ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಬು ನೇರಳೆ ಹಣ್ಣಿನ ಮೇಲೆ ಭಾರತೀಯರಿಗೆ ಹಕ್ಕಿಲ್ಲ

By Staff
|
Google Oneindia Kannada News

ನವದೆಹಲಿ: ಜಂಬು ನೇರಳೆಯ ಪೇಟೆಂಟ್‌ ಅನ್ನು ಅಮೆರಿಕಾ ಪಡೆದುಕೊಂಡಿದೆ. ಮಧುಮೇಹ ರೋಗಕ್ಕೆ ಸಿದ್ಧೌಷಧಿಯಾಗಿ ಪುರಾತನ ಕಾಲದಿಂದ ಬಳಸುತ್ತಿದ್ದ ಜಂಬು ನೇರಳೆ ಹಣ್ಣಿನ ಮೇಲಿನ ಹಕ್ಕು ಸ್ವಾಮ್ಯ ಇನ್ನು ಮುಂದೆ ಭಾರತೀಯರ ಪಾಲಿಗಿಲ್ಲ.

ಈ ಹಣ್ಣಿನ ಕುರಿತಂತೆ ಹೆಚ್ಚಿನ ಸಂಶೋಧನೆಗಾಗಿ ಭಾರತೀಯ ವೈದ್ಯಕೀಯ ಮಂಡಲಿಯು ಹಣ ನೀಡುವ ಮುನ್ನವೇ ಇದರ ಹಕ್ಕು ಸ್ವಾಮ್ಯವನ್ನು ಅಮೆರಿಕಾದ ಸಂಸ್ಥೆಯಾಂದು ಪಡೆದುಕೊಂಡಿದೆ ಎಂದು ಆರೋಗ್ಯ ಖಾತೆ ಸಚಿವ ಎ. ರಾಜಾ ಅವರು ಬುಧವಾರ ಲೋಕ ಸಭೆಗೆ ತಿಳಿಸಿದರು.

ಬಹುಪಯೋಗೀ ಔಷಧೀಯ ಗುಣವುಳ್ಳ ಬೇವು ಮತ್ತು ಅರಿಶಿಣದ ಮೇಲಿನ ಪೇಟೆಂಟನ್ನು ಈಗಾಗಲೇ ಅಮೆರಿಕ ಪಡೆದುಕೊಂಡಿದೆ. ಈಗ ಜಂಬು ನೇರಳೆ ಹಣ್ಣಿನ ಮೇಲಿನ ಹಕ್ಕನ್ನು ಭಾರತೀಯರು ಕಳೆದುಕೊಂಡಿದ್ದಾರೆ. ಕಳೆದುಕೊಳ್ಳುವ ಸರತಿಯಲ್ಲಿ ಇನ್ನೂ ಏನೇನಿದೆಯೋ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X