ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ನೆರವು ನೀಡಿ

By Staff
|
Google Oneindia Kannada News

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಈಗ ವಜ್ರ ಮಹೋತ್ಸವವನ್ನು ಇದಿರುನೋಡುತ್ತಿದೆ. 2003 ನೇ ವರ್ಷದಲ್ಲಿ ವಜ್ರ ಮಹೋತ್ಸವವನ್ನು ಆಚರಿಸಲು ಕಾಲೇಜು ಸಜ್ಜುಗೊಳ್ಳುತ್ತಿದೆ.

ವಜ್ರ ಮಹೋತ್ಸವದ ಆಚರಣೆ ಎಂದರೆ ಬರಿಯ ವಿಚಾರ ಸಂಕಿರಣಗಳು, ವಸ್ತು ಪ್ರದರ್ಶನ, ಸ್ಪರ್ಧೆಗಳು ಮಾತ್ರವಲ್ಲ. ಕಾಲೇಜಿನಲ್ಲಿ ಓದಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕಾಲೇಜು ಆವರಣದಲ್ಲಿ ಉತ್ಸವದ ನೆನಪಿಗಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕಾಲೇಜು ಆಡಳಿತ ಮಂಡಳಿ ಹಮ್ಮಿಕೊಂಡಿದೆ. ಈ ಕಾಮಗಾರಿಗಳಿಗೆ ಹಣದ ಅವಶ್ಯಕತೆ ಇದ್ದು ನೆರವು ನೀಡುವವರು ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಕೋರಲಾಗಿದೆ. ಕಾಲೇಜು ಆವರಣದಲ್ಲಿ ಕೈಗೆತ್ತಿಕೊಂಡಿರುವ ಎರಡು ಪ್ರಮುಖ ಕಾಮಗಾರಿಗಳು:

  1. ಕಾಲೇಜು ಆವರಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ವಿಶಾಲವಾದ ವಜ್ರಮಹೋತ್ಸವ ಭವನವನ್ನು ನಿರ್ಮಿಸುವುದು. ಇದಕ್ಕಾಗಿ ಈಗಾಗಲೇ ಮೂಲ ಧನ ರೂಪದಲ್ಲಿ 30 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಸ್ವಲ್ಪ ಹಣವನ್ನು ಸ್ಥಳೀಯ ಮಟ್ಟದಲ್ಲಿ ಸಂಗ್ರಹಿಸಲಾಗುವುದು.
  2. ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಉತ್ತಮ ಲೈಬ್ರರಿ ನಿರ್ಮಾಣ. ಲೈಬ್ರರಿ ಕೆಲಸ ಈಗಾಗಲೇ ಶುರುವಾಗಿದೆ. ವಿಶ್ವ ವಿದ್ಯಾಲಯದ ನೆರವಿನೊಂದಿಗೆ ಕಾಮಗಾರಿ ಆರಂಭವಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ಹಣ ಬೇಕು.
ವಜ್ರಮಹೋತ್ಸವ ಕಾಮಗಾರಿಗಳ ಹಿನ್ನೆಲೆಯಲ್ಲಿ ಕಾಲೇಜಿಗೆ ಧನ ಸಹಾಯದ ಅಗತ್ಯವಿದೆ. ಸಮಾಜದಲ್ಲಿ ಉನ್ನತ ಸ್ಥಾನವೇರಿದ ಹಳೇ ವಿದ್ಯಾರ್ಥಿಗಳು, ಅನಿವಾಸಿ ಕನ್ನಡಿಗರು ಮತ್ತು ಕಾಲೇಜಿಗೆ ನೆರವಾಗಲು ಇಚ್ಛಿಸುವವರು ನೆರವು ನೀಡುವಂತೆ ಕೋರಲಾಗಿದೆ. ಹಣದ ರೂಪದಲ್ಲಿ ಅಥವಾ, ಲೈಬ್ರರಿಗೆ ಮತ್ತು ವಜ್ರಮಹೋತ್ಸವ ಭವನ ನಿರ್ಮಾಣಕ್ಕೆ ಅನುಕೂಲವಾಗುವಂತೆ ಆಸಕ್ತರು ಸಹಾಯ ನೀಡಬಹುದು.

ಸಂಪರ್ಕ ವಿಳಾಸ : ಪ್ರಾಂಶುಪಾಲರು, ಪ್ರೊ. ಟಿ.ಎಸ್‌. ಹೂವಯ್ಯ ಗೌಡ, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ. ಇ-ಮೇಯ್ಲ್‌ : [email protected]

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X