ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಗಳ ಮೇಲೆ ಎಚ್‌ಐವಿ ಲಸಿಕೆ ಪ್ರಯೋಗ

By Staff
|
Google Oneindia Kannada News

ಬೆಂಗಳೂರು : ಭಾರತೀಯ ವಿಜ್ಞಾನಿಗಳು ಎಚ್‌ಐವಿ ಹೋಗಲಾಡಿಸಲು ತಯಾರಿಸಿರುವ ಲಸಿಕೆಯನ್ನು ಅಮೆರಿಕಾದ ಪ್ರಯೋಗಾಲಯವೊಂದರ ಸಹಯೋಗದೊಂದಿಗೆ ಮಂಗಗಳ ಮೇಲೆ ಪರೀಕ್ಷಿಸಲಾಗುವುದು ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮಂಜು ಶರ್ಮ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದ ಮಂಜು ಶರ್ಮ, ಈಗಾಗಲೇ ಮೊದಲ ಮೇಲೆ ಭಾರತೀಯ ವಿಜ್ಞಾನಿಗಳು ಕಂಡುಹಿಡಿದಿರುವ ಎಚ್‌ಐವಿ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ. ಇನ್ನಾರು ತಿಂಗಳಲ್ಲಿ ಮಂಗಗಳ ಮೇಲೂ ಪ್ರಯೋಗ ನಡೆಯಲಿದ್ದು, ಅಮೆರಿಕೆಯ ಪ್ರಯೋಗಾಲಯವೊಂದರ ಜೊತೆ ಈ ಕುರಿತ ಒಪ್ಪಂದ ಪ್ರಕ್ರಿಯೆ ಮುಗಿದಿದೆ ಎಂದರು.

ಈಗ ಸಿದ್ಧವಾಗಿರುವ ಎಚ್‌ಐವಿ ಲಸಿಕೆಯ ಸೂಕ್ತ ರೀತಿಯ ಪ್ರಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಬೇಕಾಗಿದೆ. ಈಗಾಗಲೇ ಭಾರತೀಯ ವಿಜ್ಞಾನಿಗಳು ಡಿಎನ್‌ಎ ರ್ಯಾಬೀಸ್‌ ಲಸಿಕೆಯನ್ನೂ ಅಭಿವೃದ್ಧಿಪಡಿಸಿದ್ದು, ಸದ್ಯದಲ್ಲೇ ಅದನ್ನು ಉಪಯೋಗಕ್ಕೆ ಬಿಡುಗಡೆ ಮಾಡಲಾಗುವುದು. ವಿಶ್ವದಲ್ಲೇ ಈ ಪರಿಯ ಲಸಿಕೆ ಸಿದ್ಧಪಡಿಸಿರುವುದು ಇದೇ ಮೊದಲು ಎಂದು ಶರ್ಮ ಶ್ಲಾಘಿಸಿದರು.

ಹತ್ತನೇ ಪಂಚ ವಾರ್ಷಿಕ ಯೋಜನೆಯಲ್ಲಿ ಇಲಾಖೆ 1,500 ಕೋಟಿ ರುಪಾಯಿ ಮಂಜೂರು ಮಾಡಿದೆ. ಲಸಿಕೆ ತಂತ್ರ, ಜೀನ್‌ ಶಾಸ್ತ್ರ ಮತ್ತು ಜೈವಿಕ ಮಾಹಿತಿ ವಿಷಯಗಳ ಪ್ರಯೋಗಗಳಿಗೆ ಹೆಚ್ಚು ಒತ್ತು ಕೊಡಲಾಗುವುದು. ಕಾಲರಾ ಮತ್ತು ಕ್ಷಯ ರೋಗಕ್ಕೆ ಹೊಸ ಲಸಿಕೆಯನ್ನು ಭಾರತೀಯ ವಿಜ್ಞಾನಿಗಳು ಸಿದ್ಧ ಪಡಿಸುತ್ತಿದ್ದಾರೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X