ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಎರಗುವೆ : ಒಸಾಮ ಉವಾಚ... !

By Staff
|
Google Oneindia Kannada News

ದೋಹಾ : ವೀರಪ್ಪನ್‌ ತರಹ ತಣ್ಣಗಿದ್ದುಕೊಂಡೇ ಹಠಾತ್ತು ಬಿಸಿ ಮುಟ್ಟಿಸುವ ಜಾಯಮಾನದ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಮತ್ತೆ ಅಮೆರಿಕಾ ಮೇಲೆ ಎರಗಲಿದ್ದಾನೆ ! ಇಂಥ ದಟ್ಟ ಸುದ್ದಿಯಾಂದನ್ನು ಅಲ್‌- ಜಜೀರಾ ಟಿವಿ ಚಾನೆಲ್‌ ಬಿತ್ತರಿಸಿದೆ; ಅದೂ ಒಸಾಮನ ಖುದ್ದು ಕಂಠದಲ್ಲಿ.

ಆಫ್ಘನ್‌ ಯುದ್ಧ ನಡೆದ ವರ್ಷಾಚರಣೆ ಸಂದರ್ಭದಲ್ಲಿ ಒಸಾಮ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದ್ದು, ಆತನ ಮಾತುಗಳಿರುವ ಧ್ವನಿ ಸುರುಳಿಯು ಅಲ್‌- ಜಜೀರಾ ಚಾನೆಲ್‌ ಕೈಗೆ ಸಿಕ್ಕಿದೆ. ಒಸಾಮನ ಮಾತಿನ ಸಾರ ಹೀಗಿದೆ-

  • ಎಲ್ಲಿಯವರೆಗೆ ಅರಬರು ಮತ್ತು ಮುಸ್ಲಿಮರ ವಿರುದ್ಧ ಅಮೆರಿಕ ಕತ್ತಿ ಮಸೆಯುತ್ತ ಅನ್ಯಾಯ ಮಾಡುತ್ತಿರುತ್ತದೋ ಅಲ್ಲಿಯವರೆಗೆ ನನ್ನ ದಾಳಿ ನಿಲ್ಲುವುದಿಲ್ಲ.
  • ಪ್ಯಾಲಸ್ಟೈನ್‌ನಲ್ಲಿರುವ ನಮ್ಮ ಜನರನ್ನು ಶತಮಾನದಿಂದ ಅಮೆರಿಕಾ ಕೊಲ್ಲುತ್ತಲೇ ಬಂದಿದೆ. ಭಯೋತ್ಪಾದನೆ ಮಟ್ಟ ಹಾಕುತ್ತೇವೆ ಎಂಬ ಬ್ಯಾನರ್‌ ಹಿಡಿದು ಅಸಂಖ್ಯ ಮುಗ್ಧ ಮುಸ್ಲಿಮರನ್ನು ಅಮೆರಿಕ ಕೊಲ್ಲುತ್ತಿದೆ. ಇದಕ್ಕೆ ಕೆಲವು ದೇಶಗಳ ಬೆಂಬಲ ಇರುವುದು ದುರಂತವೇ ಸರಿ.
  • ಪ್ರಸ್ತುತ ಜೀವಂತವಿರುವ ಸರಣಿ ಕೊಲೆಗಾರರು ಇರುವುದೇ ಶ್ವೇತ ಭವನದ ಗ್ಯಾಂಗ್‌ನಲ್ಲಿ.
ಈ ಕೆಸೆಟ್ಟಿನಲ್ಲಿರುವುದು ಒಸಾಮನ ದನಿಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವ ಕೆಲಸದಲ್ಲಿ ಅಮೆರಿಕ ಬೇಹುಗಾರಿಕಾ ದಳಗಳು ನಿರತವಾಗಿವೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X