಡಿಸಲಿದ್ದಾರೆ. ಆನಂತರ ಹೊಸ ಬಾರ್‌ಗಳಿಗೆ ಪರವಾನಗಿ ನೀಡುವ ವಿಷಯವನ್ನು ಕುರಿತು ಪರಿಶೀಲಿಸಲಾಗುವುದು ಎಂದು ನಾಣಯ್ಯ ತಿಳಿಸಿದರು.

ನಂದಿನಿ ಹಾಲಿನ ಚಿಕ್ಕ ಪಾಕೆಟ್‌
ಗಣ ರಾಜ್ಯೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಒಕ್ಕೂಟದಿಂದ 100 ಮಿ.ಲೀ. ನ ನಂದಿನ ಹಾಲಿನ ಪಾಕೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. 100 ಮಿ.ಲೀ. ಹಾಲಿನ ದರ 1.5 ರುಪಾಯಿ ಇರುತ್ತದೆ ಎಂದು ಪಶು ಸಂಗೋಪನೆ ಹಾಗೂ ಸಕ್ಕರೆ ಸಚಿವ ಎಂ.ಮಹಾದೇವು ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಡು ಬಡವರಿಗೂ ಹಾಲು ದೊರೆಯಲೆಂಬ ಉದ್ದೇಶದಿಂದ 100 ಮಿ.ಲೀ. ಹಾಲನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಾರಂಭದಲ್ಲಿ ಮೈಸೂರಿಗೆ ಮಾತ್ರ ಸೀಮಿತವಾಗಿರುವ ಈ ಹಾಲಿನ ಪಾಕೆಟ್‌ಗಳು ಆನಂತರ ರಾಜ್ಯದ ಇತರೆಡೆಗಳಲ್ಲೂ ದೊರೆಯಲಿವೆ ಎಂದು ಮಹದೇವು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X