• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನತದೃಷ್ಟ ನಾಗಪ್ಪನವರ ಕೊನೆಯ ಮಾತುಗಳು..

By Staff
|

ಹನೂರು: ಮಾಜಿ ಸಚಿವ ನಾಗಪ್ಪ ಅವರ ಮೃತ ದೇಹ ದೊರೆತ ಚೆಂಗಡಿ ಅರಣ್ಯ ಪ್ರದೇಶಕ್ಕೆ ತೆರಳಿದ ನಾಗಪ್ಪ ಕುಟುಂಬದವರಿಗೆ ನಾಗಪ್ಪ ಅವರು ಬಳಸುತ್ತಿದ್ದ ಡೈರಿ ದೊರೆತಿದೆ. ಇದೇ ಸ್ಥಳದಲ್ಲಿ ಎಕೆ- 47 ಬುಲೆಟ್‌ ಮತ್ತಿತರ ವಸ್ತುಗಳು ದೊರೆತಿವೆ.

ಕರ್ನಾಟಕ ಎಸ್‌ಟಿಎಫ್‌ ಮುಖ್ಯಸ್ಥ ಜ್ಯೋತಿ ಪ್ರಕಾಶ್‌ ಮಿರ್ಜಿ ನೇತೃತ್ವದ ಪೊಲೀಸರು, ಪತ್ರಕರ್ತರು ಹಾಗೂ ನಾಗಪ್ಪ ಕುಟುಂಬದ ಸದಸ್ಯರು ನಾಗಪ್ಪ ಮೃತ ಪಟ್ಟ ಸ್ಥಳದ ಸುತ್ತ ಶೋಧ ನಡೆಸಿದರು. ಕುಟುಂಬದವರು ನಾಗಪ್ಪ ಹತ್ಯೆ ನಡೆದ ಸ್ಥಳದಲ್ಲಿ ಪೂಜೆ ನಡೆಸಿದರು. ನಾಗಪ್ಪನವರು ಹತ್ಯೆಯಾದ ಸ್ಥಳದಿಂದ 300 ಅಡಿ ದೂರದಲ್ಲಿ 27 ಬಳಕೆಯಾದ ಬುಲೆಟ್‌ಗಳು, 3 ಬಳಕೆಯಾಗದೇ ಎಸೆದ ಬುಲೆಟ್‌, ದಿನಸಿ ಸಾಮಾನು, ನಾಗಪ್ಪ ಅವರ ಡೈರಿ, ಸುತ್ತೂರು ಮಠದ ಲೈಬ್ರರಿಯಿಂದ ಎರವಲು ಪಡೆದ ಧಾರ್ಮಿಕ ಪುಸ್ತಕಗಳು, ಪೇಸ್ಟ್‌, ಕ್ಷೌರದ ಸಾಮಾಗ್ರಿಗಳು ದೊರೆತಿವೆ.

ಅಲ್ಲಿಯೇ ಇದ್ದ ಮರವೊಂದಕ್ಕೆ ಆರು ಗುಂಡುಗಳು ತಗುಲಿರುವುದೂ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿರ ಬಹುದು ಎಂದು ಶಂಕಿಸಲಾಗಿದೆ. ನಾಗಪ್ಪನವರು ಆಗಸ್ಟ್‌ 26ರಿಂದ ಡಿ.4ರವೆರೆಗೆ ಪ್ರತಿ ದಿನವೂ ತಮ್ಮ ಡೈರಿಯಲ್ಲಿ ಹಲವು ಬಾರಿ ಓ ನಮಃ ಶಿವಾಯ ಎಂದು ಬರೆದಿದ್ದರು. ಜೊತೆಗೆ ಪತ್ನಿ ಪರಿಮಳ ಅವರಿಗೊಂದು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಮಗ, ಡಾ. ಪ್ರೀತನ್‌ ಈ ಬಾರಿ ಪರೀಕ್ಷೆ ತೆಗೆದುಕೊಳ್ಳಲಾಗದೇ ಇರುವುದಕ್ಕೆ ವಿಷಾದಿಸಿದ್ದಾರೆ. ಬಾಣಂತಿಯಾಗಿರುವ ಮಗಳು ಪಿಂಕಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸೂಚಿಸಿದ್ದು, ಹಣದ ಕೊರತೆ ಬಂದರೆ ಭಾವ - ಮೈದುನರಿಂದ ತೆಗೆದುಕೊಳ್ಳಲು ಅಥವಾ ಮನೆಯಲ್ಲಿರುವ ಅರಿಶಿಣವನ್ನು ಮಾರುವಂತೆ ಹೇಳಿದ್ದಾರೆ. ಮಳೆ ಬೆಳೆಯ ಬಗ್ಗೆ ವಿಚಾರಿಸಿದ್ದಾರೆ. ಇದುವರೆಗೆ 34 ಬಾರಿ ಕ್ಯಾಂಪ್‌ ಬದಲಿಸಲಾಗಿದೆ. ದಿನವೂ ಶೌಚಕ್ಕೆ ಒಂದು ಡಬ್ಬ, ಹಾಗೂ ಮುಖ ತೊಳೆಯುವುದಕ್ಕೆ ಒಂದು ಲೋಟ ನೀರು ಕೊಡುತ್ತಾರೆ. ಊಟ ತಿಂಡಿ ಸರಿಯಾಗಿಲ್ಲ. ಬೆಟ್ಟ ಹತ್ತಿ ಇಳಿಯುವುದು ಕಷ್ಟವಾಗುತ್ತಿದೆ. ಅ. 5ರಂದು ಪೊನ್ನಾಚಿ ಮಹದೇವ ಸ್ವಾಮಿ ಭೇಟಿಯಾಗಿದ್ದರು ಎಂಬ ಉಲ್ಲೇಖಗಳು ಪತ್ರದಲ್ಲಿವೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more