• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್‌ ಬಿಡುಗಡೆ ರಹಸ್ಯ ಬಯಲು!

By Staff
|

*ದಟ್ಸ್‌ಕನ್ನಡ ಬ್ಯೂರೊ

The cover page of ‘Veerappan Prize catch : Rajkumar’ಬೆಂಗಳೂರು: ನಿವೃತ್ತ ಡಿಜಿಪಿ ಸಿ. ದಿನಕರ್‌ ಅವರ ಹೊಸ ಪುಸ್ತಕ ‘ವೀರಪ್ಪನ್‌ ಪ್ರೆೃಸ್‌ ಕ್ಯಾಚ್‌: ರಾಜ್‌ಕುಮಾರ್‌’ (Veerappan Prize catch : Rajkumar) ಪುಸ್ತಕದ್ದೇ ಈಗ ಎಲ್ಲೆಡೆ ಸುದ್ದಿ.

ಡಾ. ರಾಜ್‌ಕುಮಾರ್‌ರನ್ನು ವೀರಪ್ಪನ್‌ ಸೆರೆಯಿಂದ ಬಿಡುಗಡೆ ಮಾಡಲು ಸರಕಾರ 20 ಕೋಟಿ ರೂಪಾಯಿ ಕಪ್ಪ ನೀಡಿದೆ ಎಂಬ ಸ್ಫೋಟಕ ವಿಷಯದ ಉಲ್ಲೇಖ ಪುಸ್ತಕದಲ್ಲಿದ್ದು, ಇದರಿಂದ ವೀರಪ್ಪನ್‌ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆ. ಈ ಪುಸ್ತಕ ದೆಹಲಿಯಲ್ಲಿ ಗುರುವಾರ (ನ.21)ದಂದು ಬಿಡುಗಡೆಯಾಗಿದೆ. ಬೆಲೆ : 400ರೂ.

ಡಿಜಿಪಿಯಾಗಿದ್ದಾಗ, ಸರಕಾರದ ಮಟ್ಟದಲ್ಲಿ ರಾಜ್‌ ಅಪಹರಣದ ಸಂದರ್ಭದಲ್ಲಿ ತಾವು ಕಣ್ಣಾರೆ ಕಂಡ ಸನ್ನಿವೇಶ ಹಾಗೂ ಸಂದರ್ಭಗಳು, ಆಡಳಿತಾರೂಢ ನಾಯಕರ ನಿಲುವು- ನಿರ್ಧಾರ ಮತ್ತು ಕೆಲ ಪೊಲೀಸ್‌ ಅಧಿಕಾರಿಗಳು ಬಿಡುಗಡೆಗೋಸ್ಕರ ಸಂಧಾನಕಾರರ ಜೊತೆಗೆ ವ್ಯವಹರಿಸಿದ ರೀತಿ ನೀತಿಗಳನ್ನು ದಿನಕರ್‌ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಪುಸ್ತಕದಲ್ಲಿರುವ ಮುಖ್ಯ ಸಂಗತಿಗಳು-

  • ಒತ್ತೆ ಹಣಕ್ಕಾಗಿ ‘ಗಣ್ಯ ವ್ಯಕ್ತಿ’ ಗಳೇ 10 ಕೋಟಿ ರೂಪಾಯಿ ನೀಡಿದ್ದಾರೆ. ಮಿಕ್ಕವರಿಂದ ಇನ್ನಷ್ಟು ಹಣ ಸಂಗ್ರಹಿಸಲಾಗಿದೆ.
  • ರಾಜ್ಯದ ಗಣ್ಯಾತಿಗಣ್ಯ ವ್ಯಕ್ತಿಯೂ ಹಣದ ವ್ಯವಹಾರಕ್ಕಾಗಿ ವೀರಪ್ಪನ್‌ನೊಂದಿಗೆ ಮೊಬೈಲ್‌ ಮೂಲಕ ಮಾತನಾಡಿದ್ದಾರೆ.
  • ಒತ್ತೆ ಹಣದಲ್ಲಿ ನರಹಂತಕನಿಗೆ ಮಾತ್ರವಲ್ಲದೆ ಬೆಂಗಳೂರು ಹಾಗೂ ಚೆನ್ನೈನ ಕೆಲವು ಹಿರಿ ತಲೆಗಳಿಗೂ ಪಾಲು ಸಂದಿದೆ.

