ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳತ್ತೂರು ಮಣಿಗೆ ರಾಜ್ಯ ಹೈಕೋರ್ಟ್‌ ಜಾಮೀನು

By Staff
|
Google Oneindia Kannada News

Karna High Court grants bail to Kolathur Maniಬೆಂಗಳೂರು : ತಮಿಳು ಚಳವಳಿ ನಾಯಕ ಕೊಳತ್ತೂರು ಮಣಿಗೆ ರಾಜ್ಯ ಹೈಕೋರ್ಟ್‌ ಗುರುವಾರ(ನ.28) ಷರತ್ತಿನ ಜಾಮೀನು ನೀಡಿದೆ. ಇದರೊಂದಿಗೆ ವೀರಪ್ಪನ್‌ ಒತ್ತೆಯಿಂದ ಸಂಯುಕ್ತ ಜನತಾದಳದ ನಾಯಕ ಎಚ್‌.ನಾಗಪ್ಪನವರನ್ನು ಬಿಡಿಸಿಕೊಳ್ಳುವ ಸಂಧಾನ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ.

ಮೂರು ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಚ್‌.ಎನ್‌.ನಾರಾಯಣ ಅವರು, ಕೊಳತ್ತೂರು ಮಣಿಗೆ ಷರತ್ತಿನ ಜಾಮೀನು ನೀಡಿದರು. ಒಂದು ಲಕ್ಷ ರುಪಾಯಿ ಬಾಂಡ್‌ ಹಾಗೂ ಎರಡು ಷೂರಿಟಿ ಬಾಂಡ್‌ಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಆದೇಶಿಸಿದರು.

ಪ್ರತಿ ಹತ್ತು ದಿನಕ್ಕೊಮ್ಮೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಹಾಜರಾಗಬೇಕು. ಸಮನ್ಸ್‌ ನೀಡಿದಾಗಲೆಲ್ಲ ಕೋರ್ಟು ಎದುರು ಹಾಜರಾಗಬೇಕು. ತಪ್ಪಿದಲ್ಲಿ ಜಾಮೀನು ರದ್ದಾಗುತ್ತದೆ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು. ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ಸಾಗಣೆ ಮತ್ತು ವೀರಪ್ಪನ್‌ಗೆ ನೆರವು ನೀಡುವ ಆರೋಪದ ಮೇಲೆ ಮಣಿ ಅವರು ಬಂಧನಕ್ಕೊಳಗಾಗಿದ್ದರು. ಕೊಳ್ಳೇಗಾಲ, ಚಾಮರಾಜನಗರ ಹಾಗೂ ರಾಮಪುರ ಪೊಲೀಸ್‌ ಠಾಣೆಗಳಲ್ಲಿ ಮಣಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು.

ಈ ನಡುವೆ ಸಂಧಾನಕ್ಕೆ ಕೊಳತ್ತೂರು ಮಣಿಯನ್ನು ಕಳುಹಿಸಲು ವೀರಪ್ಪನ್‌ ಗೊತ್ತುಪಡಿಸಿದ್ದ ಗಡುವು ನವಂಬರ್‌ 30 ಕ್ಕೆ ಮುಗಿಯಲಿದೆ.

ಕಾಡಿಗೆ ಹೋಗಲು ಮಣಿ ರೆಡಿ
ನಾಗಪ್ಪನವರ ಬಿಡುಗಡೆ ಸಂಬಂಧ ಸಂಧಾನಕ್ಕಾಗಿ ಕಾಡಿಗೆ ತೆರಳಲು ಕೊಳತ್ತೂರು ಮಣಿ ಒಪ್ಪಿಕೊಂಡಿದ್ದಾರೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಜ್ಯ ಹೈಕೋರ್ಟ್‌ ಮಣಿಗೆ ಷರತ್ತಿನ ಜಾಮೀನು ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಮಣಿ ಕಾಡಿಗೆ ತೆರಳಲು ಒಪ್ಪಿಕೊಂಡಿರುವ ಮಾಹಿತಿ ತಮಗೆ ಬಂದಿರುವುದಾಗಿ ತಿಳಿಸಿದರು. ಶುಕ್ರವಾರ (ನ.29) ಮೈಸೂರಿನ ನ್ಯಾಯಾಲಯದಲ್ಲಿ ಮಣಿಯ ಜಾಮೀನು ಅರ್ಜಿ ವಿಚಾರಣೆ ಬರಲಿದ್ದು , ಆ ವಿಚಾರಣೆಯನ್ನು ಎದುರು ನೋಡುತ್ತಿರುವುದಾಗಿ ಖರ್ಗೆ ತಿಳಿಸಿದರು.

(ಪಿಟಿಐ)

‘..ಪ್ರೆೃಸ್‌ ಕ್ಯಾಚ್‌..’ ಸುತ್ತ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X