ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪಿಸ್ಟ್‌ಗಳನ್ನು ಗುಂಡಿಕ್ಕಿ ಕೊಲ್ಲಬೇಕು : ಫರ್ನಾಂಡಿಸ್‌

By Staff
|
Google Oneindia Kannada News

ಬೆಂಗಳೂರು : ಅತ್ಯಾಚಾರಿಗಳನ್ನು ಚೀನಾದಲ್ಲಿ ಮಾಡುವಂತೆ ಸಿಕ್ಕ ತಕ್ಷಣವೇ ಗುಂಡಿಕ್ಕಿ ಕೊಲ್ಲಬೇಕು ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನ ಸಮಾರಂಭವೊಂದರಲ್ಲಿ ಭಾಗವಹಿಸಲು ಶುಕ್ರವಾರ ನಗರಕ್ಕೆ ಬಂದಿದ್ದ ಫರ್ನಾಂಡಿಸ್‌ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಇತ್ತೀಚೆಗೆ ದೇಶದಲ್ಲಿ ಗಮನ ಸೆಳೆದ ಮಧ್ಯಮ ವಯಸ್ಸಿನ ಹೆಂಗಸಿನ ಮೇಲಿನ ಸಾಮೂಹಿಕ ಅತ್ಯಾಚಾರದ ಬಗ್ಗೆ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಅತ್ಯಾಚಾರಿಗಳಿಗೆ ಕಠಿಣ ಸಜೆ ವಿಧಿಸಬೇಕೆಂದು ಹೇಳಿದ್ದರು. ಇದನ್ನು ಅನುಮೋದಿಸಿದ ಫರ್ನಾಂಡಿಸ್‌, ‘ಚೀನಾದಲ್ಲಿ ಭ್ರಷ್ಟರು ಮತ್ತು ಅತ್ಯಾಚಾರಿಗಳನ್ನು ಹಿಡಿದ ಮರುದಿನ ವಿಚಾರಣೆಗೆ ಒಳಪಡಿಸಿ, ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ. ಒಂದು ದಿನ ಬದುಕಲು ಅವಕಾಶ ಕೊಟ್ಟು ಬಂದೂಕಿನಿಂದ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಅಷ್ಟೇ ಅಲ್ಲ , ಅಂಥ ಪಾಪಿಗಳನ್ನು ಕೊಲ್ಲಲು ಬಳಸುವ ಗುಂಡಿನ ಹಣವನ್ನು ಆತನ ಕುಟುಂಬದವರಿಂದಲೇ ವಸೂಲು ಮಾಡಲಾಗುತ್ತದೆ. ನಮ್ಮ ದೇಶದಲ್ಲೂ ಅತ್ಯಾಚಾರಿಗಳ ವಿಷಯದಲ್ಲಿ ಹೀಗೇ ಮಾಡಬೇಕು’ ಎಂದು ಸಲಹೆಯಿತ್ತರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X