• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೀರ ಸಾಗರ ಅವ್ಯವಹಾರದಲ್ಲಿ ಕೃಷ್ಣ ಪಾತ್ರ’

By Staff
|

ಬೆಂಗಳೂರು : ಕಾವೇರಿ ನೀರಿನ ಸಮಸ್ಯೆಯಲ್ಲಿ ಮುಖಕ್ಕೆ ಬಳಿದುಕೊಂಡಿರುವ ರಾಡಿ ಮಾಸುವ ಮುನ್ನವೇ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮೇಲೆ ಇನ್ನೊಂದು ನೀರಿನ ಅಲೆ ಎರಗಿದೆ !

ಈಗ ಕೃಷ್ಣ ಮೇಲೆ ಅಂಬೆಸೆಯುವ ಪಾಳಿ ಅವಳಿ ನಗರದ್ದು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೌಕರರ ಸಂಘ ಹೊರಡಿಸಿರುವ ಪ್ರಕಟಣೆಯಲ್ಲಿ ಕೃಷ್ಣ ಮೇಲೆ ದೂರನ್ನು ಹರಿಸಿದೆ. ಹುಬ್ಬಳ್ಳಿ- ಧಾರವಾಡ ನಗರಗಳಿಗೆ ನೀರು ಒದಗಿಸುವ ‘ನೀರ ಸಾಗರ’ ಜಲಾಶಯದ ಹೂಳೆತ್ತುವ ವಿಷಯದಲ್ಲಿ ನಡೆದಿರುವ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಕೃಷ್ಣ ಪಾತ್ರವೂ ಇದೆ ಅನ್ನುವುದು ಸಂಘದ ಆರೋಪ.

ಸುಮಾರು 3 ಕೋಟಿ ರುಪಾಯಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಮಾಜಿ ಸಚಿವ ಹಿಂಡಸಗೇರಿ ಮತ್ತು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಶ್ರೀನಿವಾಸ ರೆಡ್ಡಿ ಕೂಡ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ನಿಯಮದಂತೆ ಟೆಂಡರ್‌ ಕರೆಯದೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಸ್‌ಸಿಎಲ್‌ ಕಂಪನಿಗೆ ಹೂಳೆತ್ತುವ ಕಾಮಗಾರಿಯ ಗುತ್ತಿಗೆ ನೀಡಿದ್ದು, ಅದರ ಉಪ ಗುತ್ತಿಗೆಯನ್ನು ಮುಖ್ಯಮಂತ್ರಿಗಳು ತಮ್ಮ ಸೋದರ ಶಂಕರ್‌ ಅವರ ಸಂಬಂಧಿಗೆ ಕೊಟ್ಟಿದ್ದಾರೆ. ಇಡೀ ಗುತ್ತಿಗೆಯಲ್ಲಿ ಕನಿಷ್ಠ 3 ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೌಕರರ ಸಂಘ ನೇರವಾಗಿ ಆರೋಪಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more