• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ನಂ.1- ಬಿಲ್‌ಗೇಟ್ಸ್‌ ಶ್ಲಾಘನೆ

By Staff
|

Microsoft Chief Bill Gatesಬೆಂಗಳೂರು : ‘ಬೆಂಗಳೂರು ಒನ್‌’ ಎನ್ನುವ ಮಹತ್ವದ ಆನ್‌ಲೈನ್‌ ಫೋರ್ಟಲ್‌ ಯೋಜನೆಯನ್ನು ಜಂಟಿಯಾಗಿ ಕಾರ್ಯಗತಗೊಳಿಸುವ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಮೈಕ್ರೊಸಾಫ್ಟ್‌ ಬುಧವಾರ (ನ.13) ಸಹಿ ಹಾಕಿದವು.

ಸರ್ಕಾರ ಹಾಗೂ ಅರೆ ಸರ್ಕಾರ ಸಂಸ್ಥೆಗಳ ಸೇವೆಗಳನ್ನು ಏಕ ಛಾವಣಿಯಡಿ ತರುವ ‘ಬೆಂಗಳೂರು ಒನ್‌’ ಮಹತ್ವದ ಯೋಜನೆಗೆ ಮೈಕ್ರೋಸಾಫ್ಟ್‌ ಹಾಗೂ ಕರ್ನಾಟಕ ಸರ್ಕಾರ ಕೈ ಜೋಡಿಸಿರುವ ವಿಷಯವನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಮತ್ತು ಮೈಕ್ರೋಸಾಫ್ಟ್‌ ಮುಖ್ಯಸ್ಥ ಬಿಲ್‌ಗೇಟ್ಸ್‌ ಇನ್ಫೋಸಿಸ್‌ ಆವರಣದಲ್ಲಿ ಬುಧವಾರ ಪ್ರಕಟಿಸಿದರು.

ನೀರಿನ ಬಿಲ್‌ ಅಥವಾ ವಿದ್ಯುತ್‌ ಬಿಲ್‌ ಮುಂತಾದ ಸೇವೆಗಳನ್ನು ಒಂದೆಡೆಯೇ ಪಾವತಿಸಲು ಅವಕಾಶ ಕಲ್ಪಿಸುವ ಈ ವ್ಯವಸ್ಥೆ ಯ ಮೂಲಕ- ಬೆಂಗಳೂರಿನ ನಾಗರಿಕರ ಮನೆಬಾಗಿಲಿಗೆ ತಂತ್ರಜ್ಞಾನವನ್ನು ಒಯ್ದಂತಾಗಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಬಣ್ಣಿಸಿದರು.

ರಿkುೕರೋ ಪೈರಸಿ ಸಂಸ್ಥೆಯಾಗಿ ಕರ್ನಾಟಕ ಸರ್ಕಾರ ಹೊಮ್ಮಿರುವುದಾಗಿ ಇದೇ ಸಂದರ್ಭದಲ್ಲಿ ಕೃಷ್ಣ ಪ್ರಕಟಿಸಿದರು. 2000 ಇಸವಿಯಲ್ಲಿ ಬೆಂಗಳೂರಿಗೆ ಬಂದಿದ್ದ ಬಿಲ್‌ಗೇಟ್ಸ್‌ ಅವರಲ್ಲಿ - ರಿkುೕರೊ ಪೈರಸಿ ಸಾಧಿಸುವ ಕನಸನ್ನು ಹಂಚಿಕೊಂಡಿದ್ದೆ . ಆ ಗುರಿ ಈಗ ಸಾಧ್ಯವಾಗಿದೆ ಎಂದು ಕೃಷ್ಣ ಹೇಳಿದರು.

ಗೇಟ್ಸ್‌ ಶ್ಲಾಘನೆ

ಕರ್ನಾಟಕ ಹಲವು ರೀತಿಯಲ್ಲಿ ನಾಯಕತ್ವದ ಪಾತ್ರ ವಹಿಸಿದೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ದೈತ್ಯ ಸಾಧನೆ ಮಾತ್ರವಲ್ಲದೆ, ಕೃಷ್ಣ ಅವರ ನಾಯಕತ್ವದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿ ಸಾಧನವಾಗಿ ನಾಗರಿಕರಿಗೆ ಮುಟ್ಟಿಸುವಲ್ಲಿಯೂ ಕರ್ನಾಟಕ ಸರ್ಕಾರ ಯಶಸ್ವಿಯಾಗಿದೆ ಎಂದು ಮೈಕ್ರೋಸಾಫ್ಟ್‌ ಮುಖ್ಯಸ್ಥ ಬಿಲ್‌ ಗೇಟ್ಸ್‌ ಪ್ರಶಂಸಿಸಿದರು.

