ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲೇ ಧಾರ್ಮಿಕ ತಾರತಮ್ಯ ಹೆಚ್ಚು-ಪ್ರೇಂಜಿ

By Staff
|
Google Oneindia Kannada News

ನ್ಯೂಯಾರ್ಕ್‌ : ಭಾರತಕ್ಕಿಂಥ ಅಮೆರಿಕದಲ್ಲೇ ಧಾರ್ಮಿಕ ತಾರತಮ್ಯ ಹೆಚ್ಚಾಗಿದೆ ಎಂದು ಆಪಾದಿಸಿರುವ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ, ತಮ್ಮ ಅಮೆರಿಕ ಭೇಟಿಗಳಲ್ಲಿ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ತಾವು ತೊಂದರೆ ಅನುಭವಿಸಿದ್ದಾಗಿ ಹೇಳಿದ್ದಾರೆ.

ಧರ್ಮದ ಕಾರಣಕ್ಕಾಗಿ ಭಾರತದಲ್ಲಿ ತೊಂದರೆ ಎದುರಿಸುವುದು ತಮ್ಮ ಅನುಭವಕ್ಕೆ ಬಂದಿಲ್ಲ ಎಂದು ಪತ್ರಕರ್ತರೊಡನೆ ಔಪಚಾರಿಕ ಭೇಟಿಯಲ್ಲಿ ಮಾತನಾಡಿದ (ನ.12 ರ ಮಂಗಳವಾರ) ಪ್ರೇಂಜಿ ಹೇಳಿದರು. ಮುಸ್ಲಿಂ ಎನ್ನುವುದೇ ಭಾರತದಲ್ಲಿ ಅನಾನುಕೂಲಕ್ಕೆ ಕಾರಣವಾಗಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೇಂಜಿ- ಭಾರತಕ್ಕಿಂಥ ಅಮೆರಿಕದಲ್ಲೇ ಧಾರ್ಮಿಕ ತಾರತಮ್ಯ ಹೆಚ್ಚು ಎಂದರು.

ಪ್ರಾಥಮಿಕವಾಗಿ ತಮ್ಮನ್ನು ಭಾರತೀಯ ಎಂದು ಭಾವಿಸಿಕೊಂಡಿದ್ದು, ಧರ್ಮದ ವಿಷಯ ಮನಸ್ಸಿಗೇ ಬಂದಿಲ್ಲ ಎಂದು ಪ್ರೇಂಜಿ ಹೇಳಿದರು.

ಅಮೆರಿಕದಲ್ಲಿ ವಿಮಾನ ಪ್ರಯಾಣದ ಸಂದರ್ಭದಲ್ಲಿ ಮುಸ್ಲಿಂ ಎನ್ನುವ ಕಾರಣವೇ ಕಿರಿಕಿರಿಗೆ ಕಾರಣವಾಗುತ್ತಿದೆ. ನನ್ನ ಹೆಸರೇ ನಾನು ಓರ್ವ ಮುಸ್ಲಿಂ ಎನ್ನುವುದನ್ನು ತೋರಿಸಿಕೊಡುತ್ತದೆ ಎಂದ ಅವರು, ತಮ್ಮ ಹೆಸರನ್ನು ಎ.ಪ್ರೇಂಜಿ ಎಂದು ಹೆಸರು ಬದಲಿಸಿಕೊಳ್ಳುವ ಯೋಚನೆ ಬರುತ್ತಿದೆ ಎಂದು ನಕ್ಕರು.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X