• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಕಬ್ಬಿನಾಲೆ ಭಾರದ್ವಾಜರ ಅಷ್ಟಾವಧಾನ

By Staff
|

ಅಷ್ಟಾವಧಾನ ಎನ್ನುವ ಹೆಸರನ್ನು ಎಲ್ಲಿಯಾದರೂ ಕೇಳಿಯೇ ಇರುತ್ತೀರಿ. ಪದೇಪದೇ ಕಿವಿಗೆ ಬೀಳುವ ಈ ಪದ- ಅಷ್ಟಾವಧಾನ ಎಂದರೇನು ?

ಮನಸ್ಸಿನ ಬಹಿರ್ಮುಖತೆಗೆ ಕಡಿವಾಣ ಹಾಕಿ, ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು ಎಂದು ಅಷ್ಟಾವಧಾನದ ಕುರಿತು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳುತ್ತಾರೆ. ಅಂದರೆ, ಹುಚ್ಚು ಮನಸ್ಸಿನ ಕಡಿವಾಣವೇ ಅಷ್ಟಾವಧಾನವಾ ? ಉಹ್ಞುಂ, ಹೆಚ್ಚಿನ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ . ಅಷ್ಟಾವಧಾನದ ಬಗ್ಗೆ ತಿಳಿಯಬೇಕೆಂದರೆ ಅಷ್ಟಾವಧಾನದ ಪ್ರದರ್ಶನಕ್ಕೇ ಹೋಗಬೇಕು.

ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನ.24 ರ ಭಾನುವಾರ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಅಷ್ಟಾವಧಾನ ಪ್ರದರ್ಶನ ನಡೆಯಲಿದೆ. ಉಪಾಧ್ಯ ಪ್ರತಿಷ್ಠಾನ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ. ಅಂದಹಾಗೆ, ಭಾರದ್ವಾಜ ಅವರು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯವರು.

ದೇಶಿಭಾಷೆಗಳಲ್ಲಿ ಅಷ್ಟಾವಧಾನ ಮೊದಲು ಅವತರಿಸಿದ್ದು ಕನ್ನಡ ಭಾಷೆಯಲ್ಲಿ ಎನ್ನುತ್ತಾರೆ ವಸಂತ ಭಾರದ್ವಾಜ.

ಭಾನುವಾರದ ಅಷ್ಟಾವಧಾನ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : (080) 2220802 ಅಥವಾ 2235533.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more