• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಬಿಲ್‌ಗೇಟ್ಸ್‌ , ಏಡ್ಸ್‌ ನಿಯಂತ್ರಣಕ್ಕೆ 100 ಮಿ.ಡಾಲರ್‌

By Staff
|

Bill Gates IT global giant, Microsoft Chairmanನವದೆಹಲಿ: ಭಾರತದಲ್ಲಿ ಹರಡುತ್ತಿರುವ ಏಡ್ಸ್‌ ನಿಯಂತ್ರಣಕ್ಕಾಗಿ ‘ದ ಬಿಲ್‌ ಆ್ಯಂಡ್‌ ಮಿಲಿಂದಾ ಗೇಟ್ಸ್‌ ಪ್ರತಿಷ್ಠಾನ’ವು 100 ಮಿಲಿಯನ್‌ ಡಾಲರ್‌ ನೆರವು ಘೋಷಿಸಿದೆ.

ಭಾರತದಲ್ಲಿ ತ್ವರಿತವಾಗಿ ಹಬ್ಬುತ್ತಿರುವ ಏಡ್ಸ್‌ ನಿಯಂತ್ರಣಕ್ಕಾಗಿ ‘ಇಂಡಿಯಾ ಏಡ್ಸ್‌ ಇನಿಷಿಯೇಟಿವ್‌’ ಎಂಬ ಹೊಸ ಪ್ರಯತ್ನವನ್ನು ಆರಂಭಿಸಲಾಗುವುದು. ಈ ಹೊಸ ಪ್ರಯತ್ನದಡಿಯಲ್ಲಿ ದೇಶಾದ್ಯಂತ ಏಡ್ಸ್‌ ಪೀಡಿತರಿಗೆ ನೆರವಾಗುವ ಹಾಗೂ ಏಡ್ಸ್‌ ಬಗ್ಗೆ ಸಾಮಾಜಿಕ ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸೋಮವಾರ (ನ.11) ಬೆಳಗ್ಗೆ ಭಾರತಕ್ಕೆ ಆಗಮಿಸಿದ ಮೈಕ್ರೋಸಾಫ್ಟ್‌ ಮುಖ್ಯಸ್ಥ , ಐಟಿ ದಿಗ್ಗಜ ಬಿಲ್‌ ಗೇಟ್ಸ್‌ ತಿಳಿಸಿದರು. ಇದು ಐದು ವರ್ಷಗಳಲ್ಲಿ ಗೇಟ್ಸ್‌ ಅವರ ಮೂರನೇ ಭಾರತ ಭೇಟಿಯಾಗಿದೆ.

ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಸೋಮವಾರ ಭೇಟಿ ಮಾಡಿದ ಬಿಲ್‌ ಗೇಟ್ಸ್‌ ಪ್ರತಿಷ್ಠಾನದ ಬಗ್ಗೆ ಪ್ರಧಾನಿ ವಾಜಪೇಯಿ ಅವರಿಗೆ ವಿವರಿಸಿದರು.

ಭಾರತದಲ್ಲಿ ಗೇಟ್ಸ್‌ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ಬಗ್ಗೆ, ಅದರಲ್ಲಿಯೂ ಏಡ್ಸ್‌ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿರುವುದನ್ನು ಪ್ರಧಾನಿಗೆ ತಿಳಿಸಿದೆವು. ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳನ್ನು ಪ್ರಧಾನಿ ಶ್ಲಾಘಿಸಿದರು ಎಂದು ಪ್ರಧಾನಿ ಭೇಟಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೇಟ್ಸ್‌ ಹೇಳಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X