ವಿಪ್ರೋ ಸುಖದುಃಖ : ಲಾಭ ಗಳಿಕೆ ವೃದ್ಧಿ ಯಲ್ಲಿ ಹೊಸ ಗುರಿ
ಬೆಂಗಳೂರು : ಡಿಸೆಂಬರ್ 2002 ಕ್ಕೆ ಕೊನೆಗೊಂಡ ತ್ರೆೃಮಾಸಿಕದಲ್ಲಿ ತನ್ನ ಸುಖದುಃಖಗಳ ಲೆಕ್ಕಾಚಾರವನ್ನು ವಿಪ್ರೋ ಟೆಕ್ನಾಲಜೀಸ್ ಲಿಮಿಟೆಡ್ ಜ.17ರ ಶುಕ್ರವಾರ ಮಂಡಿಸಿದೆ. ಕಳೆದ ವರ್ಷದ ತ್ರೆೃಮಾಸಿಕಕ್ಕೆ ಹೋಲಿಸಿದಲ್ಲಿ ಪ್ರಸಕ್ತ ತ್ರೆೃಮಾಸಿಕದಲ್ಲಿ ವಿಪ್ರೋ ಲಾಭ ಗಳಿಕೆ ಶೇ.27ರಷ್ಟು ಹೆಚ್ಚಿದೆ.
ವಿಪ್ರೋದ ಆದಾಯ 11 ಬಿಲಿಯನ್ ರುಪಾಯಿಗಳ ಗೆರೆ ಮುಟ್ಟಿದ್ದು - ಲಾಭ ಗಳಿಕೆ 2.3 ಬಿಲಿಯನ್ ರುಪಾಯಿಗಳು ಎಂದು ವಿಪ್ರೋದ ಪ್ರಕಟಣೆ ತಿಳಿಸಿದೆ.
ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೆೃಮಾಸಿಕದ ಅವಧಿಯಲ್ಲಿ ತನ್ನ ಜಾಗತಿಕ ಸೇವಾ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಿಕೊಂಡಿರುವ ವಿಪ್ರೋ 24 ಹೊಸ ಗ್ರಾಹಕ ಸಂಸ್ಥೆಗಳನ್ನು ಪಡೆದಿದೆ. ವಿಪ್ರೋ ಸ್ಪೆಕ್ಟ್ರಾಮೈಂಡ್ 564 ಮಿಲಿಯನ್ ರುಪಾಯಿಗಳ ಲಾಭ ಗಳಿಸಿದ್ದು , ವಿಪ್ರೋ ಪಿಬಿಐಟಿ ಲಾಭ ಗಳಿಕೆ 140 ಮಿಲಿಯನ್ ರುಪಾಯಿ ಮುಟ್ಟಿದೆ.
2003 ಕ್ಕೆ ಕೊನೆಗೊಳ್ಳುವ ತ್ರೆೃಮಾಸಿಕದಲ್ಲಿ ತನ್ನ ಜಾಗತಿಕ ಐಟಿ ಸೇವೆಗಳ ಮೂಲಕ 162 ಮಿಲಿಯನ್ ಡಾಲರ್ಗಳು, ಸ್ಪೆಕ್ಟ್ರಾಮೈಂಡ್ನಿಂದ 12 ಮಿಲಿಯನ್ ಡಾಲರ್ಗಳು ಹಾಗೂ ವಿಪ್ರೋ ಹೆಲ್ತ್ ಸೈನ್ಸ್ನಿಂದ 2.5 ಮಿಲಿಯನ್ ಡಾಲರ್ಗಳ ಲಾಭ ಗಳಿಕೆಯ ಗುರಿಯನ್ನು ಹೊಂದಲಾಗಿದೆ ಎಂದು ವಿಪ್ರೋ ಪ್ರಕಟಣೆ ತಿಳಿಸಿದೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