ಜನತೆಗೆ ಸತ್ಯ ತಿಳಿಸಲು ಪುಸ್ತಕ ಬರೆದೆಜನತೆ ಹಾಗೂ ಅನೇಕ ಗಣ್ಯರ ಒತ್ತಾಯದ ಮೇರೆಗೆ ವರನಟ ರಾಜ್‌ಕುಮಾರ್‌ ಅವರನ್ನು ನರಹಂತಕ ವೀರಪ್ಪನ್‌ ಸೆರೆಯಿಂದ ಬಿಡಿಸಿಕೊಂಡು ಬರಲು ಅನುಸರಿಸಿದ ತಂತ್ರಗಳ ವಿವರಗಳನ್ನು ಕುರಿತ Veerappan’s Prize Catch : Rajkumar ಪುಸ್ತಕ ಬರೆಯಬೇಕಾಯಿತು ಎಂದು ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಸ್ಪಷ್ಟಪಡಿಸಿದ್ದಾರೆ.

C. Dinakarಪುಸ್ತಕವನ್ನು ಬರೆಯುವ ಮೂಲಕ ಯಾರನ್ನೂ ನೋಯಿಸುವ ಅಥವಾ ಮುಜುಗರ ಉಂಟುಮಾಡುವ ಉದ್ದೇಶ ತಮಗಿರಲಿಲ್ಲ. ಜನತೆಗೆ ಸತ್ಯ ಸಂಗತಿಯನ್ನು ತಿಳಿಸುವುದಷ್ಟೇ ಪುಸ್ತಕದ ಉದ್ದೇಶ ಎಂದು ಶುಕ್ರವಾರ ತಮ್ಮನ್ನು ಭೇಟಿಮಾಡಿದ ಸುದ್ದಿಗಾರರಿಗೆ ದಿನಕರ್‌ತಿಳಿಸಿದರು.

ಸೇವೆಯಲ್ಲಿದ್ದಾಗಲೇ ಈ ಪುಸ್ತಕ ರಚಿಸಲು ಉದ್ದೇಶಿಸಿದ್ದೆ. ಆದರೆ, ಅದು ಸಾಧ್ಯವಾದದ್ದು ಈಗ. ರಾಜ್‌ಕುಮಾರ್‌ ಅವರು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು- ಅವರ ಕುರಿತು ಜನತೆಗೆ ಅಪಾರವಾದ ಅಭಿಮಾನ, ಪ್ರೀತಿ ಇದೆ. ಇಂಥ ವ್ಯಕ್ತಿ ಕಾಡಿನಲ್ಲಿ ಅನುಭವಿಸಿದ ತವಕ ತಲ್ಲಣಗಳು ಹಾಗೂ ಅವರನ್ನು ಬಿಡಿಸಿಕೊಂಡು ಬರಲು ಸರ್ಕಾರ ಅನುಸರಿಸಿದ ತಂತ್ರಗಾರಿಕೆಯನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಕೃತಿ ರಚಿಸಿದ್ದೇನೆ ಎಂದರು.

ಅಪಾರ ಬೇಡಿಕೆ : ದಿನಕರ್‌ ಅವರ ಪುಸ್ತಕಕ್ಕೆ ಅಪಾರ ಬೇಡಿಕೆ ವ್ಯಕ್ತವಾಗಿದೆ. ಪುಸ್ತಕ ಪೇಟೆಯಲ್ಲಿ ಪುಸ್ತಕ ಲಭ್ಯವಿಲ್ಲದುದರಿಂದ ಕುತೂಹಲಿಗಳು ಪುಸ್ತಕಕ್ಕಾಗಿ ದಿನಕರ್‌ ಮನೆಗೆ ಎಡತಾಕುತ್ತಿದ್ದಾರೆ. ನಿಮಗೂ ಪುಸ್ತಕ ಬೇಕಾ ? ಸಿ.ದಿನಕರ್‌ ಅವರ ಕಚೇರಿಯ ವಿಳಾಸ : 380, 100 ಅಡಿ ರಸ್ತೆ , ಎಚ್‌ಎಎಲ್‌ ಎರಡನೇ ಹಂತ, ಬೆಂಗಳೂರು- 560 008.

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more