• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಣ್ಣಿನ ಮಗ ದೇವೇಗೌಡ ಹಾಗೂ ಮೃತ ರೈತನ ಕುಟುಂಬ

By Staff
|

ಧಾರವಾಡ : ದೇವೇಗೌಡರು ರಾಜಕೀಯ ಬಿಡ್ತಾರಂತೆ ಅಂತ ಮೊನ್ನೆ ಸುದ್ದಿ ದಟ್ಟೈಸಿದಾಗ, ನಕ್ಕವರದೆಷ್ಟೊ. ಹಾಗೆ ಸುದ್ದಿ ಹಬ್ಬಲು ಕಾರಣ- ರಾಜಕಾರಣದಲ್ಲಿ ಯುವಕರನ್ನು ಮುಂದಕ್ಕೆ ತಂದು, ಹಿರಿಯರು ಹಿಂದೆ ಸರಿಯಬೇಕು ಎಂದು ಗೌಡರು ಮುಫತ್ತು ಸಲಹೆ ಕೊಟ್ಟಿದ್ದು. ಆದರೆ ಅವರ ವರಸೆಗಳನ್ನು ನೋಡಿದರೆ ಗದ್ದುಗೆ ಹೆಬ್ಬಯಕೆ ಇನ್ನೂ ಬತ್ತಿಲ್ಲ.

ಬೆಳೆ ನಷ್ಟ ಅಥವಾ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಹೋಗದಿದ್ದರೂ, ದೇವೇಗೌಡರಂತೂ ಪಾದ ಬೆಳೆಸಿಯೇ ತೀರುತ್ತಾರೆ. ತಮ್ಮ ಪಕ್ಷದ ವತಿಯಿಂದ ಪರಿಹಾರವನ್ನೂ ಕೊಡಿಸುತ್ತಾರೆ. ಅಲ್ಲಿ ಜಮಾಯಿಸುವ ಒಂದಷ್ಟು ಸ್ಥಳೀಯ ಪುಡಿ ರಾಜಕಾರಣಿಗಳ ಮುಂದೆ ಸರ್ಕಾರವನ್ನು ಎಕ್ಕಾಮಕ್ಕಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಮೃತ ರೈತನ ಕುಟುಂಬದವರೊಟ್ಟಿಗೆ ಟೀವಿ ಚಾನೆಲ್ಲುಗಳಿಗೆ, ಕೆಮೆರಾಗಳಿಗೆ ಪೋಸು ಕೊಡುತ್ತಾರೆ. ಸುದ್ದಿಗಾರರು ಮೈಕು ಹಿಡಿದರೆ ಮೆಲ್ಲ ಮೆಲ್ಲಗೆ ರಾಜಕೀಯ ಮಾತಾಡುತ್ತಾರೆ !

ಧಾರವಾಡದಲ್ಲಿ ಈಚೆಗೆ ಮಾಡಿದ ಸಾಲ ತೀರಿಸಲಾರದೆ ರೈತನೊಬ್ಬ ಮೃತಪಟ್ಟ. ಆತನ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ದೇವೇಗೌಡರು ಚಾಚೂ ತಪ್ಪದೆ ಮೇಲೆ ಹೇಳಿದ್ದೆಲ್ಲವನ್ನೂ ಮಾಡಿದರು. ಮೃತ ರೈತನ ಮೂವರು ಸೋದರರ ಪೈಕಿ ಒಬ್ಬ ಕಾಲು ಹಿಡಿದದ್ದೇ ತಡ, ಕರಗಿಹೋದ ಗೌಡರು 500 ರುಪಾಯಿಯ 20 ನೋಟುಗಳನ್ನು ತೆಗೆದು ಆತನ ಕೈಗಿತ್ತರು. ಮೃತ ರೈತನ ದೊಡ್ಡ ಮಗನಿಗೆ ಕೆಲಸ ಕೊಡಿಸುವ ಭರವಸೆ ಕೊಟ್ಟರು. ಇಷ್ಟೆಲ್ಲ ಮಾಡೋಕೆ ಮುಂಚೆ ‘ನಾನೇನು ಮಾಡಲಿ, ನಾನೇನು ಸರ್ಕಾರ ನಡೆಸುತ್ತಿದ್ದೇನೆಯೇ?’ ಅಂತ ಗೋಳು ತೋಡಿಕೊಂಡರು. ಬೆಂಗಳೂರಲ್ಲಿ ಕೃಷ್ಣ ಇದ್ದಾರೆ. ದೆಹಲಿಯಲ್ಲಿ ವಾಜಪೇಯಿ ಇದ್ದಾರೆ. ಅವರೇ ನಿಮ್ಮ ಕಣ್ಣೀರೊರೆಸಬೇಕು ಎಂದು ತಣ್ಣಗೆ ಕಡ್ಡಿ ಬೀಸಿದರು.

ಹೀಗೆ ತಣ್ಣಗೆ ರಾಜಕೀಯದ ವರಸೆ ಮೆರೆಯುತ್ತಿದ್ದ ಗೌಡರನ್ನು, ಜನತಾ ದಳದ ಉಭಯ ಬಣಗಳ ವಿಲೀನದ ಬಗ್ಗೆ ಕೇಳಿದಾಗ, ‘ಡೋಂಟ್‌ ಟಾಕ್‌ ಪಾಲಿಟಿಕ್ಸ್‌, ಟಾಕ್‌ ಅಬೌಟ್‌ ಫಾರ್ಮರ್ಸ್‌’ ಅಂತ ಇಂಗ್ಲಿಷಲ್ಲೇ ಝಾಡಿಸಿಬಿಡೋದೆ?!

(ಇನ್ಫೋ ವಾರ್ತೆ)

Post your Views

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more