ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರಜ್ಯೋತಿ ದರ್ಶನಕ್ಕೆ ಕಾಯುತ್ತಿರುವ ಭಕ್ತರು

By Staff
|
Google Oneindia Kannada News

ಶಬರಿಮಲೆ : ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಜನವರಿ 14ರಂದು ಬೆಳಗ್ಗೆ ‘ಮಕರವಿಳಕ್ಕು’ ಕಾಣಿಸಲಿದ್ದು ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.

ಒಂದೂವರೆ ವರ್ಷದ ಬಾಲಕರಿಂದ ಹಿಡಿದು 80 ವರ್ಷದ ವೃದ್ಧರವರೆಗೆ ಕಪ್ಪು ವಸ್ತ್ರ ಧರಿಸಿದ ಅಯ್ಯಪ್ಪ ವ್ರತಧಾರಿಗಳು ಮಕರ ಜ್ಯೋತಿ ದರ್ಶನಕ್ಕೆ ಕಾಯುತ್ತಿದ್ದಾರೆ. ವಿದೇಶದಿಂದ ಎಂಟು ಮಂದಿ ಅಯ್ಯಪ್ಪ ಭಕ್ತರು ಆಗಮಿಸಿದ್ದಾರೆ.

ಪಂಪಾ ಕ್ಷೇತ್ರದಲ್ಲಿ ಸಾವಿರಾರು ವಾಹನಗಳು ಜಮೆಗೊಂಡಿದ್ದು, ಶಬರಿಮಲೆ ಕ್ಷೇತ್ರವು ಜನಸಾಗರದಿಂದ ಕಿಕ್ಕಿರಿದು ತುಂಬಿದೆ. ಭಕ್ತರು ಮಕರ ಜ್ಯೋತಿ ವೀಕ್ಷಣೆಗೆ ಆಯಕಟ್ಟಿನ ಸ್ಥಳಗಳನ್ನು ಹುಡುಕಿಕೊಂಡು ಮುಂಚಿತವಾಗಿಯೇ ಸೇರಿಕೊಂಡಿದ್ದಾರೆ. ವ್ಯವಸ್ಥೆಗಳು ಅನುಕೂಲಕರವಾಗಿಲ್ಲದೇ ಇದ್ದರೂ ಭಕ್ತರು ಶಬರಿಗಿರಿಗೆ ಧಾವಿಸುತ್ತಲೇ ಇದ್ದಾರೆ. ಎರಿಮೇಲ್‌ನಲ್ಲಿ ಶನಿವಾರ ಸಂಜೆ ಸಾಧಾರಣ ಮಳೆ ಸುರಿದರೂ ಲೆಕ್ಕಿಸದೇ ಭಕ್ತಾದಿಗಳು ಪೇಟತುಳ್ಳಲ್‌ ಆಚರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X