• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ವರ್ಷ-2003ಕ್ಕೆ ಬೆಂಗಳೂರಲ್ಲಿ ಸ್ವಾಗತ ಸಂಭ್ರಮ

By Staff
|

ಬೆಂಗಳೂರು : ಕುಣಿತ, ಪಟಾಕಿ ಸಿಡಿತ, ಪರಸ್ಪರ ಸಿಹಿ ಹಂಚಿಕೆ ಹಾಗೂ ಶುಭಾಶಯ ವಿನಿಮಯಗಳೊಂದಿಗೆ ಬೆಂಗಳೂರಿಗರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.

ಬೆಂಗಳೂರಿನ ಪ್ರತಿಷ್ಠಿತ ರಸ್ತೆಯಾದ ಮಹಾತ್ಮಗಾಂಧಿ ರಸ್ತೆಯಂತೂ ಡಿಸೆಂಬರ್‌ 31 ರ ರಾತ್ರಿಯಿಡೀ ಸಂತೋಷದ ಹುಚ್ಚುಹೊಳೆಯಲ್ಲಿ ಜಗಮಗಿಸುತ್ತಿತ್ತು . ಬ್ರಿಗೇಡ್‌ ರಸ್ತೆ , ಸೇಂಟ್‌ ಮಾರ್ಕ್ಸ್‌ ರಸ್ತೆ , ಚರ್ಚ್‌ ರಸ್ತೆ , ರಹೆಸಿಡೆನ್ಸಿ ರಸ್ತೆ , ಸೆಂಟ್ರಲ್‌ ಸ್ಟ್ರೀಟ್‌ ಹಾಗೂ ಕಾಮರಾಜ ರಸ್ತೆಯ ಆಸುಪಾಸಿನಲ್ಲಿ ಹೊಸ ವರ್ಷದ ಆಚರಣೆ ಜೋರಿನಿಂದ ಕೂಡಿತ್ತು.

ಸಂಜೆಯಿಂದಲೇ ಜನಸಂದಣಿಯಿಂದ ಗಿಜಿಗುಡತೊಡಗಿದ ಗಾಂಧಿರಸ್ತೆಯಲ್ಲಿ ರಾತ್ರಿ 10 ರ ಸುಮಾರಿಗೆ ಉತ್ಸಾಹಿ ಯುವಕ ಯುವತಿಯರ ಸಮೂಹವೇ ಸೇರಿತ್ತು . ಹಷೋದ್ಘಾರ, ಕೇಕೆ, ಹಾಡು, ನರ್ತನಗಳೊಂದಿಗೆ ಬಿಯರ್‌ ನೊರೆಯೂ ನೂತನ ವರ್ಷದ ಸ್ವಾಗತದಲ್ಲಿ ಸೇರ್ಪಡೆಯಾಗಿತ್ತು . ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿಕೊಂಡಿದ್ದ ಅಂಗಡಿ ಮಳಿಗೆಗಳು ಹೊಸ ವರ್ಷದ ಆಚರಣೆಗೆ ಇಂಬು ಕೊಟ್ಟಿದ್ದವು.

ನಗರದ ಕೆಲವು ಪ್ರತಿಷ್ಠಿತ ಹೊಟೇಲ್‌, ರೆಸಾರ್ಟ್‌ಗಳಲ್ಲಿ ಹೊಸ ವರ್ಷದ ಆಚರಣೆಗೆಂದು ಜನಪ್ರಿಯ ಸಿನಿಮಾ ನಟರು ಹಾಗೂ ಪಾಪ್‌ ಸಿಂಗರ್‌ಗಳ ಆಕರ್ಷಣೆಯ ವಿಶೇಷ ಪಾರ್ಟಿಗಳನ್ನು ಏರ್ಪಡಿಸಲಾಗಿತ್ತು.

ಹೊಸ ವರ್ಷದ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಕೆಲವು ಚರ್ಚುಗಳು ರಾತ್ರಿಯಿಡೀ ತೆರೆದಿದ್ದವು. ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X