ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಳ ವಿಲೀನಕ್ಕೆ ನ.25ರೊಳಗೆ ಬೊಮ್ಮಾಯಿ ಸೂತ್ರ

By Staff
|
Google Oneindia Kannada News

ಬೆಂಗಳೂರು : ನಾಯಕರ ನಡುವಿನ ಭಿನ್ನಾಭಿಪ್ರಾಯ ಮತ್ತು ಕಿರಿಕ್ಕುಗಳು ಮುಂದುವರೆದಿದ್ದರೂ, ಮಾಜಿ ಕೇಂದ್ರ ಸಚಿವ ಎಸ್‌.ಆರ್‌.ಬೊಮ್ಮಾಯಿ ಜನತಾ ದಳದ ಉಭಯ ಬಣಗಳನ್ನು ಸೇರಿಸಲು ನವೆಂಬರ್‌ 25ರ ಹೊತ್ತಿಗೆ ಅಂತಿಮ ಸೂತ್ರ ಹೊಸೆಯುವುದಾಗಿ ಹೇಳಿದ್ದಾರೆ.

ಸಂಯುಕ್ತ ಜಯತಾ ದಳ ಹಾಗೂ ಜಾತ್ಯತೀತ ಜನತಾ ದಳ ಮುಖಂಡರ ಜೊತೆಗಿನ ಜಂಟಿ ಸಭೆಯ ನಂತರ ತಮ್ಮ ಸ್ವಗೃಹದಲ್ಲಿ ಬೊಮ್ಮಾಯಿ ಗುರುವಾರ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉಭಯ ದಳಗಳೂ ಒಂದಾಗಿ ರಾಷ್ಟ್ಟ್ರೀಯ ಪಕ್ಷವೊಂದು ಜನ್ಮತಳೆಯಬೇಕು ಎಂಬುದು ನಮ್ಮ ಒಮ್ಮತದ ನಿರ್ಣಯ. ಕಾಂಗ್ರೆಸ್‌ ಮತ್ತು ಬಿಜೆಪಿ ಗೆ ಪರ್ಯಾಯವಾಗಿ ಹೊಸ ಪಕ್ಷವನ್ನು ಬಲಾಢ್ಯವಾಗಿ ರೂಪಿಸಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾ ದಳ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಸಂಯುಕ್ತ ಜನತಾದಳ ಮುಖಂಡ ರಾಮಕೃಷ್ಣ ಹೆಗಡೆ ಅವರ ಜೊತೆ ದಳ ವಿಲೀನದ ಬಗ್ಗೆ ಚರ್ಚಿಸಿ, ಮನವೊಲಿಸುತ್ತೇನೆ. ಪಕ್ಷದ ಸದಸ್ಯರು ವಿಲೀನ ಪ್ರಕ್ರಿಯೆಗೆ ಚಾಲನೆ ಕೊಡಲು ಉತ್ಸುಕರಾಗಿದ್ದು, ಯಾವುದೇ ತಕರಾರಿಲ್ಲ ಎಂದರು.

ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆ ಪರಸ್ಪರ ದೂರುತ್ತಿರುವ ವಿಷಯವನ್ನು ಪ್ರಸ್ತಾಪಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಲು ಬೊಮ್ಮಾಯಿ ನಿರಾಕರಿಸಿದರು.

ಕರ್ನಾಟಕ ಜೆಡಿ-ಯು ಅಧ್ಯಕ್ಷ ಸಿ.ಭೈರೇಗೌಡ ಅವರಿಗೆ ಯಾವುದೋ ತುರ್ತು ಕೆಲಸ ಇದ್ದದ್ದರಿಂದ ಸಭೆಗೆ ಬರುಲಾಗುತ್ತಿಲ್ಲ ಎಂದು ಬೊಮ್ಮಾಯಿಯವರಿಗೆ ತಿಳಿಸಿದ್ದರು. ಕರ್ನಾಟಕ ಜೆಡಿ- ಎಸ್‌ ಮುಖಂಡ ಸಿದ್ಧರಾಮಯ್ಯ ಕೂಡ ಸಭೆಗೆ ಗೈರು ಹಾಜರಾಗಿದ್ದರು. ಉಭಯ ದಳಗಳ ಇತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಗೆ ಮುನ್ನ...
ಸಂಯುಕ್ತ ಜನತಾ ದಳದ ಕೆಲವು ನಾಯಕರ ವರ್ತನೆಯಿಂದ ವಿಲೀನ ಸಾಧ್ಯವಾಗುತ್ತಿಲ್ಲ ಎಂದು ದೇವೇಗೌಡ ನೇರವಾಗಿ ಟೀಕೆ ಮಾಡಿದರು. ಇದಕ್ಕೆ ಪ್ರತಿಯಾಗಿ ರಾಮಕೃಷ್ಣ ಹೆಗಡೆ ಕೂಡ ಮಾತನಾಡಿ, ವಿಲೀನ ಪ್ರಕ್ರಿಯೆಗೆ ಸಮಯದ ಗಡುವನ್ನೇ ಹಾಕಿಕೊಂಡಿಲ್ಲ ಎಂದರು.

ಎನ್‌ಡಿಎಯಿಂದ ಸಂಯುಕ್ತ ಜನತಾ ದಳ ಹೊರ ಬಂದರೆ ಮಾತ್ರ ವಿಲೀನ ಎಂಬ ಜಾತ್ಯತೀಯ ಜನತಾ ದಳದ ಪಟ್ಟೇ ವಿಲೀನ ಪ್ರಕ್ರಿಯೆಗೆ ಅಡೆಯಾಗಿರಬಹುದು ಎಂಬ ಮಾತಿದೆ. ವಾಜಪೇಯಿ ಸಂಪುಟದಲ್ಲಿರುವ ಸಂಯುಕ್ತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌, ತಮ್ಮ ಮುಂದೆ ಯಾವುದೇ ವಿಲೀನ ಪ್ರಕ್ರಿಯೆಯ ಪ್ರಸ್ತಾವನೆ ಬಂದಿಲ್ಲ ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X