ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಗ್ನಿ-1’ ಕ್ಷಿಪಣಿಯ ಯಶಸ್ವಿ ಪ್ರಾಯೋಗಿಕ ಪರೀಕ್ಷೆ

By Staff
|
Google Oneindia Kannada News

ಬಲಸೋರ್‌ : ಮಿಲಿಟರಿ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳುವ ಪಥದಲ್ಲಿ ಭಾರತ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದು - ‘ಅಗ್ನಿ-1’ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯನ್ನು ಒರಿಸ್ಸಾ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿನ ವೀಲರ್ಸ್‌ ದ್ವೀಪದ ಉಡ್ಡಯನಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಜನವರಿ 9 ರ ಗುರುವಾರ ಬೆಳಗ್ಗೆ 8.47 ರ ಸುಮಾರಿಗೆ ಈ ಯಶಸ್ವಿ ಕ್ಷಿಪಣಿ ಪ್ರಯೋಗ ನಡೆಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಅಗ್ನಿ-1 ಕ್ಷಿಪಣಿಯ ಮೊದಲ ಪ್ರಾಯೋಗಿಕ ಪರೀಕ್ಷೆ 2002 ನೇ ಇಸವಿಯ ಜನವರಿ 25 ರಂದು ನಡೆದಿತ್ತು . ಅಗ್ನಿ ಸರಣಿಯ ಅಲ್ಪಾಂತರ ಗಾಮಿ ಕ್ಷಿಪಣಿಗಳ ಸಾಲಿಗೆ ಸೇರಿರುವ ಅಗ್ನಿ-1 ಕ್ಷಿಪಣಿ 700 ಕಿಮೀ ದೂರದ ನಿಖರ ಗುರಿಯನ್ನು ಕ್ರಮಿಸಬಲ್ಲದು.

ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಹಾಗೂ ರಕ್ಷಣಾ ಸಚಿವಾಲದ ಸಲಹೆಗಾರ ವಿ.ಕೆ.ಆತ್ರೆ ಅವರು ಕ್ಷಿಪಣಿ ಪ್ರಯೋಗ ಸಂದರ್ಭದಲ್ಲಿ ಹಾಜರಿದ್ದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X