ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪಾತಿ ಮೇಲೆ ದರುಶನ ಕೊಟ್ಟ ಏಸು ಮಹಾಪ್ರಭು !

By Staff
|
Google Oneindia Kannada News

* ದಟ್ಸ್‌ಕನ್ನಡ ಬ್ಯೂರೋ

Jesus in Miracle Chapathiಬೆಂಗಳೂರು : ನಗರದ ಕ್ರಿಶ್ಚಿಯನ್‌ ಕೇಂದ್ರವೊಂದರಲ್ಲಿ ನೂಕುನುಗ್ಗಲು ಜನ; ಪವಾಡ ಸದೃಶ ಚಪಾತಿಯಾಂದನ್ನು ನೋಡೋಕೆ. ಯಾಕೆಂದರೆ, ಈ ಚಪಾತಿ ಮೇಲೆ ಥೇಟ್‌ ಏಸು ಕ್ರಿಸ್ತನ ಚಿತ್ರ ಅದು ಹೇಗೋ ಮೂಡಿಬಿಟ್ಟಿದೆ !

ರಿನ್ಯೂವಲ್‌ ರಿಟ್ರೀಟ್‌ ಸೆಂಟರ್‌ನ ಪರಮ ಭಕ್ತೆಯಾಬ್ಬಳು ನವೆಂಬರ್‌ 15 ನೇ ತಾರೀಕು ಶುಕ್ರವಾರ ಯಥಾ ಪ್ರಕಾರ ಚಪಾತಿ ಸುಡುತ್ತಿರುವಾಗ, ಅದರ ಮೇಲೆ ಪವಾಡವೆಂಬಂತೆ ಏಸು ಕ್ರಿಸ್ತನ ಮುಖವನ್ನೇ ಹೋಲುವ ಚಿತ್ರ ಮೂಡಿತು. ಆ ಚಪಾತಿಯನ್ನು ತಿನ್ನದೆ ಭಕ್ತೆ ಸೀದಾ ಸೆಂಟರ್‌ನವರಿಗೆ ಕೊಟ್ಟು, ಕೈಮುಗಿದಳು.

ಮರುದಿನದಿಂದಲೇ ಅಲ್ಲಿ ಜನವೋ ಜನ. ಫಾದರ್‌ ಜಾರ್ಜ್‌ ಜಾಕೊಬ್‌ ಪೂತಕುಳಿ ಅವರಿಗಂತೂ ಜನ ಸಂದಣಿಯನ್ನು ನಿಭಾಯಿಸುವುದೇ ದೊಡ್ಡ ಕೆಲಸವಾಯಿತು. ಅಷ್ಟೇ ಅಲ್ಲ, ಪಾದರ್‌ ಹೇಳುವಂತೆ- ಒಂದು ವಾರ ಕಳೆದರೂ ಚಪಾತಿ ಹಾಳಾಗಿಲ್ಲ. ಅದರ ಮೇಲಿನ ಜೀಸಸ್‌ ಚಿತ್ರವೂ ಕಳೆಗುಂದಿಲ್ಲ. ಭಕ್ತೆ ತಂದುಕೊಟ್ಟ ಚಪಾತಿಯಲ್ಲಿ ಮರುದಿನ ಮದರ್‌ ಮೇರಿ ಚಿತ್ರವೂ ಕಾಣಿಸಿಕೊಂಡಿತು. ಇದು ಪವಾಡವಲ್ಲದೆ ಇನ್ನೇನು?

ಪ್ರತಿ ದಿನವೂ ಈ ಪವಾಡ ಚಪಾತಿ ನೋಡೋಕೆ ಸಾವಿರಾರು ಜನ ಬರುತ್ತಿದ್ದಾರೆ. ಚಪಾತಿ ಹಾಳಾಗುವವರೆಗೆ ಅದನ್ನು ಬಿಸಾಡುವ ಮಾತೇ ಇಲ್ಲ ಅನ್ನುತ್ತಾರೆ ಫಾದರ್‌.

ಚಪಾತಿ ಸೀದಾಗ, ಅಕಸ್ಮಾತ್ತಾಗಿ ಜೀಸಸ್‌ ಮುಖವನ್ನೇ ಹೋಲುವ ಮಸಿ ಅದರ ಮೇಲೆ ಮೂಡಿರಬಹುದು. ಇದೆಂಥಾ ಪವಾಡ ಎಂಬುದು ಕೆಲವರ ಪ್ರತಿಕ್ರಿಯೆ. ಆದರೆ, ಜೀಸಸ್‌ ಮುಖವೇ ಯಾಕೆ ಬಂತು, ಬೇರೇನಾದರೂ ಮುಖ ಮೂಡಬಹುದಿತ್ತಲ್ಲ. ಇದು ಏಸುವಿನ ಮಹಿಮೆ, ಭಕ್ತರಿಗೆ ಅವನು ಹೇಗಾದರೂ ದರ್ಶನ ಕೊಡುತ್ತಾನೆ ಅನ್ನುವುದು ಪರಮ ಆಸ್ತಿಕರ ನಿಲುವು.

ಈ ಪವಾಡ ಚಪಾತಿಯ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮನೆಯ ಚಪಾತಿಯಲ್ಲೂ ಯಾವುದಾದರೂ ದೇವರ ಮೂರ್ತಿ ಮೂಡಿದ ಅನುಭವವಿದ್ದರೆ ಕೂಡಲೇ ಹಂಚಿಕೊಳ್ಳಿ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X