ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇನಲ್ಲಿ ಮೈಸೂರು, ಹಂಪಿ, ಹುಬ್ಬಳ್ಳಿಗೆ ವಿಮಾನ ಯಾನ

By Staff
|
Google Oneindia Kannada News

ಬೆಂಗಳೂರು : ಮೈಸೂರು, ಹಂಪಿ, ಹುಬ್ಬಳ್ಳಿ, ಬೆಳಗಾವಿ ನಡುವೆ ಬರುವ ಮೇ ತಿಂಗಳಿಂದ ವಿಮಾನ ಯಾನ ಸಾಧ್ಯ. ಡೆಕ್ಕನ್‌ ವಿಮಾನ ಯಾನ ಕಂಪನಿ ಈ ಜಾಗೆಗಳ ನಡುನೆ ನಾಲ್ಕು ವಿಮಾನಗಳನ್ನು ಹಾರಿಸಲಿದೆ.

ಡೆಕ್ಕನ್‌ ಏವಿಯೇಶನ್‌ ಪ್ರೆೃವೇಟ್‌ ಲಿಮಿಟೆಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಹಾರಲಿರುವ ನಾಲ್ಕು ವಿಮಾನಗಳು ಪುಟ್ಟಪರ್ತಿ, ವಿಜಯವಾಡ, ರಾಜಮುಂಡ್ರಿ, ಕೊಯಮತ್ತೂರು ಹಾಗೂ ಕಲ್ಲಿಕೋಟೆಗಳನ್ನೂ ಸಂಪರ್ಕಿಸಲಿವೆ. ಈ ನಾಲ್ಕು ವಿಮಾನಗಳ ಹಾರಾಟ ಯಶಸ್ವಿಯಾದಲ್ಲಿ ಅಕ್ಟೋಬರ್‌ನಲ್ಲಿ ಇನ್ನೂ ಎರಡು ವಿಮಾನಗಳು ದಕ್ಷಿಣ ಭಾರತದ ಇನ್ನಷ್ಟು ಜಾಗೆಗಳ ನಡುವೆ ಹಾರಲಿವೆ ಎಂದರು.

ಕೆನಡಿಯನ್‌ ವಿಮಾನ ಬಂಬಾರ್ಡಿಯರ್‌- 8- 10 ವಿಶ್ವದ ಅತಿ ದೊಡ್ಡ ಪ್ರಾದೇಶಿಕ ವ್ಯಾಪಾರಿ ವಿಮಾನ. 35 ಸೀಟುಗಳುಳ್ಳ ಇವುಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಸವಲತ್ತುಗಳಿವೆ. ಮೇ ತಿಂಗಳಿಂದ ಡೆಕ್ಕನ್‌ ಏವಿಯೇಶನ್‌ ರಾಜ್ಯದಲ್ಲಿ ಹಾರಿಸಲಿರುವುದು ಇದೇ ವಿಮಾನಗಳನ್ನು.

ಪ್ರಾದೇಶಿಕ ವಿಮಾನ ಯಾನ ಯಾಕೆ ಬೇಕು ಅಂತ ಕೇಳಿದರೆ, ಗೋಪಿನಾಥ್‌ ಹೇಳುತ್ತಾರೆ-ಅಮೆರಿಕ ಜನಸಂಖ್ಯೆ ಭಾರತದ ನಾಲ್ಕನೇ ಒಂದರಷ್ಟಿದೆ. ಆದರೆ, ಅಲ್ಲಿ ಪ್ರತಿನಿತ್ಯ ಹಾರುವ ವಾಣಿಜ್ಯ ವಿಮಾನಗಳು 40 ಸಾವಿರ. ಆ ಲೆಕ್ಕಾಚಾರದಲ್ಲಿ ಭಾರತದಲ್ಲಿ ನಿತ್ಯ 1.6 ಲಕ್ಷ ವಿಮಾನಗಳು ಹಾರಬೇಕು. ಇದರಲ್ಲಿ ಒಂದು ಪ್ರತಿಶತ ಅಂತ ಇಟ್ಟುಕೊಂಡರೂ, 1,600 ವಿಮಾನಗಳಾದರೂ ಹಾರಲೇಬೇಕು. ಆದರೆ ಭಾರತದಲ್ಲಿ ಹಾರುತ್ತಿರುವ ವಿಮಾನಗಳ ಸಂಖ್ಯೆ 400- 450 ಅಷ್ಟೆ.

ವ್ಯಾಪಾರ ಸಂಬಂಧ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಸಮಯ ಉಳಿದರೆ ಒಳ್ಳೆಯದು ಅಂತ ಕಾಯುತ್ತಿರುವವರಿಗೇನೂ ಕಡಿಮೆಯಿಲ್ಲ. ರೈಲು ಪ್ರಯಾಣಿಕರ ಪ್ರತಿಶತ 10ರಷ್ಟು ಜನ ನಮ್ಮ ಗ್ರಾಹಕರಾದರೆ ಸಾಕು. ಪ್ರಾದೇಶಿಕ ವಿಮಾನ ಹಾರಾಟ ಯಶಸ್ವಿಯಾದಂತೆ.

ಪ್ರವಾಸೋದ್ಯಮ ಮತ್ತು ವ್ಯಾಪಾರಿಗಳ ಸಮಯ- ಇವೆರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಪ್ರಾದೇಶಿಕ ವಿಮಾನ ಹಾರಾಟ ಶುರುಮಾಡುತ್ತಿದ್ದೇವೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X