ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಕಾವಲು ಪಡೆಗೆ ಹೊಸ ವಾಹನ ಸೇರ್ಪಡೆ

By Staff
|
Google Oneindia Kannada News

* ಸದಾಶಿವ ಕೆ. ಮಂಗಳೂರು

ಮಂಗಳೂರು : ಬಹು ನಿರೀಕ್ಷೆಯ ‘ಕರಾವಳಿ ಕಾವಲಿನ ಫಾಸ್ಟ್‌ ಪೆಟ್ರೋಲ್‌ ವೆಸ್ಸೆಲ್‌’ನ್ನು ಕೇಂದ್ರ ರಕ್ಷಣಾ ಖಾತೆ ಸಚಿವ ಜಾರ್ಜ್‌ ಫರ್ನಾಂಡಿಸ್‌ ಸೋಮವಾರ (ನ.11) ದೇಶಕ್ಕೆ ಅರ್ಪಿಸಿದರು.

ಹತ್ತನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕರಾವಳಿ ರಕ್ಷಣೆ ಹಾಗೂ ರಕ್ಷಣಾ ಪಡೆಯನ್ನು ಬಲಪಡಿಸಲು ಹೆಚ್ಚಿನ ಒತ್ತು ಕೊಡಲಾಗುವುದು ಎಂದು ಪಣಂಬೂರಿನ ಬಂದರಿನಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಪಡೆ ವಾಹನವನ್ನು ದೇಶಕ್ಕೆ ಸಮರ್ಪಿಸಿದ ನಂತರ ಮಾತನಾಡಿದ ಜಾರ್ಜ್‌ ಫರ್ನಾಂಡಿಸ್‌ ಹೇಳಿದರು.

ದೇಶದ ಕರಾವಳಿಗೆ ಅಭದ್ರತೆ ಕಾಡುತ್ತಿದೆ. ಈ ಪ್ರದೇಶದಲ್ಲಿ ಕಳ್ಳಸಾಗಾಣಿಕೆ ಹಾಗೂ ಭಯೋತ್ಪಾದಕರ ಹಾವಳಿಯನ್ನು ತಡೆಗಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಕರಾವಳಿಯಲ್ಲಿ ಐದು ಕರಾವಳಿ ರಕ್ಷಣಾ ಕೇಂದ್ರಗಳನ್ನು ತೆರೆಯಲಾಗುವುದು ಎಂದ ಜಾರ್ಜ್‌ , ರಾಷ್ಟ್ರೀಯ ಸುರಕ್ಷೆಯಾಂದಿಗೆ ಯಾವುದೇ ರಾಜೀ ಮಾಡಿಕೊಳ್ಳದೇ ದುಡಿಯುತ್ತಿರುವ ಕರಾವಳಿ ರಕ್ಷಣಾ ಪಡೆಯನ್ನು ಅಭಿನಂದಿಸಿದರು.

ದೇಶದ ಬಂದರುಗಳಲ್ಲಿ ಹಡಗು ನಿರ್ಮಾಣದ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ ಎಂದು ಒತ್ತಿ ಹೇಳಿದ ರಕ್ಷಣಾ ಸಚಿವರು- ಅನಗತ್ಯವಾಗಿ ಹೆಚ್ಚುತ್ತಿರುವ ಹಡಗುಗಳ ನಿರ್ಮಾಣ ವೆಚ್ಚ ಅಂತಿಮವಾಗಿ ಸಾಮಾನ್ಯ ನಾಗರಿಕನಿಗೆ ಹೊರೆಯಾಗುತ್ತದೆ ಎಂದು ವಿಷಾದಿಸಿದರು.

ನೂತನ ಸರೋಜಿನಿ ನಾಯ್ಡು ಹಡಗು 48.14 ಮೀಟರ್‌ ಎತ್ತರವಾಗಿದ್ದು ಕರಾವಳಿ ಕಾವಲು ಪಡೆಗೆ ಅತ್ಯುಪಯುಕ್ತವಾಗಿದೆ ಎಂದು ಗೋವಾ ಬಂದರಿನ ಸಿಎಂಡಿ ಸಂದೀಪ್‌ ಪಿಳ್ಳೈ ತಮ್ಮ ಭಾಷಣದಲ್ಲಿ ತಿಳಿಸಿದರು. ಸ್ವದೇಶಿ ನಿರ್ಮಾಣವಾದ ಸರೋಜಿನಿ ಹಡಗು ಯುದ್ಧ ಸಮಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆಂದು ಅವರು ಅಭಿಪ್ರಾಯಪಟ್ಟರು.

ನಾಗಪ್ಪ ಬಿಡುಗಡೆಗೆ ಸಂಪೂರ್ಣ ನೆರವು
ಕಾಡುಗಳ್ಳ ವೀರಪ್ಪನ್‌ ಒತ್ತೆಯಾಳಾಗಿರುವ ಮಾಜಿ ಸಚಿವ ಎಚ್‌.ನಾಗಪ್ಪ ಅವರ ಬಿಡುಗಡೆಗೆ ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ನಾಗಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ದುದಿಗಾರರ ಪ್ರಶ್ನೆಗೆ ಜಾರ್ಜ್‌ ಫರ್ನಾಂಡಿಸ್‌ ಉತ್ತರಿಸಿದರು. ನಾಗಪ್ಪನವರ ಬಿಡುಗಡೆ ಸಂಬಂಧ ಮಧ್ಯ ಪ್ರವೇಶಿಸುವಂತೆ ಸಂಯುಕ್ತ ಜನತಾದಳ ಮುಖಂಡರು ತಮ್ಮನ್ನು ಭೇಟಿಯಾಗಿ ಕೋರಿದ್ದಾರೆ ಎನ್ನುವ ಸುದ್ದಿಗಳನ್ನು ತಳ್ಳಿಹಾಕಿದ ಜಾರ್ಜ್‌, ರಂಜಾನ್‌ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕದನ ವಿರಾಮ ಘೋಷಿಸುವ ಕುರಿತು ಕೇಂದ್ರ ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ ಎಂದರು.

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X