ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತಮಿಳುನಾಡಿಗೆ ಕಾಲಿಟ್ಟರೆ ಮಣಿ ಬಂಧನ ಗ್ಯಾರಂಟಿ’

By Staff
|
Google Oneindia Kannada News

ಚೆನ್ನೈ : ಕೊಳತ್ತೂರು ಮಣಿಯನ್ನು ಬಂಧನದಿಂದ ಬಿಡಿಸಿ, ವೀರಪ್ಪನ್‌ ಬಳಿಗೆ ಸಂಧಾನಕ್ಕೆ ಕಳುಹಿಸಲು ಕರ್ನಾಟಕ ಸರ್ಕಾರ ಶತಾಯ ಗತಾಯ ಯತ್ನಿಸುತ್ತಿದ್ದರೆ, ಇಲ್ಲಿ ತಮಿಳುನಾಡು ಸರ್ಕಾರ ‘ಮಣಿ ಇಲ್ಲಿಗೆ ಕಾಲಿಟ್ಟರೆ ಆತನನ್ನು ಬಂಧಿಸುವುದು ಗ್ಯಾರಂಟಿ’ ಎನ್ನುತ್ತಿದೆ.

ಹೆಸರನ್ನು ಬಹಿರಂಗ ಪಡಿಸಲು ಇಷ್ಟಪಡದ ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಯಾಬ್ಬರು ಹೇಳಿರುವುದು ಹೀಗೆ...
‘ಮಣಿ ಐದು ಕ್ರಿಮಿನಲ್‌ ಪ್ರಕರಣಗಳ ಆರೋಪಿ. ಅವನು ತಮಿಳುನಾಡಿಗೆ ಕಾಲಿಟ್ಟೊಡನೆ ಬಂಧಿಸುವುದು ನಮ್ಮ ಕರ್ತವ್ಯ. ಅದನ್ನು ನಾವು ಚಾಚೂ ತಪ್ಪದೆ ಮಾಡುವುದು ಗ್ಯಾರಂಟಿ. ಮಣಿಯನ್ನು ಸಂಧಾನಕಾರನಾಗಿ ವೀರಪ್ಪನ್‌ ಬಳಿಗೆ ಕಳಿಸುವ ವಿಷಯದ ಬಗ್ಗೆ ಕರ್ನಾಟಕ ಸರ್ಕಾರ ನಮ್ಮ ಜೊತೆ ಚರ್ಚಿಸಿಲ್ಲ. ಅಲ್ಲಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ತಂಡ ಜಯಲಲಿತಾ ಅವರನ್ನು ಭೇಟಿಯಾದ ನಂತರ ನಮಗೆ ಯಾವುದೇ ಮಾಹಿತಿಯೂ ಬಂದಿಲ್ಲ. ವೀರಪ್ಪನ್‌ನಂತಹ ನರಹಂತಕನ ಜೊತೆ ಸಂಧಾನ ನಡೆಸುವುದೇ ಹೇಯಕರ ವಿಷಯ.’

‘ದಿನಕರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಇಲ್ಲ’ಕರ್ನಾಟಕದ ಮಾಜಿ ಡಿಜಿಪಿ ಸಿ.ದಿನಕರ್‌ ಅವರು ಬರೆದಿರುವ ‘ವೀರಪ್ಪನ್ಸ್‌ ಪ್ರೆೃಸ್‌ ಕ್ಯಾಚ್‌ : ರಾಜ್‌ಕುಮಾರ್‌’ ಪುಸ್ತಕದಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ, ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ ಎಂದರು.

ವೀರಪ್ಪನ್‌ಗಾಗಿ ಸಂದಾಯವಾಗಿರುವ ಹಣವನ್ನು ನೇರವಾಗಿ ಕರುಣಾನಿಧಿ ಅವರ ಕೈಗೆ ಕೊಟ್ಟಿಲ್ಲ. ಅವರ ಮನೆಯಲ್ಲಿನ ಒಬ್ಬರಿಗೆ ತಲುಪಿಸಲಾಗಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ದಿನಕರ್‌ ಹೇಳಿದ್ದರು. ಹಾಗಿದ್ದರೆ ದಿನಕರ್‌ ಮಾಡಿರುವ ಆರೋಪದಲ್ಲಿ ಹುರುಳಿದೆಯಾ? ಅದಕ್ಕೇ ನೀವು ಮಾನನಷ್ಟ ಮೊಕದ್ದಮೆ ಹೂಡುವ ಧೈರ್ಯ ಮಾಡುತ್ತಿಲ್ಲವೇ?- ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಲು ಕರುಣಾನಿಧಿ ನಿರಾಕರಿಸಿದರು.

(ಏಜೆನ್ಸೀಸ್‌)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X