ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರ್‌ ವಿರುದ್ಧ ಕೋರ್ಟಿಗೆ ಹೋಗುವೆ : ಶ್ರೀನಿವಾಸುಲು

By Staff
|
Google Oneindia Kannada News

ಬೆಂಗಳೂರು : ‘ವೀರಪ್ಪನ್ಸ್‌ ಪ್ರೆೃಸ್‌ ಕ್ಯಾಚ್‌ : ರಾಜ್‌ಕುಮಾರ್‌’ ಪುಸ್ತಕದಲ್ಲಿ ತಮ್ಮ ಮಾನನಷ್ಟವಾಗುವಂಥಾ ಆರೋಪಗಳನ್ನು ಮಾಜಿ ಡಿಜಿಪಿ ದಿನಕರ್‌ ಮಾಡಿದ್ದಾರೆ ಎಂದಿರುವ ಕರ್ನಾಟಕದ ರಕ್ಷಣಾ ಸಲಹೆಗಾರ ಶ್ರೀನಿವಾಸುಲು, ಅವರ ವಿರುದ್ಧ ಕೋರ್ಟಿನ ಕಟೆಕಟೆ ಹತ್ತುವುದಾಗಿ ಕಿಡಿ ಕಾರಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದ ಶ್ರೀನಿವಾಸುಲು ಅವರ ದನಿ ಅಕ್ಷರಶಃ ತಾರಕಕ್ಕೇರಿತ್ತು. ತಮಗೆ ನೆಡುಮಾರನ್‌ ಸೇರಿದಂತೆ ತೀವ್ರಗಾಮಿಗಳ ಜೊತೆ ಒಡನಾಟವಿದೆ ಎಂದು ಪುಸ್ತಕದಲ್ಲಿ ದಿನಕರ್‌ ಮಾಡಿರುವ ಆರೋಪವನ್ನು ಶ್ರೀನಿವಾಸುಲು ಪದೇಪದೇ ಒತ್ತಿ ಹೇಳಿದರು. ಪುಸ್ತಕದಲ್ಲಿ ಮಾನನಷ್ಟ ಮಾಡುವಂಥಾ ಅಂಶಗಳನ್ನು ಹೆಕ್ಕಿ ಕೋರ್ಟಿಗೆ ಹೋಗಲು ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ಅವರು ತಿಳಿಸಿದರು.

