ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿನ್ಯಾಯಾಧಿಕರಣದ ಸದಸ್ಯಅಗರವಾಲ್‌ ನಿಧನ

By Staff
|
Google Oneindia Kannada News

ನವದೆಹಲಿ : ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಸದಸ್ಯ ನ್ಯಾಯಮೂರ್ತಿ ಎಸ್‌.ಪಿ.ಅಗರವಾಲ್‌ ಮಂಗಳವಾರ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು . ಅಗರ್‌ವಾಲ್‌ ಅವರು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಮುಖಂಡ ಅಶೋಕ್‌ ಸಿಂಘಾಲ್‌ ಅವರ ಸಂಬಂಧಿ.

1962 ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಅಗರವಾಲ್‌, 1992 ರಲ್ಲಿ ಪಂಜಾಬ್‌-ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು 1994 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. 1990 ರಲ್ಲಿ ಕಾವೇರಿ ನ್ಯಾಯಾಧಿಕರಣ ಪ್ರಾರಂಭವಾದ ದಿನದಿಂದಲೂ ಅಗರವಾಲ್‌ ನ್ಯಾಯಾಧಿಕರಣದ ಸದಸ್ಯರಾಗಿದ್ದಾರೆ.

ಅಗರ್‌ವಾಲ್‌ ಅವರ ನಿಧನದಿಂದಾಗಿ ಕಾವೇರಿ ನ್ಯಾಯಾಧಿಕರಣದ ತೀರ್ಪು ಇನ್ನಷ್ಟು ವಿಳಂಬವಾಗುವ ನಿರೀಕ್ಷೆಯಿದೆ. ನ್ಯಾಯಮೂರ್ತಿ ಎನ್‌.ಪಿ.ಸಿಂಗ್‌ ಅಧ್ಯಕ್ಷತೆಯ ನ್ಯಾಯಾಧಿಕರಣ 2003ರ ಜುಲೈ ತಿಂಗಳಲ್ಲಿ ತನ್ನ ಅಂತಿಮ ತೀರ್ಪು ನೀಡುವ ಸಂಭವವಿತ್ತು . ನ್ಯಾಯಮೂರ್ತಿ ಎನ್‌.ಎಸ್‌.ರಾವ್‌ ನ್ಯಾಯಾಧಿಕರಣದ ಇನ್ನೊಬ್ಬ ಸದಸ್ಯರು. ಅಗರವಾಲ್‌ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಹೊಸ ಸದಸ್ಯರನ್ನು ಎರಡು ತಿಂಗಳೊಳಗೆ ನೇಮಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X