ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಭೆ: ಆಡಳಿತಕ್ಕೆ ಚುರುಕು, ರಜೆ ಸಂಖ್ಯೆ ಹೆಚ್ಚಳ

By Staff
|
Google Oneindia Kannada News

ಬೆಂಗಳೂರು : ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಾಗಿ 2 ಲಕ್ಷ ಟನ್‌ ಹೆಚ್ಚುವರಿ ಆಹಾರ ಧಾನ್ಯ ಪೂರೈಸುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಕೂಲಿಗಾಗಿ ಕಾಳು ಯೋಜನೆಯನ್ನು ಬರಪೀಡಿತ ಪ್ರದೇಶಗಳಲ್ಲಿ ತೀವ್ರಗೊಳಿಸುವ ಉದ್ದೇಶದಿಂದ ಹೆಚ್ಚುವರಿ ಆಹಾರ ಧಾನ್ಯ ಪೂರೈಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಗುರುವಾರ ನಡೆದ ಸಂಪುಟ ಸಭೆ ತೀರ್ಮಾನಿಸಿತು ಎಂದು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ 120 ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಸುರಿದಿದ್ದು , ಕಡಿಮೆ ಮಳೆಯಿಂದಾಗಿ 55 ತಾಲ್ಲೂಕುಗಳು ಇನ್ನೂ ಬರದ ದವಡೆಯಲ್ಲಿ ನರಳುತ್ತಿವೆ. ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆಗೊಂಡಿದೆ. ಆದರೆ, ಆಹಾರ ಧಾನ್ಯಗಳ ಕೊರತೆ ಮುಂದುವರಿದಿದೆ ಎಂದು ತಿಮ್ಮಪ್ಪ ಹೇಳಿದರು.

ಸಂಪುಟ ಸಭೆಯ ನಂತರ ಸಚಿವ ಕಾಗೋಡು ತಿಮ್ಮಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ ಇತರ ಮುಖ್ಯಾಂಶಗಳು :

  • ಬರ ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರ 92 ಕೋಟಿ ರುಪಾಯಿ ಖರ್ಚು ಮಾಡಿದ್ದು , ಬಡ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 26 ಸಾವಿರದ 500 ಕಾಮಗಾರಿಗಳನ್ನು ಹಮ್ಮಿಕೊಂಡಿದೆ.
  • ಕಾಲೇಜು ಶಿಕ್ಷಕರನ್ನು ನೇರ ನೇಮಕಾತಿಯ ಮೂಲಕ ತುಂಬಲು ಸಂಪುಟ ಸಭೆ ತೀರ್ಮಾನಿಸಿದೆ. ಪ್ರತಿಶತ 50 ಅಂಕ ಹೊಂದಿದೆ ಎಸ್‌ಸಿ, ಎಸ್‌ಟಿ ಹಾಗೂ ಪ್ರತಿಶತ 55 ಅಂಕ ಹೊಂದಿದ ಇತರ ವರ್ಗದವರು ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರು.
  • ಆಡಳಿತವನ್ನು ಚುರುಕುಗೊಳಿಸಲು ನಿರ್ಧಾರ.
  • ರಜಾದಿನಗಳ ಸಂಖ್ಯೆ 18 ರಿಂದ 19ಕ್ಕೆ ಹೆಚ್ಚಳ. ರಜಾದಿನವಾಗಿ ಗುರುನಾನಕ್‌ ಜಯಂತಿ ಘೋಷಣೆ.
  • ಪಾಲಿಟೆಕ್ನಿಕ್‌ ಕಾಲೇಜು ಶಿಕ್ಷಕರಿಗೆ ಎಐಸಿಟಿಇ ಶ್ರೇಣಿ ವೇತನ ದರ್ಜೆ ಜಾರಿ.
  • ಎನ್‌ಸಿಡಿಸಿ ಸಹಯೋಗದಲ್ಲಿ ಒಳನಾಡು ಮೀನುಗಾರರ ಅಭಿವೃದ್ಧಿಗೆ 13.40 ಕೋಟಿ ರುಪಾಯಿ ಯೋಜನೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X