ಶ್ರೀನಿವಾಸುಲು ಏದುಸಿರ ಮಾತುಗಳಲ್ಲಿ ಮುಖ್ಯವಾದುವು-

  • ದುಡ್ಡು ಕೊಟ್ಟು ರಾಜ್‌ಕುಮಾರ್‌ ಅವರನ್ನು ಬಿಡಿಸಿಕೊಂಡು ಬಂದಿದ್ದಾರೆ ಅನ್ನೋದು ದಿನಕರ್‌ ಆರೋಪ. ದುಡ್ಡು ಕೊಟ್ಟಿದ್ದಾರೆ ಅಂತ ಅವರು ಹೇಳಿರುವವರಂತೂ ಅದನ್ನು ತಳ್ಳಿ ಹಾಕಿದ್ದಾಗಿದೆ. ಇನ್ನು ಇಸಿದುಕೊಂಡವರು ನಿಜವನ್ನು ಹೇಳಬೇಕು. ಅದನ್ನು ನಾವು ಹೇಳೋಕಾಗೋಲ್ಲ. ಹೀಗಾಗಿ ಇದು ಯಾರೋ ಹೇಳಿದ್ದನ್ನು ಕೇಳಿಕೊಂಡು ಮಾಡಿರುವ ಆರೋಪ ಎಂಬುದು ಸ್ಪಷ್ಟ.
  • ತಮಿಳು ರಾಷ್ಟ್ರೀಯ ಚಳವಳಿ ನಾಯಕ ಪಿ.ನೆಡುಮಾರನ್‌ ಜೊತೆ ನನ್ನ ಸಂಪರ್ಕ ಇದೆ ಅನ್ನೋದು ದಿನಕರ್‌ ಅವರ ಇನ್ನೊಂದು ಆರೋಪ. ನೆಡುಮಾರನ್‌ ಕಾಂಗ್ರೆಸ್‌ನಲ್ಲಿದ್ದ ದಿನಗಳಿಂದಲೂ ನನಗೆ ಅವರು ಗೊತ್ತು. ಅವರು ನನ್ನ ಸ್ನೇಹಿತರೂ ಹೌದು. ಹಾಗಿದ್ದೂ ನಮ್ಮಿಬ್ಬರ ಸಿದ್ಧಾಂತ ಉತ್ತರ- ದಕ್ಷಿಣ ಎಂಬಂತಿತ್ತು. ರಾಜ್‌ಕುಮಾರ್‌ ಅವರ ಅಪಹರಣವಾದ ನಂತರ, ಅವರನ್ನು ಬಿಡಿಸುವ ಖಾಸಗಿ ಯತ್ನದಲ್ಲಿ ನಾನು ನೆಡುಮಾರನ್‌ ಅವರನ್ನು ಮೂರು ಬಾರಿ ಭೇಟಿಯಾಗಿದ್ದು ನಿಜ.
  • ಒಬ್ಬ ಬೇಹುಗಾರಿಕಾ ಅಧಿಕಾರಿಯಾಗಿ ನನಗೆ ಹಲವಾರು ಕಾಂಟಾಕ್ಟ್‌ಗಳಿರುತ್ತವೆ. ಕೆಲವು ಉಗ್ರವಾದಿಗಳ ಮೂಲಗಳೂ ನನಗೆ ತಿಳಿದಿರಬೇಕಿರುತ್ತೆ. ಇದರಿಂದ ರಾಜ್ಯ ಮತ್ತು ದೇಶದ ಹಿತಾಸಕ್ತಿಗೆ ಧಕ್ಕೆ ಬರದಂತೆ ಎಚ್ಚರದಿಂದಿರುವುದು ಸಾಧ್ಯ. ಬೇಹುಗಾರಿಕಕೆಯ ಕೆಲಸ ಹೇಗೆ ನಡೆಯುತ್ತೆ ಅನ್ನೋದು ದಿನಕರ್‌ಗೇನು ಗೊತ್ತು !
  • ಸಭ್ಯರ ಮುಖಕ್ಕೆ ಸದಾ ಹುರುಳಿಲ್ಲದ ಆರೋಪ ಮಾಡುತ್ತಾ, ಮಸಿ ಬಳಿಯುವುದು ದಿನಕರ್‌ ಚಾಳಿ. ಬೇರೆಯವರಿಗೆ ಕೆಸರು ಎರಚಿ ತಾವು ಮಾತ್ರ ಮಿಸ್ಟರ್‌ ಕ್ಲೀನ್‌ ಎಂಬಂತೆ ತೋರ್ಪಡಿಸಿಕೊಳ್ಳುತ್ತಾರೆ.
  • ನಾನೊಬ್ಬ ನಕ್ಸಲೈಟ್‌ ಅಲ್ಲ ಅನ್ನೋದು ದಿನಕರ್‌ ತಿಳಿದುಕೊಳ್ಳಲಿ.
  • ಹಿಂದೆ ನಾನು ಡಿಜಿಪಿಯಾಗಿದ್ದಾಗ, ದಿನಕರ್‌ ಕೇಸು ಜಡಿಯುವುದರಿಂದ ಪಾರಾಗುವ ಕಾರಣಕ್ಕೆ ನನ್ನ ಸ್ಥಾನವನ್ನು ದಿನಕರ್‌ಗೆ ಬಿಟ್ಟು ಕೊಡಿ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದರು. ಪೊಲೀಸ್‌ ಇಲಾಖೆಯ ಸುಸೂತ್ರ ಆಡಳಿತಕ್ಕೆ ಆ ಮನುಷ್ಯ ಎಡರುಗಾಲು ಅಂತ ಅವತ್ತೇ ಎಚ್ಚರಿಸಿದ್ದೆ.
  • ದಿನಕರ್‌ ಪುಸ್ತಕವೆಲ್ಲಾ ಕಾಗಕ್ಕ ಗೂಬಕ್ಕನ ಕತೆಗಳಂಥಾ ಸರಕು ಹೊಂದಿವೆ. ಈ ಪುಸ್ತಕವನ್ನು ಕೊಳ್ಳೋದು, ಓದೋದರಿಂದ ಯಾವುದೇ ಬರಕತ್ತಿಲ್ಲ. ಪುಸ್ತಕದ ಒಂದೊಂದು ಪ್ರತಿಯನ್ನೂ ಬೆಂಕಿಗೆ ಹಾಕಬೇಕು.
  • ಈಗ ವೀರಪ್ಪನ್‌ ಒತ್ತೆಯಾಳಾಗಿರುವ ನಾಗಪ್ಪನವರನ್ನು ಬಿಡಿಸಿ ತರಲು ಸರ್ಕಾರ ಚಿಕ್ಕಾಸನ್ನೂ ಕಪ್ಪವಾಗಿ ಕೊಡಲು ಸಿದ್ಧವಿಲ್ಲ.
(ಪಿಟಿಐ)

‘..ಪ್ರೆೃಸ್‌ ಕ್ಯಾಚ್‌..’ ಸುತ್ತ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X