ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಪ್ಪ ಕೊಟ್ಟಿದ್ದನ್ನ ಆಗಲೇ ಯಾಕೆ ವಿರೋಧಿಸಲಿಲ್ಲ ದಿನಕರ್‌?’

By Staff
|
Google Oneindia Kannada News

ಬೆಂಗಳೂರು : ರಾಜ್‌ಕುಮಾರ್‌ ಬಿಡುಗಡೆಯ ಒಳಕತೆಯನ್ನು ಬಹಿರಂಗಪಡಿಸಿದ ಮರುದಿನವೇ ಕರ್ನಾಟಕ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಮನೆ ಮುಂದೆ ಸಶಸ್ತ್ರ ಪೊಲೀಸ್‌ ಪಡೆಯ ವ್ಯಾನೊಂದು ನಿಂತಿತ್ತು; ದಿನಕರ್‌ ರಕ್ಷಣೆಗಾಗಿ !

ತಮ್ಮ ಪುಸ್ತಕ ‘ವೀರಪ್ಪನ್ಸ್‌ ಪ್ರೆೃಸ್‌ ಕ್ಯಾಚ್‌: ರಾಜ್‌ಕುಮಾರ್‌’ದ ಒಂದು ಪ್ರತಿ ಹಾಗೂ ತಮಗೆ ಪೊಲೀಸ್‌ ರಕ್ಷಣೆ ಒದಗಿಸುವಂತೆ ಮನವಿ ಪತ್ರವನ್ನು ಹಿಡಿದು ದಿನಕರ್‌ ಶುಕ್ರವಾರ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅವರ ಬಳಿಗೆ ಹೋದರು. ಇನ್ನೂ ಬೆಂಗಳೂರಲ್ಲಿ ಬಿಡುಗಡೆಯಾಗಿಲ್ಲದ ತಮ್ಮ ಪುಸ್ತಕದ ಪ್ರತಿಯನ್ನು ರಾಜ್ಯಪಾಲರ ಕೈಗಿತ್ತು, ವಾಪಸ್ಸು ಬರುವಾಗ ಪೊಲೀಸ್‌ ಬೆಂಗಾವಲಿನ ಅಭಯ ಹಸ್ತ ಪಡೆದು ಬಂದರು.

ದಿನಕರ್‌ ಮನೆ ಸೇರಿದ ಕೆಲ ಹೊತ್ತಲ್ಲೇ ಪೊಲೀಸ್‌ ಕಾವಲು ಅವರ ಮನೆಯ ಮುಂದಿತ್ತು. ತಮಗೆ ಹಾಗೂ ತಮ್ಮ ಆಸ್ತಿಗೆ ರಕ್ಷಣೆ ಒದಗಿಸುವಂತೆ ರಾಜ್ಯಪಾಲರನ್ನು ಕೇಳಿಕೊಂಡಿದ್ದಾಗಿ ದಿನಕರ್‌ ಹೇಳಿದರು. ಸರ್ಕಾರ ಕಾನೂನನ್ನು ತಪ್ಪಾಗಿ ಅಭಿವ್ಯಕ್ತಿಸಿ, ತಮ್ಮನ್ನು ಗೋಳು ಹೊಯ್ದುಕೊಳ್ಳಕೂಡದೆಂದು ಮನವಿಯಲ್ಲಿ ದಿನಕರ್‌ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಆಂಗ್ಲ ಪತ್ರಿಕೆಯಾಂದು ಕೇಳಿದ ಕೆಲವು ಪ್ರಶ್ನೆಗಳಿಗೆ ದಿನಕರ್‌ ಪಟಪಟೆನೆ ಉತ್ತರ ಕೊಟ್ಟಿದ್ದು ಹೀಗೆ...

ವೀರಪ್ಪನ್‌ಗೆ ಕಪ್ಪ ಒಪ್ಪಿಸುವುದನ್ನು ಮೊದಲೇ ವಿರೋಧಿಸಬಹುದಿತ್ತಲ್ಲ?
ಎಲ್ಲಿ ವಿರೋಧಿಸಬೇಕಿತ್ತು, ಕಬ್ಬನ್‌ ಪಾರ್ಕಲ್ಲ ? ಲಂಡನ್ನಿನಲ್ಲಾದರೆ ಹೈಡ್‌ ಪಾರ್ಕು ಉಂಟು. ಇಷ್ಟಕ್ಕೂ, ನಾನೇಕೆ ವಿರೋಧಿಸಬೇಕಿತ್ತು?!

ಒಲ್ಲದ ಪ್ರಸಂಗಗಳು ನಡೆಯುತ್ತಿದ್ದಾಗಲೇ ನೀವು ರಾಜೀನಾಮೆ ಕೊಡಬಹುದಿತ್ತಲ್ಲಾ?
ನಾನೇಕೆ ರಾಜೀನಾಮೆ ಕೊಡಬೇಕಿತ್ತು ? ಆಡಳಿತದ ಚಕ್ರದಲ್ಲಿ ನಾನೂ ಒಂದು ಭಾಗವಷ್ಟೆ. ನನಗಿಂತ ಮೇಲಿನವರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿತ್ತು.

ಮತ್ತೆ ಪುಸ್ತಕ ಬರೆದದ್ದು ಯಾಕೆ?
ಜನಕ್ಕೆ ಸತ್ಯ ತಿಳಿಸಬೇಕಿತ್ತು. ಅದು ಹೇಗೆ ಅನ್ನೋದನ್ನ ಯೋಚಿಸಿದಾಗ ಪುಸ್ತಕ ಬರೆಯುವ ಯೋಚನೆ ಬಂತು. ಬೇರೆ ಪೊಲೀಸ್‌ ಅಧಿಕಾರಿಗಳಂತೆ ನಾನು ಆತ್ಮಚರಿತ್ರೆಯನ್ನೋ, ಆತ್ಮಾವಲೋಕನವನ್ನೋ ಬರೆದುಕೊಳ್ಳುವುದು ನೀರಸ ಅನಿಸಿತು. ಅಂಥಾ ಎಷ್ಟೋ ಪುಸ್ತಕಗಳು ನನ್ನನ್ನು ಬೋರ್‌ ಹೊಡೆಸಿವೆ.

(ಇನ್ಫೋ ವಾರ್ತೆ)

ಇದನ್ನೂ ಓದಿ-
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X