• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

20 ವರ್ಷದ ಬಳಿಕ ದೇಶಕ್ಕೆ ಹೊಸ ವಿಜ್ಞಾನ ನೀತಿ

By Staff
|

ಬೆಂಗಳೂರು : ತೊಂಬತ್ತನೇ ಅಖಿಲ ಭಾರತ ವಿಜ್ಞಾನ ಮೇಳ ಉದ್ಘಾಟಿಸಿದ ಪ್ರಧಾನಿ ಎ.ಬಿ.ವಾಜಪೇಯಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯನ್ನು ಶುಕ್ರವಾರ ಪ್ರಕಟಿಸಿದರು.

ಒಟ್ಟು ಸ್ಥಳೀಯ ಆದಾಯದ (ಜಿಡಿಪಿ) ಪ್ರತಿಶತ 2ರಷ್ಟನ್ನಾದರೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ವಿನಿಯೋಗಿಸುವುದಾಗಿ ಸಂಕಲ್ಪ ತೊಟ್ಟ ಪ್ರಧಾನಿ, ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ- 2003ರ ಸಂಕ್ಷಿಪ್ತ ವಿವರ ಕೊಟ್ಟರು. ಹೊಸ ನೀತಿಯಿಂದ ಬಡತನ ಮತ್ತು ಪ್ರಾದೇಶಿಕ ಅಸಮತೋಲನವನ್ನು ನೇರವಾಗಿ ಕಿತ್ತೊಗೆಯುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ದಕ್ಕಲಿದೆ. ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರಶಾಹಿ ರಹಿತವಾಗಿ ರೂಪುಗೊಳ್ಳಲಿದೆ. ವಿಜ್ಞಾನ ಸಂಬಂಧಿ ಸಚಿವಾಲಯ ಹಾಗೂ ಇಲಾಖೆಗಳ ಉನ್ನತ ಹುದ್ದರಿಗಳಲ್ಲಿ ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ ಅವಕಾಶ ಸಿಗಲಿದೆ ಎಂದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು-

  • ಕೃಷಿ ವಿಜ್ಞಾನದಲ್ಲಿ ಈವರೆಗೆ ನಡೆದಿರುವ ಶೋಧಗಳನ್ನು ಕ್ರೋಢೀಕರಿಸಿ, ಬೆಳೆಯಲ್ಲಿ ಹೆಚ್ಚು ಫಲ ತೆಗೆಯುವತ್ತ ಗಮನ ಹರಿಸಬೇಕು.
  • ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಕೋಟ್ಯಂತರ ನಾಗರಿಕರು ಎದುರಿಸುತ್ತಿದ್ದಾರೆ. ಅಗತ್ಯಕ್ಕನುಗುಣವಾಗಿ ಇಂಥ ಮೂಲಭೂತ ಸಮಸ್ಯೆ ನಿವಾರಣೆಗೆ ವಿಜ್ಞಾನ ಸಮುದಾಯ ಒತ್ತು ಕೊಡಬೇಕು.
  • ನೈಸರ್ಕಿಕ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಪರಿಸರಕ್ಕೂ ಪೆಟ್ಟು ಕೊಡದಂತೆ ಮಾಡಲು ಸಾಕಷ್ಟು ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಅವಶ್ಯಕತೆಯಿದೆ. ಇದನ್ನು ಕಟ್ಟಿಕೊಡುವುದು ವಿಜ್ಞಾನಿಗಳ ಹೊಣೆಯಾಗಬೇಕು.
  • ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳನ್ನು ವಿವಿಧ ಕ್ಷೇತ್ರಗಳ ಯಶಸ್ಸಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು.
  • 1983ರ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಇದೇ ಮೊದಲು ಜಾರಿಗೆ ಬರುತ್ತಿದೆ. ಈ ಅವಧಿಯಲ್ಲಿ ನಾವು ಸಾಧಿಸಿರುವುದು ಸಾಕಷ್ಟಿದೆ. ಅದಕ್ಕೆ ತಕ್ಕಂತೆ ಹೊಸ ನೀತಿ ರೂಪುಗೊಂಡಿದೆ.
  • ಕೃಷಿ ಉತ್ಪನ್ನಗಳ ಪೈಕಿ ಪೋಲಾಗುವುದನ್ನು ತಡೆಗಟ್ಟಿ, ಗ್ರಾಮೀಣ ಜನರಿಗೆ ಹೊಸ ಕೆಲಸದ ಅವಕಾಶಗಳನ್ನು ಕಲ್ಪಿಸಿಕೊಡುವ ಸವಾಲು ಇವತ್ತಿಗೂ ಇದ್ದೇ ಇದೆ. ವಿಜ್ಞಾನ ಸಮುದಾಯ ಇದಕ್ಕೆ ಮೊದಲ ಆದ್ಯತೆ ಕೊಟ್ಟು, ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ಕೊಡಬೇಕು.
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳಲ್ಲಿ ವಯಸ್ಸು ಆಧರಿಸಿ ಬಡ್ತಿ ಕೊಡುವ ಪ್ರಕ್ರಿಯೆ ನಿಲ್ಲಬೇಕು. ಪ್ರತಿಭಾನ್ವಿತ ಯುವಕರು ವಿಜ್ಞಾನದತ್ತ ವಿಕರ್ಷಿತರಾಗುತ್ತಿರುವುದಕ್ಕೆ ಇದೂ ಒಂದು ಕಾರಣ.

ಪ್ರಶಸ್ತಿ ಪ್ರದಾನ : ಇನ್ಫೋಸಿಸ್‌ ರಾಜಗುರು ಎನ್‌.ಆರ್‌.ನಾರಾಯಣ ಮೂರ್ತಿ, ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ದ ನಿರ್ದೇಶಕ ಸಿ.ಮಾಧವನ್‌ ನಾಯರ್‌ ಸೇರಿದಂತೆ 33 ಸಾಧಕರಿಗೆ ಪ್ರಧಾನಿ ವಾಜಪೇಯಿ ವಿವಿಧ ವಿಜ್ಞಾನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ನಾರಾಯಣ ಮೂರ್ತಿ, ಜವಾಹರಲಾಲ್‌ ನೆಹರೂ ಜನ್ಮ ಶತಾಬ್ದಿ ಪ್ರಶಸ್ತಿಗೆ ಭಾಜನರಾದರು. ನಾಯರ್‌ ಅವರಿಗೆ ವಿಕ್ರಂ ಸಾರಾಬಾಯಿ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಭಾರೀ ಪ್ರಶಸ್ತಿ : ಭಾರತೀಯ ವಿಜ್ಞಾನ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ 25 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ಕೊಡುವುದಾಗಿ ಪ್ರಧಾನಿ ಘೋಷಿಸಿದರು. ದೇಶ ವಿದೇಶಗಳ ಪ್ರಸಿದ್ಧ ವಿಜ್ಞಾನಿಗಳು ಈ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುತ್ತಾರೆ ಎಂದರು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮುರಳಿ ಮನೋಹರ ಜೋಷಿ ಮಾಡಿದ ಆಗ್ರಹಕ್ಕೆ ಪ್ರಧಾನಿ ಕೊಟ್ಟ ಉತ್ತರ ಇದಾಗಿತ್ತು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮುರಳಿ ಮನೋಹರ ಜೋಷಿ, ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್‌ ಸಮಾರಂಭದಲ್ಲಿ ಹಾಜರಿದ್ದರು. 5 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ವಿದೇಶಗಳ 80 ವಿಜ್ಞಾನಿಗಳೂ ಸೇರಿದಂತೆ 3,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more