• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ರಾಜೀನಾಮೆಗೆ ಯಡಿಯೂರಪ್ಪ ಆಗ್ರಹ

By Staff
|

ಬೆಂಗಳೂರು : ವೀರಪ್ಪನ್‌ ಸೆರೆಯಿಂದ ವರನಟ ರಾಜ್‌ಕುಮಾರ್‌ ಬಿಡುಗಡೆಗೆ ರಾಜ್ಯ ಸರ್ಕಾರ ಭಾರೀ ಮೊತ್ತದ ಹಣ ನೀಡಿರುವ ಗುಟ್ಟು ಬಹಿರಂಗವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಅವರ The Prize Catch Of Veerappan: Rajkumar ಪುಸ್ತಕದ ಮೂಲಕ, ರಾಜ್‌ ಬಿಡುಗಡೆಗೆ ಸರ್ಕಾರ ಅನುಸರಿಸಿದ ಕಾರ್ಯತಂತ್ರ ಬಯಲಿಗೆ ಬಿದ್ದಿದೆ. ಕಾಡುಗಳ್ಳನಿಗೆ ಸರ್ಕಾರ ಭಾರೀ ಮೊತ್ತದ ಕಪ್ಪ ಸಲ್ಲಿಸಿರುವುದು ಜನತೆಗೆ ದಿಗ್ಭ ್ರಮೆ ಉಂಟು ಮಾಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ದೂರಿದರು.

ದಿನಕರ್‌ ಅವರು ದಿನಚರಿ ರೂಪದ ನಿರೂಪಣೆ ಅನುಸರಿಸಿರುವುದನ್ನು ಹಾಗೂ ಸರ್ಕಾರಿ ರಹಸ್ಯಗಳನ್ನು ಬಯಲು ಮಾಡಿರುವ ಔಚಿತ್ಯದ ಕುರಿತು ಹಾರಿಕೆ ಉತ್ತರ ನೀಡಿದ ಯಡಿಯೂರಪ್ಪ - ದಿನಕರ್‌ ವಸ್ತುಸ್ಥಿತಿಯನ್ನು ಬಲ್ಲರು ಎಂದರು. ಮಾಜಿ ಪೊಲೀಸ್‌ ಮಹಾನಿರ್ದೇಶಕ ದಿನಕರ್‌ಗೆ ಸರ್ಕಾರ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಕೃಷ್ಣ ಈಗಲಾದರೂ ರಾಜ್‌ ಅಪಹರಣ ಪ್ರಕರಣದ ಸತ್ಯವನ್ನು ಜನತೆಯ ಮುಂದಿಡಬೇಕು ಹಾಗೂ ಒಪ್ಪಿಸಿದ ಕಪ್ಪದ ಲೆಕ್ಕ ಕೊಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ದಿನಕರ್‌ ಮಾಡಿದ್ದು ತಪ್ಪು

ರಾಜ್‌ ಅಪಹರಣ ಪ್ರಕರಣದ ಕುರಿತು ಪುಸ್ತಕ ಬರೆಯುವ ಮೂಲಕ ಮಾಜಿ ಪೊಲೀಸ್‌ ಮಹಾನಿರ್ದೇಶಕ ಸಿ.ದಿನಕರ್‌ ತಪ್ಪು ಮಾಡಿದ್ದಾರೆ ಎಂದು ಸಚಿವ ಬಿ.ಕೆ.ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ರಹಸ್ಯವನ್ನು ಕಾಪಾಡುವುದು ಪ್ರತಿಯಾಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯವಾಗಿದ್ದು , ವೃತ್ತಿ ರಹಸ್ಯಗಳನ್ನು ಬಯಲು ಮಾಡುವುದು ಸಲ್ಲ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್‌ ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more