ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಿವಾಸಲು ನನ್ನನ್ನು ಕೊಲ್ಲಿಸಬಹುದು-ದಿನಕರ್‌

By Staff
|
Google Oneindia Kannada News

ಬೆಂಗಳೂರು : ತಮ್ಮ ವಿರುದ್ಧ ಕೋರ್ಟಿಗೆ ಹೋಗುವುದಾಗಿ ಧಮಕಿ ಹಾಕಿರುವ ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಶ್ರೀನಿವಾಸಲು ವಿರುದ್ಧ ತೀವ್ರ ವಾಗ್ದಾಳಿ ನಡೆಸರುವ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಅವರು, ನಕ್ಸಲೀಯರ ಸ್ನೇಹ ಹೊಂದಿರುವ ಶ್ರೀನಿವಾಸಲು ತಮ್ಮನ್ನು ಕೊಲೆ ಮಾಡಿಸಲೂ ಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸಲು ಯಾರು ಎನ್ನುವುದು ತಮಗೆ ಗೊತ್ತಿದೆ. ನನಗಿಂತ ಒಂದು ವರ್ಷ ಕಿರಿಯರಾದ ಶ್ರೀನಿವಾಸಲು ರಾಜಕಾರಣಿಗಳಿಗೆ ಬೆಣ್ಣೆ ಹಚ್ಚಿಕೊಂಡೇ ಮೇಲೆ ಬಂದವರು ಎಂದು ಕನ್ನಡ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಿನಕರ್‌ ವ್ಯಂಗ್ಯವಾಡಿದ್ದಾರೆ.

ಶ್ರೀನಿವಾಸಲು ಕುರಿತು ಒಂದು ದೊಡ್ಡ ಕಡತವೇ ನನ್ನ ಬಳಿ ಇದೆ. ಆ ಕಡತವನ್ನು ಬಯಲು ಪಡಿಸಿದರೆ ಶ್ರೀನಿವಾಸಲು ಬಣ್ಣ ಬಯಲಾಗುತ್ತದೆ. ಆತನ ಬಗ್ಗೆಯೂ ನಾನು ಪುಸ್ತಕ ಬರಿಯಬಹುದು ಎಂದು ದಿನಕರ್‌ ಹೇಳಿದ್ದಾರೆ.

ಸರ್ಕಾರಿ ನೌಕರರಾದ ಶ್ರೀನಿವಾಸಲು ಸುದ್ದಿಗೋಷ್ಠಿ ನಡೆಸುವಂತಿಲ್ಲ . ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದಿನಕರ್‌ ಆಗ್ರಹಿಸಿದ್ದಾರೆ.

ರಾಜ್‌ಕುಮಾರ್‌ ಅಪಹರಣಕ್ಕೆ ನಾನು ಕಾರಣ ಎಂದು ಶ್ರೀನಿವಾಸಲು ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಿಗೆ ಹೆಚ್ಚುವರಿ ರಕ್ಷಣೆ ನೀಡುವ ಹೊಣೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ರಾಮಾನುಜಂ ಅವರಿಗೆ ಸೇರಿದ್ದು , ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು . ಪ್ರಸ್ತುತ ಶ್ರೀನಿವಾಸಲು ಸರ್ಕಾರದ ಸಲಹೆಗಾರರಾದ ಮೇಲೆ ನಾಗಪ್ಪನವರ ಅಪಹರಣ ನಡೆದಿರುವುದರಿಂದ, ಸರ್ಕಾರ ಶ್ರೀನಿವಾಸಲು ಅವರನ್ನು ಮನೆಗೆ ಕಳುಹಿಸಬೇಕು ಎಂದು ದಿನಕರ್‌ ಗುಡುಗಿದರು.

ಕೇರಳದ ಮುಖ್ಯಮಂತ್ರಿ ಕರುಣಾಕರನ್‌ ಬೆಂಗಳೂರಿಗೆ ಬಂದಿದ್ದಾಗ ಅವರ ಚಪ್ಪಲಿಯನ್ನು ಶ್ರೀನಿವಾಸಲು ಕೈಯಲ್ಲಿ ಎತ್ತಿಕೊಟ್ಟಿದ್ದರು. ನಾನು ಈ ರೀತಿ ಗುಲಾಮಗಿರಿ ಮಾಡಿಕೊಂಡು ಬಂದವನಲ್ಲ . ನನಗೆ ಯಾರ ಸರ್ಟಿಫಿಕೇಟೂ ಬೇಕಾಗಿಲ್ಲ ಎಂದು ಹೇಳಿರುವ ದಿನಕರ್‌, ಪೋಟಾ ಕಾಯ್ದೆಯಡಿ ನೆಡುಮಾರನ್‌ ಅವರನ್ನು ಜೈಲಿಗೆ ಕಳುಹಿಸಿದಂತೆ ನಕ್ಸಲೀಯರ ಗೀಳಿರುವ ಶ್ರೀನಿವಾಸಲು ಅವರನ್ನೂ ಜೈಲಿಗೆ ಕಳುಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಬಕಾರಿ ಗುತ್ತಿಗೆದಾರರ ದುಡ್ಡು
ರಾಜ್‌ಕುಮಾರ್‌ ಬಿಡುಗಡೆಗಾಗಿ ಇಬ್ಬರು ಅಬಕಾರಿ ಗುತ್ತಿಗೆದಾರರು 10 ಕೋಟಿ ರುಪಾಯಿಗಳನ್ನು ಸಂಗ್ರಹಿಸಿ ವೀರಪ್ಪನ್‌ಗೆ ಕಳುಹಿಸಿದ ವಿಷಯ ತಮಗೆ ಗೊತ್ತು ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಪಿ.ಕೋದಂಡರಾಮಯ್ಯ ತಿಳಿಸಿದ್ದಾರೆ. ಸರ್ಕಾರ ತನಿಖೆ ನಡೆಸಿದರೆ ಗುತ್ತಿಗೆದಾರರ ಹೆಸರನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಕೋದಂಡರಾಮಯ್ಯ, ಸತ್ಯಸಂಗತಿ ಬಯಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

(ಇನ್ಫೋ ವಾರ್ತೆ)

‘..ಪ್ರೆೃಸ್‌ ಕ್ಯಾಚ್‌..’ ಸುತ್ತ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X