ಬೌದ್ಧಿಕ ಆಸ್ತಿಯ ರಕ್ಷಣೆ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಮುಖ್ಯವಾಗಿದ್ದು , ರಿkುೕರೊ ಪೈರಸಿ ಸಾಧಿಸಿರುವ ಕರ್ನಾಟಕದ ಸಾಧನೆ ಪ್ರಶಂಸನೀಯ ಎಂದು ಗೇಟ್ಸ್‌ ಹೇಳಿದರು. ನಾಸ್‌ಕಾಮ್‌ ಮತ್ತು ಮೈಕ್ರೋಸಾಫ್ಟ್‌ ಏರ್ಪಡಿಸಿದ್ದ ಸಭೆಯಲ್ಲಿ 2500 ಕ್ಕೂ ಹೆಚ್ಚು ಮಂದಿಯನ್ನು ಉದ್ದೇಶಿಸಿ ಗೇಟ್ಸ್‌ ಮಾತನಾಡುತ್ತಿದ್ದರು.

ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕದ ಐದು ವಲಯಗಳಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದು ಸ್ಮಾರ್ಟ್‌ ಸ್ಕೂಲ್‌ ಯೋಜನೆಯನ್ನು ಹಮ್ಮಿಕೊಳ್ಳುವ ಕುರಿತು ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೈಕ್ಷಣಿಕ ಗುಣಮಟ್ಟ, ಆಡಳಿತ, ತಂತ್ರಜ್ಞಾನ ಮುಂತಾದ ಅಭಿವೃದ್ಧಿ ಚಟುವಟಿಕೆಗಳಿಗೆ ಮೈಕ್ರೊಸಾಫ್ಟ್‌ ನೆರವು ನೀಡಲಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮೈಕ್ರೊಸಾಫ್ಟ್‌ ಕರ್ನಾಟಕ ಸರ್ಕಾರದೊಂದಿಗೆ ಒಗ್ಗೂಡಿ ಕೆಲಸ ಮಾಡಲಿದೆ ಎಂದು ಬಿಲ್‌ಗೇಟ್ಸ್‌ ತಿಳಿಸಿದರು.

ಇನ್ಫೋಸಿಸ್‌ಗೆ ವಿಶ್ವ ಮಾನ್ಯತೆ

ನಾಸ್ದಾಕ್‌ ಪಟ್ಟಿಯಲ್ಲಿರುವ ಇನ್ಫೋಸಿಸ್‌ ಟೆಕ್ನಾಲಜಿಸ್‌ ಲಿಮಿಟೆಡ್‌ ನಿಗದಿತ ವೇಳೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಸಲ್ಲಿಸುವಲ್ಲಿ ಹೆಸರುವಾಸಿಯಾಗಿದ್ದು, ವಿಶ್ವ ಮಾನ್ಯತೆ ಪಡೆದಿದೆ ಎಂದು ಬಿಲ್‌ಗೇಟ್ಸ್‌ ಇನ್ಫೋಸಿಸ್‌ ಸಂಸ್ಥೆಯನ್ನು ಹೊಗಳಿದರು.

ಸಾಫ್ಟ್‌ವೇರ್‌ ಒಂದು ಜಾದೂ

ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುವುದು ಜಗತ್ತಿನಲ್ಲಿಯೇ ಅತ್ಯಂತ ರೋಮಾಂಚಕ ವ್ಯವಹಾರ ಎಂದು ಉದ್ಘರಿಸಿದ ಬಿಲ್‌ಗೇಟ್ಸ್‌, ಸಾಫ್ಟ್‌ವೇರ್‌ ಒಂದು ಮ್ಯಾಜಿಕ್‌ ಎಂದು ಬಣ್ಣಿಸಿದರು. ಪ್ರಸಕ್ತ ದಶಕದಲ್ಲಿಯೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿಂಜರಿತದಿಂದ ಭಾರತ ಹೊರಗೆ ಬರುವ ವಿಶ್ವಾಸ ತಮಗಿದೆ ಎಂದು ಗೇಟ್ಸ್‌, ಭಾರತೀಯ ಶಿಕ್ಷಣ ಕ್ರಮದಿಂದ ತಾವು ತೀವ್ರ ಪ್ರಭಾವಿತರಾಗಿರುವುದಾಗಿ ಹೇಳಿದರು.

ಪ್ರಸಕ್ತ ಭಾರತದಲ್ಲಿ 4 ಲಕ್ಷ ದಷ್ಟಿರುವ ಸಾಫ್ಟ್‌ವೇರ್‌ ಡೆವಲಪರ್ಸ್‌ ಸಂಖ್ಯೆ ್ಫಮುಂದಿನ ನಾಲ್ಕು ವರ್ಷಗಳಲ್ಲಿ 13 ಲಕ್ಷಕ್ಕೇರಲಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ನಾಸಕಾಮ್‌ ಅಧ್ಯಕ್ಷ ಕಿರಣ್‌ ಕಾರ್ನಿಕ್‌ ಹೇಳಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X