ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಗೆ ದಿನಕ್ಕೆ 5 ಲಕ್ಷ ರು. ನಷ್ಟ

By Staff
|
Google Oneindia Kannada News

ಬೆಂಗಳೂರು : ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ರದ್ದಾಗಿರುವ ರೈಲು ಸಂಚಾರದಿಂದ ರೈಲ್ವೆ ಇಲಾಖೆಗೆ ದಿನಕ್ಕೆ ಕನಿಷ್ಠ 5 ಲಕ್ಷ ರುಪಾಯಿ ನಷ್ಟವಾಗಿದೆ.

ರೈಲ್ವೆ ಇಲಾಖೆ ಕೊಟ್ಟಿರುವ ಮಾಹಿತಿಯಂತೆ...

  • ಬೆಂಗಳೂರು ಮೈಸೂರು ನಡುವೆ ದಿನಕ್ಕೆ 12 ರೈಲುಗಳು ಓಡಾಡುತ್ತವೆ. ಈ ಪೈಕಿ 6 ಪ್ಯಾಸೆಂಜರ್‌ ಹಾಗೂ 2 ಎಕ್ಸ್‌ಪ್ರೆಸ್‌ ರೈಲುಗಳು ಬೆಂಗಳೂರು- ಮೈಸೂರು ನಡುವೆ ಮಾತ್ರ ಸಂಚರಿಸುತ್ತವೆ. ಉಳಿದಂತೆ ಚೆನ್ನೈ ಹಾಗೂ ತಿರುಪತಿಗೆ ಮೈಸೂರಿನಿಂದ ಹೋಗುವ ರೈಲುಗಳು ಬೆಂಗಳೂರಿನ ಮೂಲಕ ಹಾದು ಹೋಗುತ್ತವೆ. ಈ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಿರುವುದರಿಂದ ರೈಲ್ವೆ ಇಲಾಖೆಗೆ ದಿನಕ್ಕೆ 5 ಲಕ್ಷ ರುಪಾಯಿ ಲುಕಸಾನಾಗುತ್ತಿದೆ.
  • ಈ ಎಲ್ಲಾ ರೈಲುಗಳ ಸಂಚಾರ ನಿಂತಿರುವುದರಿಂದ 10 ಸಾವಿರ ಪ್ರಯಾಣಿಕರಿಗೆ ನಿತ್ಯವೂ ತೊಂದರೆಯಾಗುತ್ತಿದೆ.
  • ಬೆಂಗಳೂರಿನ ಮೂಲಕ ಮೈಸೂರಿನಿಂದ ದೆಹಲಿಗೆ ಹೋಗುವ ಸ್ವರ್ಣಜಯಂತಿ ಎಕ್ಸ್‌ಪ್ರೆಸ್‌ ರೈಲನ್ನು ಈಗ ಹಾಸನ- ಅರಸೀಕೆರೆ ಮೂಲಕ ಓಡಿಸಲಾಗುತ್ತಿದೆ. ಇದರಿಂದ ಇಲಾಖೆಗೆ ಹೆಚ್ಚುವರಿ ಖರ್ಚು ತಗಲುತ್ತಿದೆ.
  • ಸೀಸನ್‌ ಟಿಕೇಟು ಪಡೆದ ಪ್ರಯಾಣಿಕರಿಗೆ ತಮ್ಮ ಹಣವನ್ನೂ ವಾಪಸ್ಸು ಪಡೆಯುವ ವ್ಯವಸ್ಥೆಯಿಲ್ಲ. ಹೀಗಾಗಿ ಟಿಕೇಟಿನ ಮೇಲೆ ಅವರು ಹಾಕಿರುವ ದುಡ್ಡು ವೇಸ್ಟಾಗಿದೆ.
  • (ಇನ್ಫೋ ವಾರ್ತೆ)

    ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X